ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನದ ಅಂತರ್ಗತ ಪುಣೆ ಜಿಲ್ಲೆಯ ಸಾಧಕರು ಮಾಡಿರುವ ವೈಶಿಷ್ಟ್ಯಪೂರ್ಣ ಪ್ರಯತ್ನಗಳು !

೨೦೨೧ ರ ಕಾರ್ತಿಕ ಏಕಾದಶಿಯ ಶುಭಮುಹೂರ್ತದಲ್ಲಿ ಸನಾನತವು ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನವನ್ನು ಆರಂಭಿಸಿತು. ಅದರ ಅಂತರ್ಗತ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಾಧಕರು ಮಾಡಿರುವ ವೈಶಿಷ್ಟ್ಯಪೂರ್ಣ ಪ್ರಯತ್ನಗಳನ್ನು ನೋಡೋಣ…

ಸೌ. ಮನಿಷಾ ಪಾಠಕ

ಮುಂಬರುವ ಭೀಕರ ಆಪತ್ಕಾಲದ ಪೂರ್ವಸಿದ್ಧತೆ ಎಂದು ೨೦೨೧ ರ ಕಾರ್ತಿಕ ಏಕಾದಶಿಯ ಶುಭಮುಹೂರ್ತದಲ್ಲಿ ಸನಾತನವು ಮನೆಮನೆಗಳಲ್ಲಿ ತರಕಾರಿ ಮತ್ತು ಔಷಧಿ ಗಿಡಗಳನ್ನು ಬೆಳೆಸುವ ಅಭಿಯಾನವನ್ನು ಆರಂಭಿಸಿತು. ಈ ಅಭಿಯಾನದ ಅಂತರ್ಗತ ಸಾಧಕರಿಗೆ ಮನೆಯಲ್ಲಿ ತರಕಾರಿ ಮತ್ತು ಔಷಧಿಯ ಗಿಡಗಳನ್ನು ಬೆಳೆಸುವ ಬಗ್ಗೆ ‘ಸನಾತನ ಪ್ರಭಾತ’ದ ಮೂಲಕ ಪ್ರಬೋಧನೆಯನ್ನು ಮಾಡಲಾಯಿತು. ಈ ವರ್ಷ ಕಾರ್ತಿಕ ಏಕಾದಶಿಯಂದು ಈ ಅಭಿಯಾನಕ್ಕೆ ಒಂದು ವರ್ಷ ಪೂರ್ಣವಾಗುತ್ತದೆ. ಈ ನಿಮಿತ್ತ ಪುಣೆ ಜಿಲ್ಲೆಯ ಸಾಧಕರು ಕಳೆದ ವರ್ಷವಿಡೀ ಮಾಡಿದ ಪ್ರಯತ್ನಗಳನ್ನು ನೋಡೋಣ.  

ಮೆಂತೆ ಸೊಪ್ಪು
ಕೆಸುವಿನ ಎಲೆ

೧. ‘ಮನೆಮನೆಗಳಲ್ಲಿ ಕೈದೋಟ’ ಈ ವಿಷಯದಲ್ಲಿ ‘ಆನ್‌ಲೈನ್’ ಶಿಬಿರದ ಆಯೋಜನೆ

‘ಮಾರ್ಚ್ ೨೦೨೨ ರಲ್ಲಿ ಪಶ್ಚಿಮ ಮಹಾರಾಷ್ಟ್ರ ಮತ್ತು ಗೋವಾದಲ್ಲಿನ ಸಾಧಕರಿಗಾಗಿ ‘ಮನೆಮನೆಗಳಲ್ಲಿ ಕೈದೋಟ’ ಈ ವಿಷಯದ ಬಗ್ಗೆ ಆನ್‌ಲೈನ್ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ ಸದ್ಗುರು ಸ್ವಾತಿ ಖಾಡ್ಯೆ ಇವರು ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನದಲ್ಲಿ ಭಾಗವಹಿಸಿದರೆ ಹೇಗೆ ಸಾಧನೆ ಆಗುತ್ತದೆ ?’, ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಶಿಬಿರದಲ್ಲಿ ಕೃಷಿಯ (ತೋಟಗಾರಿಕೆಯ) ವಿಷಯದಲ್ಲಿ ಅಭ್ಯಾಸವಿರುವ ಸಾಧಕರು ಮನೆಯ ಸುತ್ತಮುತ್ತಲೂ, ಅಂಗಳದಲ್ಲಿ, ಹಾಗೆಯೇ ಫ್ಲ್ಯಾಟಗಳಲ್ಲಿನ ಟೆರೇಸ್, ಬಾಲ್ಕನಿ ಅಥವಾ ಕಿಟಕಿಗಳಲ್ಲಿ ಯಾವ ಗಿಡಗಳನ್ನು ಬೆಳೆಸಬಹುದು ? ಎಂಬ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು.

೨. ಸಾಧಕರು ಶಿಬಿರದ ನಂತರ ತೋಟಗಾರಿಕೆಯ ಸೇವೆಗಳ ಬಗ್ಗೆ ಮಾಡಿದ ನಿಯೋಜನೆ ಮತ್ತು ಕೃತಿ

ಅ. ತೋಟಗಾರಿಕೆಯ ಆಸಕ್ತಿ ಇರುವ, ಆದರೆ ಇತರ ಸೇವೆಗಳು ಹೆಚ್ಚು ಪ್ರಮಾಣದಲ್ಲಿರುವ ಸಾಧಕರು ಕೂಡ ತಮ್ಮ ಸಮಯದ ನಿಯೋಜನೆಯನ್ನು ಮಾಡಿ ಸಮಷ್ಟಿ ಸೇವೆಯಿಂದ ಸಮಯವನ್ನು ತೆಗೆದು ತರಕಾರಿಗಳನ್ನು ಬೆಳೆಸಲು ಪ್ರಯತ್ನಿಸಿದರು.

ಆ. ಪುಣೆಯಂತಹ ನಗರದಲ್ಲಿ ಮಣ್ಣು ಅಥವಾ ದೇಶಿ ಹಸುವಿನ ಸೆಗಣಿ ಇತ್ಯಾದಿ ಸಹಜವಾಗಿ ಸಿಗುವುದು ಕಠಿಣವಾಗಿದೆ. ಈ ಶಿಬಿರದ ನಂತರ ಸಾಧಕರಿಗೆ ತೋಟಗಾರಿಕೆಗಾಗಿ ತಗಲುವ ಮಣ್ಣು, ‘ಜೀವಾಮೃತ  (ದೇಶಿ ಹಸುವಿನ ಸೆಗಣಿ, ಗೋಮೂತ್ರ, ಬೇಸನ್ ಮತ್ತು ಬೆಲ್ಲ ಇವುಗಳಿಂದ ತಯಾರಿಸಿದ ನೈಸರ್ಗಿಕ ಗೊಬ್ಬರ)’, ಸಸಿ ಇತ್ಯಾದಿಗಳನ್ನು ಲಭ್ಯಮಾಡಿಕೊಡುವ ನಿಯೋಜನೆಯನ್ನು ಮಾಡಲಾಯಿತು.

ಇ. ಸಾಧಕರಿಗೆ ತೋಟಗಾರಿಕೆಗೆ ಬೇಕಾಗುವ ವಸ್ತುಗಳು, ಉದಾ. ಮಣ್ಣು, ಸಣ್ಣ ಸಣ್ಣ ಪ್ಲಾಸ್ಟಿಕಿನ ಡಬ್ಬಿಗಳನ್ನು ಲಭ್ಯಮಾಡಿಕೊಡುವ ಯೋಜನೆಯನ್ನೂ ಮಾಡಲಾಯಿತು.

ಈ. ತೋಟಗಾರಿಕೆಯ ಆಸಕ್ತಿ ಇರುವ ಕೆಲವು ಸಾಧಕರು ತಮ್ಮ ಮನೆಗಳಲ್ಲಿಯೇ ಸಸಿಗಳನ್ನು ತಯಾರಿಸಿ ಅವುಗಳನ್ನು ಸುತ್ತಮುತ್ತಲೂ ವಾಸಿಸುವ ಸಾಧಕರಿಗೂ ವಿತರಿಸಿದರು.

ಉ. ಮೆಣಸಿನಕಾಯಿ, ಡಬ್ಬುಮೆಣಸಿನ ಕಾಯಿ, ಟೊಮ್ಯಾಟೊ, ಕೊತ್ತಂಬರಿ, ಹಸಿಶುಂಠಿ, ಹೀರೆಕಾಯಿ  ಕೆಸುವಿನ ಎಲೆ, ನೀರುಳ್ಳಿ, ಹಾಲುಗುಂಬಳಕಾಯಿ, ಪಾಲಕ, ಸೋರೆಕಾಯಿ, ಬದನೆಕಾಯಿ ಇತ್ಯಾದಿ ತರಕಾರಿಗಳು ಮತ್ತು ಕಬ್ಬು, ಹಸಿ ಅರಸಿನ, ಕರಿಬೇವು (ಒಗ್ಗರಣೆ ಸೊಪ್ಪು), ಹಾಗೆಯೇ ಅಮೃತಬಳ್ಳಿ, ಅಜ್ವಾನ, ತುಳಸಿ, ಸಾಂಬಾರಬಳ್ಳಿ, ಮಜ್ಜಿಗೆ ಹುಲ್ಲು, ಇತ್ಯಾದಿ ಔಷಧಿ ಗಿಡಗಳ ತೋಟಗಾರಿಕೆಯನ್ನು ಸಾಧಕರು ಮಾಡಿದರು. ಈ ಪ್ರಯತ್ನದಿಂದ ಸಾಧಕರಲ್ಲಿ ಸಂಘಟನೆಯ ಭಾವ ಮೂಡಲು ಸಹಾಯವಾಯಿತು.

೩. ತೋಟಗಾರಿಕೆಯ (ತರಕಾರಿ ಮತ್ತು ಗಿಡ ಬೆಳೆಸಲು) ಉತ್ಸಾಹದಲ್ಲಿ ಸಾತತ್ಯವಿರಿಸಲು ಮಾಡಿದ ಪ್ರಯತ್ನಗಳು

ಅ. ಜಿಲ್ಲೆಯಲ್ಲಿನ ಸತ್ಸಂಗಗಳಲ್ಲಿ ‘ಮನೆಮನೆಗಳಲ್ಲಿ ಕೈದೋಟ’ ಎಂಬ ವಿಷಯದ ಬಗ್ಗೆ ಚರ್ಚೆಯನ್ನು ಮಾಡಲಾಗುತ್ತಿತ್ತು. ಸಾಧಕರು ಸ್ವತಃ ಮಾಡಿದ ಪ್ರಯತ್ನ ಮತ್ತು ಗಿಡಗಳನ್ನು ಬೆಳೆಸುವಾಗ ಬರುವ  ಅಡಚಣೆಗಳನ್ನು ಹೇಳುತ್ತಿದ್ದರು. ತೋಟಗಾರಿಕೆಯ ಅನುಭವವಿರುವ ಸಾಧಕರು ಅಡಚಣೆಗಳಿಗೆ ಪರಿಹಾರೋಪಾಯಗಳನ್ನು ಹೇಳುತ್ತಿದ್ದರು. ಈ ಸೇವೆಯನ್ನು ಮಾಡುವಾಗ ಬಂದಿರುವ ಅನುಭೂತಿಗಳನ್ನೂ ಸತ್ಸಂಗದಲ್ಲಿ ಹೇಳುತ್ತಿದ್ದರು.

ಆ. ಕೆಲವರು ತಾವು ಬೆಳೆಸಿರುವ ಗಿಡಗಳ ಚಿತ್ರಗಳನ್ನು ಕಳುಹಿಸುತ್ತಿದ್ದರು. ಇದರಿಂದ ಸಾಧಕರಿಗೆ ಇತರರ ಆನಂದದಲ್ಲಿ ಭಾಗವಹಿಸಲು ಸಾಧ್ಯವಾಯಿತು.

ಇ. ಸಾಧಕರು ತೋಟಗಾರಿಕೆಯ ಸೇವೆಯನ್ನು ಮಾಡುತ್ತಿರುವಾಗ ತಮಗೆ ಬಂದ ಅನುಭೂತಿಗಳನ್ನು ಬರೆದು ‘ಸನಾತನ ಪ್ರಭಾತ’ಕ್ಕೆ ಕಳುಹಿಸಿದರು. ಆ ಅನುಭೂತಿಗಳು ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಾಶಿತವಾದಾಗ ಇತರ ಸಾಧಕರಿಗೂ ಅದರಿಂದ ಪ್ರೇರಣೆ ಸಿಕ್ಕಿತು.

ಈ. ಪೇಟೆಯಿಂದ ಖರೀದಿ ಮಾಡಿ ತಂದಿರುವ, ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಿದ ತರಕಾರಿಗಳಿಗಿಂತ ಮನೆಯಲ್ಲಿ ಬೆಳೆಸಿದ ವಿಷಮುಕ್ತ ತರಕಾರಿಗಳು ತುಂಬಾ ರುಚಿಯಾಗಿರುತ್ತವೆ, ಸಾಧಕರು ಇದನ್ನು ಅನುಭವಿಸಿದ ನಂತರ ಅವರಿಂದಾಗುವ ತೋಟಗಾರಿಕೆಯ ಪ್ರಯತ್ನಗಳಲ್ಲಿ ಸಾತತ್ಯ ಬಂತು.

೪. ಸಾಧಕರು ಭಾವದ ಸ್ತರದಲ್ಲಿ ಮಾಡಿದ ಪ್ರಯತ್ನಗಳು

ಅ. ಕೆಲವು ಸಾಧಕರು ‘ಗಿಡಗಳನ್ನು ನೆಡುವಾಗ, ಹಾಗೆಯೇ ಅವುಗಳನ್ನು ಜೋಪಾನ ಮಾಡುವಾಗ ‘ಇವು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮಗೆ ನೀಡಿದ ಅಮೂಲ್ಯ ಉಡುಗೊರೆಗಳೇ ಆಗಿವೆ ಮತ್ತು ನಾವು ಅವುಗಳನ್ನು ಜೋಪಾನ ಮಾಡುತ್ತಿದ್ದೇವೆ’, ಎಂಬ ಭಾವವನ್ನಿಟ್ಟರು.

ಆ. ಕೆಲವು ಸಾಧಕರು ‘ತಾವು ನೆಟ್ಟಿರುವ ಸಸಿಗಳು ಬಾಲಸಾಧಕರಾಗಿದ್ದಾರೆ ನಾವು ಅವರನ್ನು ಜೋಪಾನ ಮಾಡಬೇಕು’, ಎಂಬ ಭಾವವನ್ನಿಟ್ಟರು. ಆದ್ದರಿಂದ ಗಿಡಗಳಿಗೆ ನೀರನ್ನು ಹಾಕದೆ ಸ್ವತಃ ಮಹಾಪ್ರಸಾದ ಸೇವನೆಗೆ ಹೋಗುವಾಗ ‘ಮೊದಲು ಗಿಡಗಳಿಗೆ ನೀರನ್ನು ಹಾಕೋಣ’, ಎಂಬ ವಿಚಾರ ಬರುತ್ತಿತ್ತು.

ಇ. ಕೆಲವರು ಸಸಿಗಳನ್ನು ನೆಡುವಾಗ ಅವುಗಳ ಬಗ್ಗೆ ಕೃತಜ್ಞತಾ ಭಾವವನ್ನಿಟ್ಟರು. ಮನೆಗಳಲ್ಲಿ ಬೆಳೆಸಿದ ತರಕಾರಿಗಳನ್ನು ಸಾಧಕರು ಸಮೀಪದ ಸೇವಾಕೇಂದ್ರಗಳಿಗೂ ಕಳುಹಿಸುತ್ತಿದ್ದರು.

೫. ತೋಟಗಾರಿಕೆಯ ವಿಷಯದಲ್ಲಿ ಮಾಡಿದ ಆಧ್ಯಾತ್ಮಿಕ ಸ್ತರದ ಉಪಾಯಗಳು

ಸಾಧಕರು ಗಿಡಗಳನ್ನು ನೆಡುವಾಗ, ಹಾಗೆಯೇ ಅವುಗಳಿಗೆ ನೀರು ಕೊಡುವಾಗ ನಾಮಜಪ ಮಾಡುವುದು, ಆಧ್ಯಾತ್ಮಿಕ ತೊಂದರೆಗಳಿಂದ ರಕ್ಷಣೆಯಾಗಲು ಗಿಡಗಳ ಮೇಲೆ ವಿಭೂತಿಯನ್ನು ಊದುವುದು, ಗೋಮೂತ್ರ ಸಿಂಪಡಿಸುವುದು ಇತ್ಯಾದಿ ಉಪಾಯಗಳನ್ನು ಮಾಡಿದರು. ಆದ್ದರಿಂದ ಅನೇಕ ಸಾಧಕರಿಗೆ ತೋಟಗಾರಿಕೆಗೆ ಸ್ಥಳ ಕಡಿಮೆಯಿದ್ದರೂ ಹೆಚ್ಚು ಪ್ರಮಾಣದಲ್ಲಿ ಉತ್ಪನ್ನ ಬರುತ್ತಿರುವುದರ ಅನುಭೂತಿಗಳು ಬಂದವು.

‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮ್ಮೆಲ್ಲ ಸಾಧಕರಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿ ಅವರ ಚರಣಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’ (೧೭.೭.೨೦೨೨)

– ಸೌ. ಮನಿಷಾ ಪಾಠಕ (ಆಧ್ಯಾತ್ಮಿಕ ಮಟ್ಟ ಶೇ. ೬೯), ಪುಣೆ

ಪ್ರಜಾಪ್ರಭುತ್ವವನ್ನು ಸ್ಥಿರ ಮಾಡುವುದಕ್ಕಾಗಿ ಹಣದ ಅಪವ್ಯಯವನ್ನು ನಿಲ್ಲಿಸಿರಿ

ಇಂದು ಚುನಾವಣೆ ಎಂದರೆ ಮತದಾನ ಹಾಗೂ ಹಣ, ಎಂಬ ಸಮೀಕರಣವಾಗಿದೆ ಹಣ ಹಂಚದೆ ಮತದಾನವಾಗುವುದು, ಆಗಲೇ ನಿಜವಾದ ಮತದಾನವಾಗಿದೆ, ಎಂದು ಹೇಳಬಹುದು. ಅನೇಕರು ಹಣ ಪಡೆದುಕೊಂಡು ಮತದಾನಕ್ಕೆ ಹೋಗುವುದಿಲ್ಲ. ಹಣ ನೀಡದೆ ಮತದಾನವಾಗುವುದು ಮತದಾರನಿಗೆ ವಿಚಾರ ಮಾಡುವಂತಾಗುವುದು. ಪ್ರಜಾಪ್ರಭುತ್ವವು ಒಳ್ಳೆಯ ಮಾರ್ಗದಲ್ಲಿ ಸ್ಥಿರವಾಗಬೇಕಾದರೆ ಕಪ್ಪು ಹಣದ ಉಪಯೋಗವನ್ನು ನಿಲ್ಲಿಸಬೇಕು ಹಾಗೆಯೇ ಪ್ರತಿಯೊಬ್ಬ ರಾಜಕೀಯ ಮುಖಂಡರ ಸಂಪತ್ತನ್ನು ಯಾವಾಗಲೂ ತಪಾಸಣೆ ಮಾಡುವುದು ಆವಶ್ಯಕವಾಗಿದೆ. ಯಾರಾದರೊಬ್ಬ ಅಭ್ಯರ್ಥಿಯ ಸಂಪತ್ತು ಇಂದು ೧ ಕೋಟಿಯಿದ್ದರೆ ಹಾಗೂ ೫ ವರ್ಷದಲ್ಲಿ ಅದು ೧೦೦ ಕೋಟಿಯಾಗುತ್ತದೆ ಇದರ ಅನ್ವೇಷಣೆಯಾಗುವುದು ಆವಶ್ಯಕವಾಗಿದೆ. ಈ ಸಮಯದಲ್ಲಿ ಅವರು ಭ್ರಷ್ಟಾಚಾರದಿಂದ ಗಳಿಸಿದ ಹಣವನ್ನು ಸರಕಾರಕ್ಕೆ ಒಪ್ಪಿಸುವುದು ಆವಶ್ಯಕವಾಗಿದೆ ಆಗ ಪ್ರಜಾಪ್ರಭುತ್ವವು ಸುಧಾರಿಸುವುದು.

– ಅನುರಾಧಾ ಮೆಹೆಂದಳೆ (ಕೃಪೆ : ಲೋಕಜಾಗರ, ೧೭ ನವೆಂಬರ್ ೨೦೧೭)