ಮೈಸೂರಿನಲ್ಲಿ ಭಾಜಪದ ಸಂಸದರ ಎಚ್ಚರಿಕೆಯ ನಂತರ ಬಸ್ ನಿಲ್ದಾಣದ ಮೇಲೆನ ಗುಮ್ಮಟಗಳು ತೆರೆವುಗೊಳಿಸಲಾಗಿದೆ

ಬಸ್ ನಿಲ್ದಾಣದ ಕಟ್ಟಡ ಮಸೀದಿಯಂತೆ ಕಟ್ಟಿದ್ದರಿಂದ ವಿವಾದ

ಮೈಸೂರು – ಭಾಜಪದ ಸಂಸದರಾದ ಪ್ರತಾಪ ಸಿಂಹ ಇವರು ನೀಡಿದ್ದ ಎಚ್ಚರಿಕೆಯ ನಂತರ ಮೈಸೂರು-ಉಟಿ ರಸ್ತೆಯಲ್ಲಿರುವ ಮಸೀದಿ ಹಾಗೆ ಕಾಣುವ ಬಸ್ ನಿಲ್ದಾಣದಲ್ಲಿನ ವಿವಾದಾಸ್ಪದ ಗುಮ್ಮಟಗಳು ಅಂತಿಮವಾಗಿ ನವೆಂಬರ್ ೨೭ ರಂದು ತೆರೆವು ಗೊಳಿಸಲಾಯಿತು. ಈ ಬಸ್ ನಿಲ್ದಾಣದ ಮೇಲೆ ಮಧ್ಯಭಾಗದಲ್ಲಿ ಒಂದು ದೊಡ್ಡ ಮತ್ತು ಅದರ ಪಕ್ಕದಲ್ಲಿ ಎರಡು ಚಿಕ್ಕ ಹೀಗೆ ಒಟ್ಟು ೩ ಗುಮ್ಮಟಗಳು ಇದ್ದವು. ಆದ್ದರಿಂದ `ಈ ಬಸ್ ನಿಲ್ದಾಣ ಮಸೀದಿಯ ಹಾಗೆ ಬಾಸವಾಗುತ್ತಿದ್ದು ಈ ಗುಮ್ಮಟಗಳು ತೆರವುಗೊಳಿಸದಿದ್ದರೆ ನಾನು ಬುಲ್ಡೋಜರ್ ನಿಂದ ಅದನ್ನು ನೆಲಸಮ ಮಾಡುವೆ’ ಎಂದು ನವಂಬರ್ ೧೪ ರಂದು ಸಿಂಹ ಅವರು ಎಚ್ಚರಿಕೆ ನೀಡಿದ್ದರು.

ಈ ಗುಮ್ಮಟ ತೆರವುಗೊಳಿಸಿದ ನಂತರ ಸಿಂಹ ಇವರು, “ಅಕ್ಕ ಪಕ್ಕದ ಚಿಕ್ಕದು ಮತ್ತು ಮಧ್ಯ ಭಾಗದ ದೊಡ್ಡ ಗುಮ್ಮಟ ಇದ್ದರೆ ಆ ವಾಸ್ತು ಮಸೀದಿ ಎನ್ನಲಾಗುತ್ತದೆ. ಆದ್ದರಿಂದ ಈ ಚಿಕ್ಕ ಗುಮ್ಮಟ ತೆಗೆವುವ ಆದೇಶ ನೀಡಿರುವ ಜಿಲ್ಲಾಧಿಕಾರಿಗಳಿಗೆ ಆಭಾರ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.