ಹಿಜಾಬ್‌ಗೆ ವಿರೋಧಿಸುವ ವಿಡಿಯೋ ಪೋಸ್ಟ ಮಾಡಿದ್ದ ಇರಾನಿನ ಪ್ರಸಿದ್ಧ ನಟಿಯ ಬಂಧನ

(ಹಿಜಾಬ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)

ಟೆಹರಾನ (ಇರಾನ) – ಇರಾನನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಹಿಜಾಬವಿರೋಧಿ ಆಂದೋಲನದ ಪ್ರಕರಣದಲ್ಲಿ ದೇಶದ ಹೆಸರಾಂತ ನಟಿ ಹೆಂಗಾಮೆಹ ಗಾಝಿಯಾನಿ(೫೨ ವರ್ಷ ವಯಸ್ಸು) ಇವರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಸಾರ್ವಜನಿಕವಾಗಿ ಹಿಜಾಬ ತೆಗೆದು ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಬಳಿಕ ಅವರನ್ನು ಬಂಧಿಸಲಾಯಿತು. ವಿಡಿಯೋ ಪೋಸ್ಟ ಮಾಡುವಾಗ ಅವರು ‘ಇದು ನನ್ನ ಕೊನೆಯ ಪೋಸ್ಟ ಆಗಬಹುದು’ ಎಂದು ಹೇಳಿದ್ದರು. ಇರಾನಿನ ಒಂದು ಮಾರುಕಟ್ಟೆಯಲ್ಲಿ ಹಿಜಾಬ ಧರಿಸದೇ ವಿಡಿಯೋ ಚಿತ್ರೀಕರಿಸಿ ಗಾಝಿಯಾನಿ ಇವರು ಹಿಜಾಬ ವಿರೋಧಿ ಆಂದೋಲನವನ್ನು ಬೆಂಬಲಿಸಿದ್ದಾರೆ.

ಕಳೆದ ವಾರ ಮಾಡಿದ್ದ ಒಂದು ಪೋಸ್ಟನಲ್ಲಿ ಅವರು ಇರಾನ ಸರಕಾರವನ್ನು ‘ಚೈಲ್ಡ ಕಿಲ್ಲರ’(ಚಿಕ್ಕ ಮಕ್ಕಳ ಹತ್ಯೆ ಮಾಡುವ) ಎಂದು ಹೇಳಿದ್ದರು. ಅವರು ಈ ಪೋಸ್ಟನಲ್ಲಿ ಸರಕಾರವು ೫೦ ಕ್ಕಿಂತ ಹೆಚ್ಚು ಚಿಕ್ಕ ಮಕ್ಕಳ ಹತ್ಯೆ ಮಾಡಿರುವ ಆರೋಪವನ್ನು ಮಾಡಿದ್ದರು.

ಸಂಪಾದಕೀಯ ನಿಲುವು

ಹಿಜಾಬ ವಿರೋಧಿ ಆಂದೋಲನವನ್ನು ಮುಚ್ಚಿಹಾಕಲು ಪ್ರಯತ್ನಿಸುವ ಇರಾನ ಸರಕಾರದ ವಿಷಯದಲ್ಲಿ ಜಗತ್ತಿನ ತಥಾಕಥಿತ ಮಹಿಳಾ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು, ಆಯೋಗ, ವಿಶ್ವಸಂಸ್ಥೆ ಏಕೆ ಮೌನವಾಗಿವೆ ? ಭಾರತದಲ್ಲಿ ಜಿಹಾದಗೆ ಬೆಂಬಲಿಸಿ ಆಂದೋಲನಗಳನ್ನು ನಡೆಸುವವರಿಗೆ ಇಂತಹ ವಿರೋಧವಾಗಿದ್ದರೆ, ಇವರೆಲ್ಲರೂ ಸುಮ್ಮನೆ ಇರುತ್ತಿದ್ದರೆ ?