ದೆಹಲಿಯಲ್ಲಿ ಆಫತಾಬನನ್ನು ಕೊಲ್ಲುವ ಪ್ರಯತ್ನ

ನವದೆಹಲಿ – ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ (ವ್ಯಕ್ತಿ ನಿಜ ಹೇಳುತ್ತಿದ್ದಾನೆ ಅಥವಾ ಸುಳ್ಳು ಇದನ್ನು ಪರೀಕ್ಷಿಸುವುದು) ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು. ಇಲ್ಲಿ ಪೊಲೀಸರ ವ್ಯಾನಿನಲ್ಲಿ ಅಫತಾಬನನ್ನು ಕರೆದುಕೊಂಡು ಹೋಗಲಾಗುತ್ತಿತ್ತು, ಆಗ ಈ ವ್ಯಾನ್ ನಿಲ್ಲಿಸಿ ಒಳಗಿರುವ ಅಫತಾಬನನ್ನು ಕೊಲ್ಲಲು ೩ ಜನ ಬಂದಿದ್ದರು. ಅವರ ಕೈಯಲ್ಲಿ ಖಡ್ಗ ಇದ್ದವು. ಪೊಲೀಸರು ಅವರನ್ನು ತಕ್ಷಣ ತಡೆದು ಅವರನ್ನು ವಶಕ್ಕೆ ಪಡೆದರು.

`ನಮ್ಮ ಸಹೋದರಿಯರು ಸುರಕ್ಷಿತವಾಗಿಲ್ಲ ನಾವು ಜೀವಂತವಾಗಿ ಇದ್ದು ಏನು ಪ್ರಯೋಜನ ? ನಮ್ಮ ಸಹೋದರಿಯರ ಹತ್ಯೆ ಮಾಡುವವರನ್ನು ನಾವು ಕೊಲ್ಲುವೆವು, ಖಡ್ಗ ಇಲ್ಲದಿದ್ದರೆ, ಗುಂಡು ಹಾರಿಸಿ’ ಎಂದು ದಾಳಿ ಮಾಡುವವರು ಹೇಳುತ್ತಿದ್ದರು. ಅವರು ನಾವು ಹಿಂದೂ ಸೇನೆಯ ಕಾರ್ಯಕರ್ತರು ಎಂದು ಹೇಳಿದ್ದಾರೆ.