ಅರಳಿ ಮರದ ಕೆಳಗೆ ಪೂಜೆ ಮಾಡುವಾಗ ಸಂಭವಿಸಿದ ಘಟನೆ !
ವೈಶಾಲಿ (ಬಿಹಾರ) – ಇಲ್ಲಿಯ ಸುಲ್ತಾನಪುರ ಪ್ರದೇಶದಲ್ಲಿ ಗಂಟೆಗೆ ೧೨೦ ಕಿಲೋಮೀಟರ್ ವೇಗದಲ್ಲಿ ಬಂದ ಟ್ರಕ್ ಕೆಳಗೆ ಸಿಲುಕಿ ೮ ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಇತರ ಕೆಲವು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೬ ಮಕ್ಕಳ ಸಮಾವೇಶ ಇದೆ. ಇವರೆಲ್ಲರೂ ಇಲ್ಲಿಯ ಅರಳಿ ಮರದ ಕೆಳಗಡೆ ನಿಂತು ಪೂಜೆ ಮಾಡುವಾಗ ಈ ಘಟನೆ ನಡೆದಿದೆ. ಟ್ರಕ್‌ನ ಚಾಲಕ ಸಾರಾಯಿ ಕುಡಿದು ಓಡಿಸುತ್ತಿದ್ದನು, ಎಂದು ತಿಳಿದು ಬಂದಿದೆ. ವಿಶೇಷ ಎಂದರೆ ಬಿಹಾರದಲ್ಲಿ ಸಾರಾಯಿ ನಿಷೇಧ ಇದೆ. (ಸಾರಾಯಿ ನಿಷೇಧ ಇರುವಾಗ ಈ ರೀತಿಯ ಘಟನೆ ನಡೆಯುತ್ತಿದೆ, ಇದು ಸರಕಾರಕ್ಕೆ ಲಚ್ಚಾಸ್ಪದವಾಗಿದೆ ! ಈ ಅಪಘಾತಕ್ಕೆ ಸರಕಾರಕವೆ ಹೋಣೆಹೊತ್ತಬೇಕು ! – ಸಂಪಾದಕರು)
वैशाली में दर्दनाक सड़क हादसा… अनियंत्रित ट्रक ने कई लोगों को रौंदा, 10 की मौत की खबर#VaishaliAccident #VaishaliRoadAccident https://t.co/nXM6tqAYdI
— NBT Hindi News (@NavbharatTimes) November 20, 2022
ಪ್ರಧಾನಿ ನರೇಂದ್ರ ಮೋದಿಯವರು ಘಟನೆಯ ಬಗ್ಗೆ ಸಂತಾಪ ಸೂಚಿಸುತ್ತಾ, ಮೃತರ ಸಂಬಂಧಿಕರಿಗೆ ೨ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಹಾಗೂ ಗಾಯಗೊಂಡಿರುವವರಿಗೆ ೫೦ ಸಾವಿರ ರೂಪಾಯಿ ನೀಡಲಾಗುವುದೆಂದು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ಕೂಡ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಮೃತರ ಸಂಬಂಧಕರಿಗೆ ಪ್ರತ್ಯೇಕವಾಗಿ ೫ ಲಕ್ಷ ರೂಪಾಯ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
The accident in Vaishali, Bihar is saddening. Condolences to the bereaved families. May the injured recover soon. An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi
— PMO India (@PMOIndia) November 20, 2022