ತಮಿಳುನಾಡಿನ ಹಾಲಿ ಮತ್ತು ಮಾಜಿ ಮುಸಲ್ಮಾನ ಡಿಎಂಕೆ ಕಾರ್ಪೊರೇಟರ್‌ಗಳಿಂದ 360 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥ ವಶ

(ದ್ರಮುಕ ಎಂದರೆ ದ್ರಾವಿಡ ಮುನ್ನೇಟ್ರ ಕಳಗಂ – ದ್ರಾವಿಡ ಪ್ರಗತಿ ಸಂಘ)

ರಾಮನಾಥಪುರಂ (ತಮಿಳುನಾಡು) – ಕೊಕೇನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕರಾವಳಿ ಪೊಲೀಸರು ಡಿಎಂಕೆಯ ಕೀಝಾಕರೈ ಪುರಸಭೆಯ ಕಾರ್ಪೊರೇಟರ್ ಸರಬರಾಜ ಮತ್ತು ಮಾಜಿ ಕಾರ್ಪೊರೇಟರ್ ಆಗಿರುವ ಅವರ ಸಹೋದರ ಜೈನುದ್ದೀನ ಅವರನ್ನು ಬಂಧಿಸಿದ್ದಾರೆ. ಅವರ ವಾಹನದಿಂದ 360 ಕೋಟಿ ರೂಪಾಯಿ ಮೌಲ್ಯದ ಕೊಕೇನ ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ತಮ್ಮ ಬಳಿಯಿದ್ದ ಕೊಕೇನ್ ಅನ್ನು ಮೀನುಗಾರಿಕಾ ದೋಣಿಯಲ್ಲಿ ಶ್ರೀಲಂಕಾಕ್ಕೆ ಕಳುಹಿಸುವ ಸಿದ್ಧತೆಯಲ್ಲಿದ್ದರು. ಸಾದಿಕ ಅಲಿ ಅವರ ದೋಣಿಯಿಂದ ಕೊಕೇನ ಅನ್ನು ರವಾನಿಸುವುದಿತ್ತು. ಈ ಇಬ್ಬರು ಸಹೋದರರು ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆದಾರರ ಗುಂಪಿನೊಂದಿಎಗೆ ಸಂಬಂಧ ಹೊಂದಿದ್ದಾರೆಯೇ ? ಎಂಬುವ ಬಗ್ಗೆ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಸಂಪಾದಕೀಯ ನಿಲುವು

ಸೌದಿ ಅರೇಬಿಯಾದಲ್ಲಿ, ಇಂತಹ ಅಪರಾಧದ ಸಂದರ್ಭದಲ್ಲಿ ಗಲ್ಲು ಶಿಕ್ಷೆ ನೀಡಲಾಗುತ್ತಿದ್ದರೇ ಭಾರತದಲ್ಲಿಯೂ ಹೀಗಾಗಬೇಕು !