ಊರಿನ ಇತರ ಮುಸಲ್ಮಾನನು ಸೈನ್ಯಕ್ಕೆ ಮಾಹಿತಿ ನೀಡಿದ್ದರಿಂದ ತರುಣನನ್ನು ಅಮಾನತುಗೊಳಿಸಿ ಅಪರಾಧ ದಾಖಲಿಸಲಾಗಿದೆ !
ಅಜಮೇರ (ರಾಜಸ್ಥಾನ) – ಇಲ್ಲಿ ಮೊಯಿನುದ್ದೀನ ಎಂಬ ಯುವಕನು ಭಾರತೀಯ ಸೈನ್ಯದಲ್ಲಿ ಸೇರ್ಪಡೆಯಾಗಲು ತನ್ನ ಮೃತ್ಯುವಾಗಿರುವ ಪ್ರಮಾಣಪತ್ರವನ್ನು ಮಾಡಿಸಿಕೊಂಡನು ಹಾಗೂ ನಂತರ ಆಧಾರ ಕಾರ್ಡನ ಮೇಲೆ ತನ್ನ ಹೆಸರನ್ನು ಮೋಹಿನ ಸಿಸೋದಿಯಾ ಎಂದು ತೋರಿಸಿ ಸೈನ್ಯದಲ್ಲಿ ಸೇರಿದನು. ಊರಿನ ಮುಸಲ್ಮಾನನು ಈ ಬಗ್ಗೆ ಸೈನ್ಯಕ್ಕೆ ಮಾಹಿತಿ ನೀಡಿದ್ದರಿಂದ ಮೊಯಿನುದ್ದೀನನನ್ನು ಅಮಾನತುಗೊಳಿಸಿ ಅವನ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ. ಮೊಯಿನುದ್ದೀನನ ಕಿರಿಯ ಸಹೋದರನಾದ ಆಸಿಫನು ೨೦೧೮ರಲ್ಲಿ ಸೈನ್ಯದಲ್ಲಿ ಸೇರಿದ್ದನು. ಮೊಯಿನುದ್ದೀನನ ಸೇರ್ಪಡೆಯಲ್ಲಿ ಅವನ ಕೈ ಇರುವುದಾಗಿಯೂ ಹೇಳಲಾಗುತ್ತಿದೆ.
ಆಸೀಫನಂತೆಯೇ ಮೊಯಿನುದ್ದೀನನಿಗೂ ಸೈನ್ಯ ಸೇರಲಿಕ್ಕಿತ್ತು; ಆದರೆ ಆತನ ವಯಸ್ಸು ಹೆಚ್ಚಾಗಿದ್ದರಿಂದ ಅದು ಸಾಧ್ಯವಿರಲಿಲ್ಲ. ಆದುದರಿಂದ ಅವನ ತಂದೆ ಮಹಂಮದ ನೂರರವರು ಊರಿನ ಸರಪಂಚರನ್ನು ಹಿಡಿದು ೨೦೧೮ರಲ್ಲಿ ಮೋಯಿನುದ್ದೀನನ ಮೃತ್ಯುವಾದ ಬಗ್ಗೆ ಪ್ರಮಾಣಪತ್ರವನ್ನು ಮಾಡಿಸಿಕೊಂಡರು. ಅನಂತರ ಅವನು ಪಕ್ಕದ ಹಳ್ಳಿಗೆ ಹೋಗಿ ೯ನೇ ತರಗತಿಯಲ್ಲಿ ಪ್ರವೇಶ ಪಡೆದನು. ಆಗ ಅವನ ಹೆಸರು ಮೋಹಿನ ಸಿಸೋದಿಯಾ ಎಂದು ಹೇಳಿ ಜನ್ಮದಿನಾಂಕವು ನವೆಂಬರ್ ೬, ೨೦೦೧ ರಂದು ಹೇಳಲಾಗಿದೆ. ಅನಂತರ ಅವನು ೧೨ನೇ ತರಗತಿಯ ವರೆಗೆ ಶಿಕ್ಷಣ ಪಡೆದನು. ಅನಂತರ ಅವನು ಮೋಹಿನ ಸಿಸೋದಿಯಾ ಎಂಬ ಹೆಸರಿನಿಂದ ಆಧಾರಕಾರ್ಡ ಮಾಡಿಸಿಕೊಂಡನು. ಅನಂತರ ಅವನು ಸೈನ್ಯವನ್ನು ಸೇರಿದನು. ಇವನ ಊರಿನವನೇ ಆದ ಗಫೂರ ಖಾನನು ಸೈನ್ಯಕ್ಕೆ ಮೋಯಿನುದ್ದೀನನ ನಿಜವಾದ ಮಾಹಿತಿಯನ್ನು ನೀಡಿದಾಗ ಅವನ ಮೋಸವು ಬಹಿರಂಗವಾಯಿತು.
ಸಂಪಾದಕೀಯ ನಿಲುವುಸೈನ್ಯದಲ್ಲಿ ಸೇರ್ಪಡೆಯಾಗುವುದರ ಹಿಂದೆ ಮುಸಲ್ಮಾನ ತರುಣನ ಉದ್ದೇಶ ಏನಿತ್ತು, ಎಂಬುದರ ಆಳವಾದ ತನಿಖೆ ನಡೆಯಬೇಕು ! |