ಅನಾರೋಗ್ಯ ಮಹಿಳೆಯು ಕೇವಲ ಸಸ್ಯಹಾರಿಯಾಗಿರುವುದರಿಂದ ಅವಳ ಔಷಧೋಪಚಾರಗಳ ವೆಚ್ಚವನ್ನು ತುಂಬಿಸಲು ವಿಮಾ ಸಂಸ್ಥೆಯಿಂದ ನಿರಾಕರಣೆ !

ವೆಚ್ಚವನ್ನು ನೀಡುವಂತೆ `ಗ್ರಾಹಕರ ಹಕ್ಕು ರಕ್ಷಣೆಯ ಜಿಲ್ಲಾ ಸಮಿತಿ’ ಯಿಂದ ಸಂಸ್ಥೆಗೆ ಆದೇಶ !

ಕರ್ಣಾವತಿ (ಗುಜರಾತ) – `ನೀವು ಸಸ್ಯಹಾರಿಯಾಗಿದ್ದರಿಂದ ಅನಾರೋಗ್ಯಕ್ಕೀಡಾದರೇ, ಔಷಧೋಪಚಾರಕ್ಕಾಗಿ ವೆಚ್ಚವನ್ನು ಕೋರಿದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ’, ಎಂದು `ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್’ ಸಂಸ್ಥೆಯು ಹೇಳಿದೆ; ಆದರೆ `ಗ್ರಾಹಕರ ಹಕ್ಕು ರಕ್ಷಣೆ ಜಿಲ್ಲಾ ಸಮಿತಿ’ಯು ಈ ವಿಮಾ ಸಂಸ್ಥೆಯ ಹೇಳಿಕೆಯನ್ನು ತಿರಸ್ಕರಿಸಿತು ಹಾಗೂ ಅನಾರೋಗ್ಯ ವ್ಯಕ್ತಿಗೆ ಬಡ್ಡಿಸಹಿತ ವೆಚ್ಚವನ್ನು ನೀಡುವಂತೆ ಆದೇಶ ನೀಡಿತು. ಈ ಸಂದರ್ಭದಲ್ಲಿ ಮಿತಾಲಿ ಠಕ್ಕರ ಹೆಸರಿನ ಮಹಿಳೆಯು ಕರ್ಣಾವತಿಯಲ್ಲಿ `ಗ್ರಾಹಕರ ಹಕ್ಕು ರಕ್ಷಣೆಯ ಜಿಲ್ಲಾ ಸಮಿತಿ’ ಯಲ್ಲಿ ದೂರು ದಾಖಲಿಸಿದ್ದರು.

೧. ಮಿತಾಲಿಯವರ ವೈದ್ಯಕೀಯ ವರದಿಯನುಸಾರ `ವಿಟಮಿನ ಬಿ 12’ ನ್ಯೂನ್ಯತೆಯಿಂದ ಅವರಿಗೆ ಈ ತೊಂದರೆಯನ್ನು ಎದುರಿಸಬೇಕಾಯಿತು. ಸಸ್ಯಹಾರಿಯಾಗಿದ್ದರಿಂದ ಅವರ ಶರೀರದಲ್ಲಿ `ಬಿ 12’ ನ್ಯೂನ್ಯತೆ ಬಹಳ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿತ್ತು.

೨. `ಗ್ರಾಹಕರ ಹಕ್ಕು ರಕ್ಷಣೆ ಜಿಲ್ಲಾ ಸಮಿತಿ’ಯು ಇದರ ಬಗ್ಗೆ ಆಲಿಕೆ ಮಾಡುವಾಗ, ಸಸ್ಯಹಾರಿ ಜನರಲ್ಲಿ `ವಿಟಮಿನ ಬಿ 12’ ನ್ಯೂನ್ಯತೆ ಇರಬಹುದು; ಆದರೆ ಇದರಿಂದ ಮಿತಾಲಿಯವರಿಗೆ ತೊಂದರೆಯಾಗಿದ್ದರೆ, ಅದರಲ್ಲಿ ಅವರ ತಪ್ಪಿಲ್ಲ. ವಿಮಾ ಸಂಸ್ಥೆಯು ಅವರು ನೀಡಬೇಕಾಗಿರುವ 1 ಲಕ್ಷ ರೂಪಾಯಿಗಳ ಆಸ್ಪತ್ರೆಯ ವೆಚ್ಚವನ್ನು ಬಡ್ಡಿಯೊಂದಿಗೆ ಭರಿಸಬೇಕು ಎಂದು ಆದೇಶಿಸಿತು. ಇದರೊಂದಿಗೆ ಮಿತಾಲಿ ಠಕ್ಕರ ಇವರಿಗೆ ಆಗಿರುವ ಮಾನಸಿಕ ತೊಂದರೆ ಮತ್ತು ನ್ಯಾಯಾಲಯದ ವೆಚ್ಚವನ್ನು ಕೂಡ ವಿಮಾ ಸಂಸ್ಥೆಯು ಬಡ್ಡಿಯೆಂದು ನೀಡಲಾಗಿರುವ ಹಣದಲ್ಲಿ ಭರಿಸಬೇಕೆಂದು ಅದರಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಮಾಂಸಾಹಾರದಿಂದ ಯಾರಾದರೂ ಅನಾರೋಗ್ಯಗೀಡಾದರೇ, ವಿಮಾ ಸಂಸ್ಥೆ ಇದೇ ರೀತಿ ಕ್ರಮ ಕೈಗೊಳ್ಳುತ್ತಿತ್ತೇ ?