‘ಏನು ಮಾಡಿದೆನೋ ಅದನ್ನು ಸಿಟ್ಟಿನಲ್ಲಿ ಮಾಡಿದೆನು !’(ಅಂತೆ)

  • ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣ

  • ಅಫ್ತಾಬನಿಂದ ನ್ಯಾಯಾಲಯದಲ್ಲಿ ಹತ್ಯೆಯ ಸ್ವೀಕೃತಿ !

ನವದೆಹಲಿ – ನಾನು ಏನು ಮಾಡಿದೆನೋ ಅದನ್ನು ಸಿಟ್ಟಿನ ಆವೇಶದಲ್ಲಿ ಮಾಡಿದದೇನೆ. ಈ ಪ್ರಕರಣದಲ್ಲಿ ತನಿಖೆಗೆ ಸಹಕರಿಸುತ್ತಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ, ಎಂದು ತನ್ನ ಪ್ರಿಯತಮೆ ಶ್ರದ್ಧಾ ವಾಲಕರ ಇವಳ ಹತ್ಯೆ ಮಾಡಿರುವ ಅವಳ ಪ್ರಿಯಕರ ಅಫ್ತಾಬ ಪೂನವಾಲಾ ಇಲ್ಲಿಯ ಸಾಕೇತ ನ್ಯಾಯಾಲಯದಲ್ಲಿ ಹೇಳಿಕೆಯನ್ನು ನೀಡಿದ್ದಾನೆ. ಆಫ್ತಾಬನನ್ನು ಸಾಕೇತ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗಿತ್ತು ಆಲಿಕೆಯ ಸಮಯದಲ್ಲಿ ಪೊಲೀಸರು ಅಫ್ತಾಬನ ಪೊಲೀಸ ಕಸ್ಟಡಿಯನ್ನು ಹೆಚ್ಚಿಸುವಂತೆ ಕೋರಿದರು. ಪೊಲೀಸರ ಕೋರಿಕೆಯ ಮೇರೆಗೆ ನ್ಯಾಯಾಲಯವು ಅಫ್ತಾಬನ ಪೊಲೀಸ ಕಸ್ಟಡಿಯನ್ನು ಇನ್ನೂ ೪ ದಿನಗಳವರೆಗೆ ಹೆಚ್ಚಿಸಿತು.

(ಸೌಜನ್ಯ : ದೈನಿಕ್ ಜಾಗರಣ)

ಪೊಲೀಸ ವಿಚಾರಣೆಯಲ್ಲಿ ಅವನು ನಕಾಶೆಯನ್ನು ತಯಾರಿಸಿ ಶ್ರದ್ಧಾಳ ಅವಯವಗಳನ್ನು ಎಲ್ಲಿ ಎಸೆದಿದ್ದನು ಎಂದು ಹೇಳಿದನು. ಅವನು ಶ್ರದ್ಧಾಳ ತಲೆಬುರುಡೆಯನ್ನು ಒಂದು ಕೆರೆಯಲ್ಲಿ ಎಸೆದಿದ್ದನು. ಸಾಕಷ್ಟು ತಿಂಗಳು ಕಳೆದಿರುವುದರಿಂದ ಅವನಿಗೆ ನಿರ್ದಿಷ್ಟ ಸ್ಥಳ ನೆನಪಾಗುತ್ತಿಲ್ಲ ಎಂದೂ ಅವನು ಪೊಲೀಸರಿಗೆ ಹೇಳಿದನು.

 

ಅಫ್ತಾಬನ ಮಾತಿನ ಮೇಲೆ ಯಾರು ವಿಶ್ವಾಸ ಇಡುತ್ತಾರೆ ? ಅಫ್ತಾಬ ಅನೇಕ ತಿಂಗಳು ಶ್ರದ್ಧಾಳ ಮೇಲೆ ಹಲ್ಲೆ ಮಾಡುತ್ತಿದ್ದನು ಮತ್ತು ಇನ್ನೊಂದೆಡೆ ಇತರೆ ಹಿಂದೂ ಯುವತಿಯರೊಂದಿಗೆ ಗೆಳೆತನ ಮಾಡುತ್ತಿದ್ದನು, ಹತ್ಯೆಯ ಬಳಿಕವೂ ಅವನು ಅನೇಕ ಹಿಂದೂ ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದನು, ಇದರಿಂದ ಅವನು ಎಂತಹ ಮನಃಸ್ಥಿತಿ ಹೊಂದಿದ್ದನು ಎನ್ನುವುದು ಸ್ಪಷ್ಟವಾಗುತ್ತದೆ !