ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿದ ಮತಾಂಧರ ವಿರುದ್ಧ ದೂರು ದಾಖಲು

ಮಂಗಳೂರಿನಲ್ಲಿನ ಘಟನೆ

ಮಂಗಳೂರು – ಹಿಂದೂ ಯುವತಿಯೊಬ್ಬಳನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ ಪ್ರಕರಣದಲ್ಲಿ ಮತಾಂಧ ಮಹಿಳಾ ವೈದ್ಯೆ ಸೇರಿದಂತೆ ಮೂವರು ಮತಾಂಧರ ವಿರುದ್ಧ ದೂರು ದಾಖಲಾಗಿದೆ.

೧. ಮಾಧ್ಯಮದ ವರದಿ ಪ್ರಕಾರ, ಸಂತ್ರಸ್ತೆ ತನ್ನ ಸಂಚಾರವಾಣಿಗೆ ರೀಚಾರ್ಜ್ ಮಾಡಲು ಖಲೀಲ ಎಂಬ ಮತಾಂಧನ ಅಂಗಡಿಗೆ ಹೋಗುತ್ತಿದ್ದಳು. ಖಲೀಲ ಅವಳೊಂದಿಗೆ ಸ್ನೇಹ ಬೆಳೆಸಿದನು ಮತ್ತು ಅವಳಿಗೆ ಉತ್ತಮ ಸಂಬಳದ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದನು.

೨. ಖಲೀಲ ಅವಳ ಹೆಸರನ್ನು ಆಯಿಷಾ ಎಂದು ಬದಲಾಯಿಸಿದನು. ಅವಳಿಗೆ ಬಲವಂತವಾಗಿ ನಮಾಜ್ ಮತ್ತು ಕುರಾನ ಅನ್ನು ಓದಲು ಅನಿವಾರ್ಯಗೊಳಿಸಿದ. ಖಲೀಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು.

೩. ಖಲೀಲ ಕೆಲಸದ ನೆಪ ಹೇಳಿ ಸಂತ್ರಸ್ತ ಯುವತಿಯನ್ನು ಡಾ. ಜಮೀಲಾ ಅವರ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಅವಳಿಗೆ ಬುರ್ಖಾ ಧರಿಸುವಂತೆ ಬಲವಂತ ಮಾಡಲಾಯಿತು. ಅಲ್ಲಿ, ಆಯಮನ ಎಂಬ ಮತಾಂಧನು ಅವಳನ್ನು ಇಂಸ್ಟಾಗ್ರಾಮನಲ್ಲಿ ಸಂಪರ್ಕಿಸಿದನು ಮತ್ತು ಅವಳೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದನು.

೪. ಸಂತ್ರಸ್ತ ಯುವತಿಯ ತಾಯಿಯು, ಖಲೀಲ, ಡಾ. ಜಮೀಲಾ ಮತ್ತು ಆಯಮನ ವಿರುದ್ಧ ಪೊಲೀಸ ದೂರು ದಾಖಲಿಸಿದರು. ’ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.