ತಮಿಳುನಾಡಿನಲ್ಲಿ ಮತಾಂತರಗೊಂಡಿರುವ ಕ್ರೈಸ್ತ ಮಹಿಳೆಯ ಮೃತದೇಹವನ್ನು ೩ ದಿನ ಮನೆಯಲ್ಲಿ ಇಟ್ಟಿದರು !

ಪ್ರಾರ್ಥನೆ ಮಾಡಿದರೆ ಮಹಿಳೆ ಜೀವಂತವಾಗುವಳು, ಎಂದು ಕುಟುಂಬದವರ ನಂಬಿಕೆ ಇತ್ತು !

ಮಧುರೈ (ತಮಿಳುನಾಡು) – ಪ್ರಾರ್ಥನೆಯ ಮೂಲಕ ಮೃತಪಟ್ಟಿರುವ ಮಹಿಳೆ ಪುನರ್ಜೀವಿತವಾಗುವ ಇಂತಹ ಆಸೆಗಾಗಿ ಮತಾಂತರಗೊಂಡ ಕ್ರೈಸ್ತ ಕುಟುಂಬದವರು ಮಹಿಳೆಯ ಮೃತ ದೇಹ ೩ ದಿನ ಮನೆಯಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಪಕ್ಕದಲ್ಲಿರುವವರು ಪೊಲೀಸರಿಗೆ ದೂರು ನೀಡಿದ ನಂತರ ಅವರ ಮೂಲ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಲಾಯಿತು.

೧. ಮಧುರೈಯಲ್ಲಿನ ಒಂದು ಹೋಟಲ್‌ನ ವ್ಯವಸ್ಥಾಪಕವಾಗಿರುವ ಬಾಲಕೃಷ್ಣನ್ ಇವರ ಪತ್ನಿ ಮತ್ತು ೨ ಮಕ್ಕಳು ಇವರು ಕೆಲವು ವರ್ಷಗಳ ಹಿಂದೆ ಕ್ರೈಸ್ತ ಧರ್ಮ ಸ್ವೀಕರಿಸಿದ್ದರು. ಹಿರಿಯ ಮಗ ಆಧುನಿಕ ವೈದ್ಯ (ಡಾಕ್ಟರ) ಆಗಿದ್ದು, ಚಿಕ್ಕ ಮಗನು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ.

೨. ಬಾಲಕೃಷ್ಣನ್ ಇವರ ಪತ್ನಿ ಮಲಾಠಿ ಇವರಿಗೆ ಹೃದ್ರೋಗ ಇರುವುದರಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದೇಕರಣದಿಂದ ಅವರ ಮೃತ್ಯು ಆಗಿದೆ. ಶವವನ್ನು ಅವರ ಮನೆಯಲ್ಲಿ ಇಡಲಾಗಿತ್ತು. ೩ ದಿನಗಳ ನಂತರ ಕೂಡ ಅವರ ಅಂತ್ಯ ಸಂಸ್ಕಾರ ಮಾಡಿರಲಿಲ್ಲ. ಆಗ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದರು.

೩. ಪೊಲೀಸರು ಅಂತ್ಯ ಸಂಸ್ಕಾರ ಮಾಡುವ ಬಗ್ಗೆ ಕೇಳಿದಾಗ, ‘ಪಾದ್ರಿಗೆ ಕಾಯುತ್ತಿದ್ದೇವೆ’, ಎಂದು ಬಾಲಕೃಷ್ಣನ್ ಅವರು ಹೇಳಿದರು. ಬಾಲಕೃಷ್ಣನ್ ಮತ್ತು ಅವರ ಇಬ್ಬರ ಮಕ್ಕಳು ಇವರಿಗೆ ‘ಪ್ರಾರ್ಥನೆಯ ಮೂಲಕ ಮಲಾಠಿ ಪುನರ್ಜೀವಿತವಾಗುವಳು’ ಎಂಬ ಆಸೆ ಇತ್ತು.

೪. ೨೦೨೧ ರಲ್ಲಿ ನಡೆದಿರುವ ಇನ್ನೊಂದು ಘಟನೆಯಲ್ಲಿ ಮತಾಂತರಗೊಂಡಿರುವ ಕುಟುಂಬದಲ್ಲಿನ ಓರ್ವ ಮಹಿಳೆಗೆ ಪಾದ್ರಿಯು ‘ಆಸ್ಪತ್ರೆಗೆ ಸೇರಿಸಿದರೆ ಏಸು ಆಕೆಯನ್ನು ಬದುಕಿಸುವುದಿಲ್ಲ’, ಎಂದು ಹೇಳುತ್ತಾ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಬಿಟ್ಟಿರಲಿಲ್ಲ. (ಇಂತಹ ಪಾದ್ರಿಗಳ ಬಗ್ಗೆ ಪ್ರಗತಿ(ಅಧೋಗತಿ)ಪರರು ಏನಾದರೂ ಮಾತನಾಡುವರೇ ? – ಸಂಪಾದಕರು)

೫. ಮುಂದೆ ಆ ಮಹಿಳೆಯ ಮೃತ್ಯುವಾದ ನಂತರ ಆಕೆಯ ೧೩ ಮತ್ತು ೯ ವರ್ಷದ ಮಕ್ಕಳನ್ನು ಮೃತ ದೇಹದ ಜೊತೆಗೆ ೨೦ ದಿನ ಇರಿಸಲಾಗಿತ್ತು. ಆ ಸಮಯದಲ್ಲಿ ಕೂಡ ಪೊಲೀಸರ ಹಸ್ತಕ್ಷೇಪದಿಂದ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಸಂಪಾದಕೀಯ ನಿಲುವು

ಹಿಂದೂಗಳು ಈ ರೀತಿಯ ಕೃತಿ ಮಾಡಿದರೆ, ಇಷ್ಟೊತ್ತಿಗೆ ಬುದ್ಧಿವಾದಿಗಳು, ಪ್ರಗತಿ(ಅಧೋ)ಪರರು, ಅಂಧಶ್ರದ್ಧಾ ನಿರ್ಮೂಲನದವರು ಹಿಂದೂಗಳನ್ನು ಟೀಕಿಸುತ್ತಿದ್ದರು; ಆದರೆ ಈ ಕೃತಿ ಕ್ರೈಸ್ತರು ಮಾಡಿದ್ದರಿಂದ ಈ ಗುಂಪು ಚಕಾರ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !

ಪ್ರಾರ್ಥನೆಯ ಮೂಲಕ ರೋಗವಾಸಿ ಮಾಡುವುದು ಹಾಗೂ ಇತರ ಆಮಿಷಗಳ ತೋರಿಸಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತದೆ. ಹಿಂದೂಗಳು ಕೂಡ ಇಂತಹ ಆಮಿಷಕ್ಕೆ ಬಲಿಯಾಗುತ್ತಾರೆ. ಇಂತಹ ಘಟನೆಯಿಂದ ಅರ್ಥಮಾಡಿಕೊಳ್ಳಬೇಕು !