ಮುಸಲ್ಮಾನನ ಹತ್ಯೆಯಿಂದ ಆಕ್ರೋಶಗೊಂಡ ಕುಟುಂಬದವರಿಂದ ಆಸ್ಪತ್ರೆ ಧ್ವಂಸ !

ನಿಷೇಧಾಜ್ಞೆ ಜಾರಿ

ಪ್ರತೀಕಾತ್ಮಕ ಛಾಯಾಚಿತ್ರ

ಭಿಲವಾಡಾ (ರಾಜಸ್ಥಾನ) – ಇಲ್ಲಿಯ ಇಬ್ರಾಹಿಂ ಪಠಾಣ (34 ವರ್ಷ) ಎಂಬಾತನ ಹತ್ಯೆಯಿಂದ ಆಕ್ರೋಶಗೊಂಡ ಅವನ ಕುಟುಂಬದವರು ಆಸ್ಪತ್ರೆಯನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಗರದಲ್ಲಿ ಕರ್ಫ್ಯೂ ವಿಧಿಸಿದ್ದು, 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಕಾಲಿ ತಾಪಡಿಯಾ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಒಬ್ಬ ಅಪ್ರಾಪ್ತ ವಯಸ್ಕನೂ ಸೇರಿದ್ದಾನೆ. ಮೂಲಗಳ ಪ್ರಕಾರ, ಇಬ್ರಾಹಿಂ ಪಠಾಣ ಮತ್ತು ಆತನ ಸಹೋದರ ಟೋನಿ ಪಠಾಣ (ವಯಸ್ಸು 22) ಬಡಲಾ ಚೌಕ್‌ನಲ್ಲಿ ನಿಂತಿದ್ದರು. ಆಗ ಆಕ್ರಮಣಕಾರರು ಅವರ ಮೇಲೆ ಗುಂಡು ಹಾರಿಸಿದರು. ಇದರಲ್ಲಿ ಇಬ್ರಾಹಿಂ ಸಾವನ್ನಪ್ಪಿದ್ದರೆ ಟೋನಿ ಗಂಭೀರವಾಗಿ ಗಾಯಗೊಂಡನು. ಈ ಘಟನೆಯ ನಂತರ ಆಕ್ರಮಣಕಾರರು ಪರಾರಿಯಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಬ್ರಾಹಿಂನ ಕುಟುಂಬದವರು ಆಸ್ಪತ್ರೆಯನ್ನು ಧ್ವಂಸಗೊಳಿಸಿದರು.

ಸಹೋದರನ ಹತ್ಯೆಗೆ ಸೇಡು ?

10 ಮೇ 2022 ರಂದು ಭಿಲವಾಡಾದಲ್ಲಿ ಆದರ್ಶ ತಾಪಡಿಯಾ ಇವರನ್ನು ಕೊಲೆ ಮಾಡಲಾಗಿತ್ತು. ಆದರ್ಶ ತಾಪಡಿಯಾ ಎಂಬಾತನು ಕಾಲಿ ತಾಪಡಿಯಾ ಅವರ ಸಹೋದರನಾಗಿದ್ದನು. ಇಬ್ರಾಹಿಂಗೂ ಆ ಕೊಲೆಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಈ ಕೊಲೆ ಅದರಿಂದಲೂ ಆಗಿರಬಹುದೆಂಬ ಸಂದೇಹವನ್ನು ವ್ಯಕ್ತಪಡಿಸಲಾಗುತ್ತಿದೆ.

ಸಂಪಾದಕೀಯ ನಿಲುವು

  • ಪ್ರತಿಯೊಂದು ಪ್ರಕರಣದಲ್ಲೂ ಮುಸಲ್ಮಾನರು ನೇರ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ; ಆದರೂ ಪ್ರಗತಿ(ಅಧೋಗತಿ)ಪರರು ನ್ಯಾಯಸಮ್ಮತವಾದ ಮಾರ್ಗದಿಂದ ಪ್ರತಿಭಟಿಸುವ ಹಿಂದೂಗಳನ್ನೇ ಹಿಂಸಾತ್ಮಕರನ್ನಾಗಿರುವಂತೆ ಹೇಳುತ್ತಾರೆ !
  • ಇಂತಹವರನ್ನು ಜೈಲಿಗೆ ಹಾಕಿ ಅವರಿಂದ ಆದ ಆಸ್ಪತ್ರೆಯ ಹಾನಿಯನ್ನು ವಸೂಲಿ ಮಾಡಿರಿ !