ಇರಾನದಲ್ಲಿನ ಆಂದೋಲನಕಾರರು ದಿವಂಗತ ಸರ್ವೋಚ್ಛ ಧರ್ಮಗುರುಗಳ ಮನೆ ಸುಟ್ಟರು !

ಇರಾನನಲ್ಲಿ ಹಿಜಾಬವಿರೋಧಿ ಆಂದೋಲನ ಮುಂದುವರಿಕೆ !

(ಹಿಜಾಬ ಎಂದರೆ ಮುಸಲ್ಮಾನ ಸ್ತ್ರೀಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)

ತೆಹರಾನ್ (ಇರಾನ್) – ಇಲ್ಲಿಯ ಹಿಜಾಬನ ಒತ್ತಾಯದಿಂದ ಹೊತ್ತಿರುವ ಆಂದೋಲನ ಈಗ ಇನ್ನಷ್ಟು ಭುಗಿಲೆದ್ದಿದೆ. ಇರಾನನ್ನು ಕಟ್ಟರವಾದಿ ಇಸ್ಲಾಮಿ ಮಾಡುವ ದಿವಂಗತ ಸರ್ವೋಚ್ಛ ಧರ್ಮಗುರು ಆಯಾತುಲ್ಲಾ ಖೋಮೇನಿ ಇವರ ಖೋಮೆನ ನಗರದಲ್ಲಿನ ಜನ್ಮಸ್ಥಳವನ್ನು ಆಂದೋಲನಕಾರರು ಸುಟ್ಟಿದ್ದಾರೆ. ಈ ವಿಷಯವಾಗಿ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಖೋಮೇನಿ ಇವರ ನಂತರ ಇಲ್ಲಿ ವಸ್ತು ಸಂಗ್ರಹಾಲಯ ಕಟ್ಟಲಾಗಿತ್ತು. ಮೇಲಿನ ಘಟನೆಯ ಪ್ರಸಾರಗೊಂಡಿರುವ ವಿಡಿಯೋದಲ್ಲಿ ಆಂದೋಲನಕಾರರ ಒಂದು ಗುಂಪು ಖೋಮೇನಿಯವರ ಮನೆಯ ಮೇಲೆ ದಾಳಿ ನಡೆಸಿ ಮತ್ತು ನಂತರ ಆ ಮನೆಯನ್ನು ಧ್ವಂಸಗೊಳಿಸಿ ಸುಟ್ಟು ಹಾಕಿರುವುದು ಕಾಣುತ್ತಿದೆ. ಇರಾನ್ ಸರಕಾರ ಮಾತ್ರ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳುತ್ತಾ ದಾವೇ ತಿರಸ್ಕರಿಸಿದ್ದಾರೆ. ಹಿಜಾಬ ಕಡ್ಡಾಯ ಇರುವ ಇರಾನಿನಲ್ಲಿ ಮಹಾಸಾ ಆಮೀನ್ ಈ ಯುವತಿಯನ್ನು ಹಿಜಾಬ್ ಸರಿಯಾಗಿ ಧರಿಸದೆ ಇರುವುದರಿಂದ ಆಕೆಯನ್ನು ಬಂಧಿಸಲಾಗಿತ್ತು. ಪೊಲೀಸ ಕೋಠಡಿಯಲ್ಲಿ ಆಕೆಯ ಮೃತ್ಯು ಆಯಿತು. ಅಂದಿನಿಂದ (ಸುಮಾರು ೩ ತಿಂಗಳಿನಿಂದ) ಇರಾನನಲ್ಲಿ ಹಿಚಾಬ್ ವಿರೋಧಿ ಆಂದೋಲನ ಭುಗಿಲೆದ್ದು ಈ ಆಂದೋಲನದ ಮುಂದಾಳತ್ವವನ್ನು ಮಹಿಳೆಯರು ತೆಗೆದುಕೊಂಡಿದ್ದಾರೆ. ಇದರಲ್ಲಿ ಕಳೆದ ವಾರ ಬಂಧಿಸಲಾಗಿರುವ ಒಬ್ಬ ಆಂದೋಲನಕಾರನಿಗೆ ಇರಾನವು ಮರಣದಂಡನೆ ನೀಡಿದೆ. ಆದ್ದರಿಂದ ಆಂದೋಲನಕಾರರ ಸಿಟ್ಟು ಇನ್ನಷ್ಟು ಹೆಚ್ಚಾಗಿದೆ.

ಸಂಪಾದಕೀಯ ನಿಲುವು

ಧಾರ್ಮಿಕ ಕಟ್ಟರವಾದದಿಂದ ಯಾವಾಗ ಸಮಾಜದ ಮೇಲೆ ಬಂಧನಗಳು ಹೇರಲಾಗುತ್ತದೆ, ಆಗ ಸರಕಾರದ ಒತ್ತಾಯಕ್ಕೆ ಬೇಸತ್ತು ಸಮಾಜದಲ್ಲಿ ಈ ರೀತಿಯ ಉದ್ರೇಕವಾಗುತ್ತದೆ ! ಆದ್ದರಿಂದ ಭವಿಷ್ಯದಲ್ಲಿ ಇತರ ಇಸ್ಲಾಮಿ ದೇಶದಲ್ಲಿ ಕೂಡ ಜನರ ಉದ್ರೇಕ ಇದೆ ರೀತಿ ನಡೆದರೆ ಆಶ್ಚರ್ಯ ಏನೂ ಇಲ್ಲ !