ಉತ್ತರಪ್ರದೇಶದಲ್ಲಿ ಗುಲ ಮೊಹಮ್ಮದ ಮತ್ತು ಅಜರ ಹಸನ ಅವರಿಂದ ಹಿಂದೂ ಹುಡುಗಿಯ ಅಪಹರಣ

ಫಿರೋಜಾಬಾದ – ಉತ್ತರಪ್ರದೇಶದ ಫಿರೋಜಾಬಾದನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಗುಲ ಮೊಹಮ್ಮದ ಮತ್ತು ಅಜರ ಹಸನ ಇವರು ನೆರೆಹೊರೆಯ ಒಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿದ ಘಟನೆ ೧೯ ನವೆಂಬರ್ ೨೦೨೨ ರಂದು ನಡೆಯಿತು. ಸಂತ್ರಸ್ತ ಬಾಲಕಿಯ ಕುಟುಂಬದವರು ಆರೋಪಿಗಳಾದ ಗುಲ ಮೊಹಮ್ಮದ ಮತ್ತು ಅಜರ ಹಸನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಇಬ್ಬರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಂತ್ರಸ್ತೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ನವೆಂಬರ್ ೧೯ ರಂದು ಮುಂಜಾನೆ ಅದೇ ಗ್ರಾಮದ ಗುಲ ಮೊಹಮ್ಮದ ಮತ್ತು ಅಜರ ಹಸನ ಎಂಬುವರು ಅವರ ಮಗಳನ್ನು ದ್ವಿಚಕ್ರ ವಾಹನದಲ್ಲಿ ಅಪಹರಿಸಿಕೊಂಡು ಹೋದರು. ಅವರು ಹುಡುಗಿಯನ್ನು ಹುಡುಕಲು ಬಹಳ ಪ್ರಯತ್ನಿಸಿದರು; ಆದರೆ ಅವರು ಯಶಸ್ವಿಯಾಗಲಿಲ್ಲ. ‘ನನ್ನ ಮಗಳನ್ನು ಅಪಹರಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರಿಗೆ ಶಾಶ್ವತವಾಗಿ ಪಾಠ ಕಲಿಸುವಂತಹ ಶಿಕ್ಷೆಯಾಗಬೇಕು !