ಉಡುಪಿಯಲ್ಲಿ ಮುಸಲ್ಮಾನ ವಿದ್ಯಾರ್ಥಿಗೆ `ಭಯೋತ್ಪಾದಕ’ ಎಂದು ಹೇಳಿದ ಶಿಕ್ಷಕ ಅಮಾನತು !

ಉಡುಪಿ – ಇಲ್ಲಿ ಮುಸಲ್ಮಾನ ವಿದ್ಯಾರ್ಥಿಯನ್ನು ಜಿಹಾದಿ ಭಯೋತ್ಪಾದಕ ಕಸಬ ಜೊತೆ ಹೋಲಿಸಿದ ಪ್ರಕರಣದಲ್ಲಿ `ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕರು ವಿದ್ಯಾರ್ಥಿಗೆ ಅವನ ಹೆಸರು ಕೇಳಿದರು. ಆಗ ವಿದ್ಯಾರ್ಥಿ ಹೆಸರು ಹೇಳಿದ ನಂತರ, `ಹೇ’ , ನೀನು ಕಸಬ ಹಾಗೆ ಇರುವೆ,’ ಎಂದು ಹೇಳಿದಾಗ ವಿದ್ಯಾರ್ಥಿಗೆ ಬಹಳ ಸಿಟ್ಟು ಬಂತು.

ಶಿಕ್ಷಕ ಮತ್ತು ಮುಸಲ್ಮಾನ ವಿದ್ಯಾರ್ಥಿ ಇವರಲ್ಲಿನ ಸಂಭಾಷಣೆ !

೧ . ಶಿಕ್ಷಕನು `ಕಸಬ’ನ ಪ್ರತಿಕ್ರಿಯೆ ನಂತರ ವಿದ್ಯಾರ್ಥಿ, “೨೬/೧೧ ಇದು ತಮಾಷೆ ಮಾಡುವ ವಿಷಯವಲ್ಲ. ಈ ದೇಶದಲ್ಲಿ ಮುಸಲ್ಮಾನರಿರುವರು ಮತ್ತು ಇಂತಹ ವಿಷಯಗಳು ಪ್ರತಿ ದಿನ ಕೇಳುವುದು ಇದು ಒಂದು ತಮಾಷೆಯಲ್ಲ. ನೀವು ನನ್ನ ಧರ್ಮದ ಬಗ್ಗೆ ತಮಾಷೆ ಮಾಡಲು ಸಾಧ್ಯವಿಲ್ಲ ! ಇದು ತಮಾಷೆ ಅಲ್ಲ ! ಎಂದು ಹೇಳಿದನು. (ಮುಸಲ್ಮಾನ ವಿದ್ಯಾರ್ಥಿಯ ಹಾಗೆ ಎಷ್ಟು ಹಿಂದೂ ವಿದ್ಯಾರ್ಥಿಗಳಲ್ಲಿ ಧರ್ಮಾಭಿಮಾನ ಇದೆ ? ಹಿಂದೂಗಳಲ್ಲಿ ಧರ್ಮಾಭಿಮಾನ ಇಲ್ಲದ್ದರಿಂದ, ಇಂದು ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲೂ ಹಿಂದುಗಳಿಗೆ ಯಾವುದೇ ಗೌರವ ಇಲ್ಲ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು ) (ನವಂಬರ ೨೬, 2008 ರಂದು ಮುಂಬಯಿಯಲ್ಲಾದ ವಿವಿಧ ಸ್ಥಳದಲ್ಲಿ ಉಗ್ರರ ದಾಳಿಯಿಂದ ೧೬೬ ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಭದ್ರತಾ ಪಡೆಯು `ಕಸಬ’ ಈ ಪಾಕಿಸ್ತಾನದ ಉಗ್ರನನ್ನು ಬಂಧಿಸಿದ್ದರು.)

೨. ಈ ಬಗ್ಗೆ ಶಿಕ್ಷಕ ಆ ಮುಸಲ್ಮಾನ ವಿದ್ಯಾರ್ಥಿಗೆ, `ನೀನು ನನ್ನ ಮಗನ ಹಾಗೆ ಇರುವೆ ಎಂದು ಹೇಳಿದರು !

೩. ಆಗ ವಿದ್ಯಾರ್ಥಿ, `ನಾನು ನಿಮ್ಮ ಮಗನ ಹಾಗೆ ಇರುವುದು ಎಂದು ಅನಿಸಿದರೆ ನೀವು ನಿಮ್ಮ ಮಗನನ್ನು ಉಗ್ರನ ಹೆಸರಿನಿಂದ ಕರೆಯುತ್ತಿದ್ದರೆ ? ಅದು ಕೂಡ ಇಷ್ಟು ಜನರ ಮುಂದೆ ? ನೀವು ಉದ್ಯೊಗದಲ್ಲಿ ಶಿಕ್ಷಕರಾಗಿದ್ದೀರಿ.’ ನಂತರ ಶಿಕ್ಷಕರು ಅವನ ಕ್ಷಮೆ ಕೇಳಿದರು.

೪. ಆಗ ವಿದ್ಯಾರ್ಥಿ, ಕ್ಷಮೆ ಕೇಳುವುದರಿಂದ ನಿಮ್ಮ ವಿಚಾರಧಾರೆ ಬದಲಾಗುವುದಿಲ್ಲ ಹಾಗೂ ನಿಮ್ಮ ವರ್ತನೆ ಬದಲಾಗುವುದಿಲ್ಲ ? ಎಂದು ಕೇಳಿದನು. (ಹಿಂದೂ ವಿದ್ಯಾರ್ಥಿಗಳೇ, ಇಂತಹ ಧರ್ಮಾಭಿಮಾನ ನಿಮ್ಮಲ್ಲಿ ಇದೆಯೇ ?, ಇದನ್ನು ಅಂತರ್ಮುಖರಾಗಿ ಯೋಚನೆ ಮಾಡಿರಿ ! – ಸಂಪಾದಕರು)

ಈ ಸಂಭಾಷಣೆಯ ವಿಡಿಯೋ ಹೆಚ್ಚಿನ ಮಟ್ಟದಲ್ಲಿ ಪ್ರಸಾರಗೊಂಡ ನಂತರ ಸಂಸ್ಥೆಯು ಶಿಕ್ಷಕರಿಗೆ ಅಮಾನತುಗೊಳಿಸಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಸಂಸ್ಥೆಯು, ನಾವು ಈ ರೀತಿಯ ವರ್ತಿಸುವವರಿಗೆ ಕ್ಷಮೆ ನೀಡುವುದಿಲ್ಲ, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಯಾವುದೇ ಭಾರತೀಯ ನಾಗರೀಕನನ್ನು ಅವನ ಧರ್ಮದ ಗುರುತಿನ ಮೇಲೆ ಕೆಸರೆರಚ್ಚುವುದು ಅಯೋಗ್ಯವಾಗಿದೆ. ಹೀಗೆ ಇದ್ದರೂ ಕೂಡ ಈ ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆ ಪ್ರತಿದಿನ ನೋವನ್ನುಂಟು ಮಾಡಲಾಗುತ್ತಿರುವಾಗ ಹಾಗೂ ಅವರ ವಿರುದ್ಧ ಹತ್ಯೆಯ ಫತ್ವ ತೆಗೆಯುತ್ತಿರುವಾಗ ಯಾವುದೇ ನಿಖರ ಕ್ರಮ ಕೈಗೊಳ್ಳುವುದು ಕಾಣುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !