ಪಾಶ್ಚಿಮಾತ್ಯ ದೇಶಗಳು ಭಾರತದ ವಿದೇಶಾಂಗ ನೀತಿಯನ್ನು ಒಪ್ಪಬೇಕು !

ರಷ್ಯಾ- ಉಕ್ರೇನ ಯುದ್ಧದ ಬಗ್ಗೆ ವಿದೇಶ ಮಂತ್ರಿ ಜಯಶಂಕರ ಇವರ ಬಲವಾದ ಹೇಳಿಕೆ !

ನವ ದೆಹಲಿ – ನಾನು ಇತರೆ ಜನರ( ವಿದೇಶಿಯರ) ಕೋರಿಕೆಯನುಸಾರ ವಿದೇಶಾಂಗ ನೀತಿಯನ್ನು ಸಿದ್ಧಪಡಿಸುವುದಿಲ್ಲ. ನನ್ನ ವಿದೇಶಾಂಗ ನೀತಿಯು ನನ್ನ ದೇಶ ಮತ್ತು ನನ್ನ ದೇಶದ ಜನತೆಯ ಹಿತಕ್ಕಾಗಿ ಇರುತ್ತದೆ. ಭಾರತವು ಕೆಲವೊಂದು ಸಂದರ್ಭದಲ್ಲಿ ವಿದೇಶಿಯರ ಅಭಿಪ್ರಾಯದಂತೆ ನೀತಿಯನ್ನು ಜಾರಿಗೊಳಿಸಿದೆ. ಆದ್ದರಿಂದ ಈಗ ಅವರೂ ಕೂಡ ಭಾರತದ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಒಂದು ಆಂಗ್ಲ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುವಾಗ ಬಲವಾಗಿ ಪ್ರತಿಪಾಧಿಸಿದರು. ರಷ್ಯಾ-ಉಕ್ರೇನ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತ ಒಂದು ಪಕ್ಷದ ಪರವಾಗಿ ಮಾತನಾಡಬೇಕು ಎಂದು ಪಾಶ್ಚಿಮಾತ್ಯ ದೇಶಗಳ ಆಗ್ರಹದ ಬೇಡಿಕೆಯಾಗಿದೆ. ಈ ಬಗ್ಗೆ ಭಾರತವು ಯಾವುದೇ ಒಂದು ಪಕ್ಷದ ಪರವನ್ನು ವಹಿಸಿಲ್ಲ. ಈ ವಿಷಯದ ಬಗ್ಗೆ ಜಯಶಂಕರ ಇವರು ಭಾರತ ದೇಶದ ನೀತಿಯನ್ನು ಸ್ಪಷ್ಟಪಡಿಸಿದರು.

೧. ಡಾ. ಜಯಶಂಕರ ತಮ್ಮ ಮಾತನ್ನು ಮುಂದುವರಿಸುತ್ತಾ, ಭಾರತದ ಹಿತ ಯಾವುದರಲ್ಲಿದೆಯೆಂದು ನಮಗೆ ಚೆನ್ನಾಗಿ ಅರಿವಾಗಿದೆಯೆಂದು ನಾವು ತಿಳಿಯುತ್ತೇವೆ. ನಾವು ಯಾವಾಗಲೂ ಸಾರ್ವಭೌಮತ್ವವನ್ನು ಬೆಂಬಲಿಸಿದ್ದೇವೆ. ಮತ್ತು ಯುದ್ಧಕ್ಕೆ ಪೂರ್ಣ ವಿರಾಮ ಬೀಳಬೇಕು ಎಂದು ನಮಗೆ ಅನಿಸುತ್ತದೆ. ನಾನು ಒಂದು ವೇಳೆ ಅಮೇರಿಕಾದ ಇಚ್ಛೆಯಂತೆ ನಮ್ಮ ದೇಶದ ನೀತಿಯನ್ನು ಮಂಡಿಸಿದ್ದರೆ, ಅದರಲ್ಲಿ ನನ್ನೊಂದಿಗೆ ಇತರೆ ಯಾರಿಗೂ ಇದರ ಉಪಯೋಗವಾಗುತ್ತಿರಲಿಲ್ಲ ಎಂದು ಹೇಳಿದರು.

೨. ಪಾಕಿಸ್ತಾನ ಜಿಹಾದಿ ಭಯೋತ್ಪಾದಕತೆಗೆ ಸುರಕ್ಷಿತ ಸ್ಥಳವಾಗಿದೆಯೆಂದು ಅವರು ತಿಳಿಸುತ್ತಾ, ಯಾವುದೇ ವಿಷಯದ ಮೇಲೆ ಈ ಎರಡು ದೇಶಗಳ ನಡುವೆ ಒಮ್ಮತ ಮೂಡುವುದು ಅಸಾಧ್ಯವಾಗಿದೆ. ಜಗತ್ತು ಕಠಿಣ ಸ್ಥಳವಾಗಿದ್ದು, ಭಾರತದೇಶಕ್ಕೂ ಅದು ಸುಲಭವಾಗಿಲ್ಲ ಎಂದು ಅವರು ಹೇಳಿದರು.

೩. ಅವರು ಹಿಂದಿನ ಸರಕಾರವನ್ನು ಅಪ್ರತ್ಯಕ್ಷವಾಗಿ ಟೀಕಿಸುತ್ತಾ, ೧೯೬೨ ರ ಭಾರತ-ಚೀನಾ ಯುದ್ಧದಲ್ಲಿ ನಾವು ಸೋತೆವು. ಪ್ರತ್ಯಕ್ಷವಾಗಿ ಗಡಿರೇಖೆಯ ಪರಿಸರದ ಯಾವ ಪ್ರದೇಶವನ್ನು ನಾವು ಕಳೆದುಕೊಂಡಿದ್ದೇವೆಯೋ, ಇಂದು ಆ ಪ್ರದೇಶಗಳಲ್ಲಿ ಗ್ರಾಮಗಳ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.