ಬಳ್ಳಾರಿ ಇಲ್ಲಿಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿಯು ಹುದ್ದೆ ಸ್ವೀಕರಿಸುವಾಗ ಪಾದ್ರಿಗೆ ಕರೆಸಿ ಧರ್ಮೋಪದೇಶ ಮಾಡಿಸಿಕೊಂಡರು !

ಶಿಕ್ಷಣ ಇಲಾಖೆಯಿಂದ ಸ್ಪಷ್ಟೀಕರಣ ನೀಡುವಂತೆ ಆದೇಶ

ಬಳ್ಳಾರಿ – ಇಲ್ಲಿಯ ಸರಕಾರಿ ಗರ್ಲ್ಸ್ ಹೈಸ್ಕೂಲಿನ ಹಿಂದಿ ವಿಷಯದ ಶಿಕ್ಷಕಿ ಜಾಯ್ ಡಿಬೋರಾ ಇವರು ಮುಖ್ಯೋಪಾಧ್ಯಾಯರ ಹುದ್ದೆಯನ್ನು ಸ್ವೀಕರಿಸುವಾಗ ಚರ್ಚನ ಪಾದ್ರಿಗೆ ಕರೆಸಿ ಬೈಬಲ್ ಗ್ರಂಥ ಇಟ್ಟು ಧರ್ಮೋಪದೇಶ ಮಾಡಿಸಿದರು. ಜೊತೆಗೆ ಮುಖ್ಯೋಪಾಧ್ಯಾಯನಿ ತಮ್ಮ ಕುರ್ಚಿಯ ಮೇಲೆ ಪಾದ್ರಿಗೆ ಕೂಡಿಸಿದರು. ಈ ಘಟನೆಗೆ ಈಗ ವಿರೋಧವಾಗುತ್ತಿದೆ. ಶಾಲೆಯಲ್ಲಿನ ಕೆಲವು ಶಿಕ್ಷಕರು ಮತ್ತು ಸ್ಥಳೀಯ ನಾಗರೀಕರು ಇವರು ಈ ಶಿಕ್ಷಕಿಯ ವಿರುದ್ಧ ಶಿಕ್ಷಣ ಸಚಿವರ ಸಹಿತ ಅನೇಕರ ಬಳಿ ದೂರು ನೀಡಿದ್ದಾರೆ. ಇದರ ಬಗ್ಗೆ ಶಿಕ್ಷಣ ಇಲಾಖೆಯಿಂದ ಜಾಯ ಡಿಬೋರಾ ಇವರಿಗೆ ಲಿಖಿತವಾಗಿ ಸ್ಪಷ್ಟೀಕರಣ ನೀಡಲು ಹೇಳಲಾಗಿದೆ.

ಜಾಯ್ ಡಿಬೋರಾ ಇವರು ಆರೋಪ ತಳ್ಳಿ ಹಾಕಿದ್ದಾರೆ !

ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಮುಖ್ಯೋಪಾಧ್ಯಾಯನಿ ಜಾಯ ಡಿಬೋರ ಇರು, ಪಾದ್ರಿ ಬಂದಿರುವುದು ಇದು ಸತ್ಯ, ಅವರು ನನ್ನ ಸಹೋದರ ಆಗಿದ್ದಾರೆ, ಹುದ್ದೆ ಸ್ವೀಕಾರ ಮಾಡುವ ಸಮಾರಂಭಕ್ಕೆ ಶುಭಾಶಯ ನೀಡಲು ಅವರು ಬಂದಿದ್ದರು; ಆದರೆ ಅವರು ಶಾಲೆಯಲ್ಲಿನ ಶಿಕ್ಷಕರಿಗೆ ಧರ್ಮೋಪದೇಶ ಮಾಡಲಿಲ್ಲ ಮತ್ತು ಬೈಬಲ್ ಗ್ರಂಥ ಇಟ್ಟು ಪ್ರಾರ್ಥನೆ ಕೂಡ ಮಾಡಲಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ !