ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿ ಸಮೀರ್ ರಜಾ ಎಂಬ ಮುಸಲ್ಮಾನ ಯುವಕನು `ಶ್ಯಾಮ’ ಎಂಬ ಹೆಸರಿನಲ್ಲಿ ಜಾಲತಾಣದಲ್ಲಿ `ಸ್ನ್ಯಾಪಚಾಟ್’ ನಲ್ಲಿ ಖಾತೆ ತೆರೆದು ಈ ಮೂಲಕ ೧೨ ನೇ ತರಗತಿಯಲ್ಲಿ ಓದುವ ಹಿಂದೂ ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳೆಸಿದನು. ಆ ಸಮಯದಲ್ಲಿ ಅವನು ತನ್ನ ಹೆಸರು `ಲಕಿ’ ಎಂದು ಹೇಳಿದ್ದನು. ನಂತರ ಸಮೀರ ಇವನು ಆಕೆಯ ಕೆಲವು ಛಾಯಾಚಿತ್ರಗಳನ್ನು ಕೇಳಿದನು. ನಂತರ ಒಂದು ಉಪಹಾರ ಗೃಹದಲ್ಲಿ ಅವನು ಆಕೆಗೆ ಭೇಟಿಗಾಗಿ ಕರೆದನು. ಆ ಸಮಯದಲ್ಲಿ ಆ ವಿದ್ಯಾರ್ಥಿನಿಗೆ ಅವನ ಬಗ್ಗೆ ಅನುಮಾನ ಬಂದಿತು. ಆಕೆಗೆ ಅವನು ಸಮೀರ ರಜಾ ಎಂದು ತಿಳಿಯಿತು. ಆದ್ದರಿಂದ ಸಮೀರ್ ಆಕೆಗೆ ಆಕೆಯ ಛಾಯಾಚಿತ್ರದ ಮೂಲಕ ಬ್ಲಾಕ್ ಮೇಲ್ ಮಾಡಲಾರಂಭಿಸಿದನು ಹಾಗೂ ಆಕೆಗೆ ಮತಾಂತರಗೊಂಡು ವಿವಾಹ ಮಾಡಿಕೊಳ್ಳುವುದಕ್ಕಾಗಿ ಒತ್ತಡ ಹೇರುತ್ತಿದ್ದನು. ಈ ಸಮಯದಲ್ಲಿ ಆಕೆಯಿಂದ ಸ್ವಲ್ಪ ಹಣವು ವಸೂಲಿ ಮಾಡಿದ್ದನು. ಇದರ ಬಗ್ಗೆ ಯುವತಿಯು ಕುಟುಂಬದವರ ಜೊತೆ ಮಾಹಿತಿ ಹಂಚಿಕೊಂಡಳು. ಅದರ ನಂತರ ಅವರು ಸಮೀರನನ್ನು ಮನೆಗೆ ಕರೆದರು ಮತ್ತು ಪೊಲೀಸರಿಗೆ ಒಪ್ಪಿಸಿದರು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಲವ್ ಜಿಹಾದ ತಡೆಯುವುದಕ್ಕಾಗಿ ಮತಾಂತರ ತಡೆ ಕಾಯ್ದೆ ಜಾರಿ ಮಾಡಲಾದ ನಂತರವೂ ಕೂಡ ಈ ರೀತಿಯ ಘಟನೆ ನಿಂತಿಲ್ಲ. ಅದಕ್ಕಾಗಿ ಈಗ ಈ ಕಾಯ್ದೆಯಲ್ಲಿ ಹೆಚ್ಚಿನ ಕಠಿಣ ಮತ್ತು ತಕ್ಷಣ ಶಿಕ್ಷೆ ನೀಡುವ ವ್ಯವಸ್ಥೆ ಮಾಡುವುದು ಅವಶ್ಯಕ ! |