ರಾಹುಲ ಗಾಂಧಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ !

ಮಧ್ಯಪ್ರದೇಶದ ಇಂದೂರಿನ ಮಿಠಾಯಿಯ ಅಂಗಡಿಯಲ್ಲಿ ಬೆದರಿಕೆಯ ಪತ್ರ ಪತ್ತೆ

ಇಂದೂರ (ಮಧ್ಯಪ್ರದೇಶ) – ಸಧ್ಯ ‘ಭಾರತ ಜೋಡೊ’ ಯಾತ್ರೆಯಲ್ಲಿ ಭಾಗವಹಿಸಿರುವ ಕಾಂಗ್ರೆಸ ಮುಖಂಡ ರಾಹುಲ ಗಾಂಧಿಯವರು ಮಧ್ಯಪ್ರದೇಶದ ಇಂದೂರನ್ನು ತಲುಪುತ್ತಲೇ ಅವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಒಂದು ಪತ್ರದ ಮೂಲಕ ಬೆದರಿಕೆಯನ್ನು ಹಾಕಿದ್ದಾರೆ. ಈ ಪತ್ರ ಇಂದೂರಿನಲ್ಲಿರುವ ಒಂದು ಮಿಠಾಯಿಯ ಅಂಗಡಿಯಲ್ಲಿ ಕಂಡು ಬಂದಿದೆ. ಪೊಲೀಸರು ಈ ಪತ್ರವನ್ನು ಜಪ್ತಿ ಮಾಡಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸರು ಸಂಬಂಧಿಸಿದ ಅಂಗಡಿಯಲ್ಲಿ ಜೋಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ಚಿತ್ರೀಕರಣವನ್ನು ಪರಿಶೀಲಿಸುತ್ತಿದೆ.

ಪೊಲೀಸರ ಅಭಿಪ್ರಾಯದಂತೆ, ಬೆದರಿಕೆ ಪತ್ರವನ್ನು ಅಪರಿಚಿತ ವ್ಯಕ್ತಿಯು ಅಂಗಡಿಯಲ್ಲಿ ಇಟ್ಟಿದ್ದಾರೆ. ತದನಂತರ ಅಂಗಡಿಕಾರನು ಅದನ್ನು ಪೊಲೀಸರಿಗೆ ಒಪ್ಪಿಸಿದನು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯನುಸಾರ, ‘ರಾಹುಲ ಗಾಂಧಿಯವರು ಇಂದೂರಿನಲ್ಲಿ ಖಾಲಸಾ ವಿಶ್ವವಿದ್ಯಾಲಯದಲ್ಲಿ ವಾಸ್ತವ್ಯವಿರಲಿದ್ದಾರೆ. ಆಗ ಅವರನ್ನು ಬಾಂಬ್ ನಿಂದ ಸ್ಪೋಟಿಸಲಾಗುವುದು’, ಎಂದು ಪತ್ರದಲ್ಲಿ ಉಲ್ಲೇಖವಿದೆ. ಪತ್ರ ಬರೆಯುವ ವ್ಯಕ್ತಿಯು ತಾನು ಸಿಖ್ ಸಮುದಾಯದವನೆಂದು ತಿಳಿಸಿದ್ದಾನೆ. ಈ ಪತ್ರದಲ್ಲಿ ಅವನು ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಭುಗಿಲೆದ್ದ ಸಿಖ್ ವಿರೋಧಿ ಗಲಭೆಯನ್ನು ಉಲ್ಲೇಖಿಸಿದ್ದಾನೆ. ಪತ್ರದ ಕೊನೆಯಲ್ಲಿ ಒಂದು ಸಂಚಾರವಾಣಿ ಸಂಖ್ಯೆಯನ್ನು ನೀಡಲಾಗಿದೆ. ‘ಆ ದಿನ ಸಂಪೂರ್ಣ ಇಂದೂರ ನಗರ ಸ್ಫೋಟದಿಂದ ಹೆದರುವುದು’, ಎಂದು ಎಚ್ಚರಿಕೆಯನ್ನು ಈ ಪತ್ರದಲ್ಲಿ ತಿಳಿಸಿದ್ದಾನೆ.