ಬೇಟ ದ್ವಾರಕೆಯಲ್ಲಿನ ಅಕ್ರಮ ಮಸೀದಿಗಳ ಮೇಲಿನ ಕಾರ್ಯಾಚರಣೆ ಶೇಕಡ ೪೦ ರಷ್ಟು ಪೂರ್ಣ !

ದ್ವಾರಕ (ಗುಜರಾತ) – ಇಲ್ಲಿಯ ಬೇಟ ದ್ವಾರಕೆಯಲ್ಲಿನ ಜನಸಂಖ್ಯೆ ೧೨ ಸಾವಿರ ೫೦೦ ರಷ್ಟು ಇದ್ದರು ಅದರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಖಡ ೮೦ ರಷ್ಟು ಇದೆ. ಅಂದರೆ ೯ ಸಾವಿರ ೫೦೦ ಮುಸಲ್ಮಾನರು ಅಲ್ಲಿ ವಾಸವಾಗಿದ್ದಾರೆ. ಕೇವಲ ೬೨ ವರ್ಷದಲ್ಲಿ ಮುಸಲ್ಮಾನರ ಜನಸಂಖ್ಯೆ ಹಿಂದೂಗಳಿಗಿಂತ ಹೆಚ್ಚಾಗಿದೆ. ಇಲ್ಲಿಯ ಭೂಮಿಯ ಮೇಲೆ ಅಕ್ರಮ ಕಾಮಗಾರಿ ನಡೆಸಿ ಅಲ್ಲಿ ಮಸೀದಿ ಕಟ್ಟಲಾಗಿದೆ. (ಒಂದು ಚಿಕ್ಕ ದ್ವಿಪದಲ್ಲಿ ಮುಸಲ್ಮಾನರ ಜನಸಂಖ್ಯೆ ಹಿಂದುಗಳಿಗಿಂತ ಹೆಚ್ಚಾದ ನಂತರ ಏನಾಗುತ್ತೆ, ಇದು ನೋಡುತ್ತಿದ್ದರೆ ಗ್ರಾಮ, ತಾಲೂಕ, ಜಿಲ್ಲೆ, ರಾಜ್ಯ ಮತ್ತು ಸಂಪೂರ್ಣ ದೇಶದಲ್ಲಿನ ಇವರ ಸಂಖ್ಯೆ ಹೆಚ್ಚಾದರೆ ಏನಾಗಬಹುದು ಇದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ! ಇದೇ ಜನಸಂಖ್ಯೆ ಶಸ್ತ್ರದ ಆಧಾರದಲ್ಲಿ ಭಾರತವನ್ನು ಇಸ್ಲಾಮಿಸ್ತಾನ್ ಆಗುವ ಮೊದಲೇ ಹಿಂದೂಗಳು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ! – ಸಂಪಾದಕರು) ಕಳೆದ ಅಕ್ಟೋಬರ್ ತಿಂಗಳಿಂದ ಇಲ್ಲಿಯ ಅಕ್ರಮ ಕಾಮಗಾರಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿಯವರೆಗೆ ೧೦೦ ಕ್ಕೂ ಹೆಚ್ಚಿನ ಅತಿಕ್ರಮಣದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಶೇಕಡ ೪೦ ರಷ್ಟು ಕಾರ್ಯಾಚರಣೆ ಪೂರ್ಣವಾಗಿದೆ. ಉಳಿದಿರುವ ಕಾರ್ಯಾಚರಣೆ ನಡೆಯುತ್ತಿದೆ. ಬೇಟ ದ್ವಾರಕಾದಿಂದ ಕೇವಲ ೨ ಗಂಟೆಯ ಸಮಯದ ಅಂದರೆ ೧೦೫ ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನದ ಕರಾಚಿ ನಗರ ಇದೆ.

೧. ಬೇಟ ದ್ವಾರಕ ಈ ಪ್ರದೇಶ ಮೂಲತಃ ದ್ವಾರಕೆಯಿಂದ ೩೫ ಕಿಲೋಮೀಟರ್ ಅಂತರದಲ್ಲಿದೆ. ಬೇಟ ದ್ವಾರಕದ ನಾಲ್ಕು ದಿಕ್ಕಿಗೂ ಸಮುದ್ರ ಇದೆ. ಇಲ್ಲಿಂದಲೇ ಅನೇಕ ಮೀನುಗಾರರು ಸಮುದ್ರದಲ್ಲಿ ಅಂತರಾಷ್ಟ್ರೀಯ ಗಡಿಗೆ ಹೋಗುತ್ತಾರೆ ಮತ್ತು ಹಿಂತಿರುಗುತ್ತಾರೆ.

೨. ೨೦೦೫ ರಲ್ಲಿ ಬೇಟ ದ್ವಾರಕೆಯ ದಡದ ಮೇಲೆ ೬ ಮಸೀದಿ ಇರುವ ದಾಖಲೆ ಇತ್ತು; ಆದರೆ ಕಳೆದ ೧೭ ವರ್ಷದಲ್ಲಿ ಮಸೀದಿಯ ಸಂಖ್ಯೆ ೭೮ ತಲುಪಿದೆ. ಈಗ ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಿ ಹೋಗುವುದಕ್ಕೆ ಪತ್ರಕರ್ತರಿಗೂ ಸರಕಾರದ ಅನುಮತಿ ಪಡೆಯಬೇಕಾಗುತ್ತದೆ.

೩. ಈ ದ್ವೀಪದ ಮೇಲೆ ಮುಸಲ್ಮಾನರು ಅವರ ಮಕ್ಕಳ ವಿವಾಹ ಪಾಕಿಸ್ತಾನದಲ್ಲಿನ ಮುಸಲ್ಮಾನರ ಜೊತೆ ಮಾಡುತ್ತಿದೆ. ಈ ಎಲ್ಲಾ ವ್ಯವಹಾರ ಮರೆ ಮಾಚಿ ನಡೆದಿರುವುದು ಎಂದು ಪೊಲೀಸ ಆಡಳಿತಕ್ಕೆ ಮಾಹಿತಿ ಇದೆ. ಈ ದೃಷ್ಟಿಯಿಂದ ಕೂಡ ಅತಿ ಸೂಕ್ಷ್ಮ ಪ್ರದೇಶ ಎಂದು ಪ್ರಸ್ತುತ ಬೇಟ ದ್ವಾರಕೆಯ ಕಡೆಗೆ ನೋಡಲಾಗುತ್ತಿದೆ.

೪. ದ್ವೀಪದ ಇತಿಹಾಸದ ಪ್ರಕಾರ ಇಲ್ಲಿ ೧೯೪೫ ರಲ್ಲಿ ಗಾಯಕವಾಡಿ ಇತ್ತು . ಅಂದರೆ ಬಡೋದ ಸಂಸ್ಥಾನದ ರಾಜ್ಯವಾಗಿತ್ತು. ಬಡೋದಾದ ಶಾಸಕ ಗಾಯಕವಾಡ ಇವರು ಮುಸಲ್ಮಾನರಿಗೆ ಇಲ್ಲಿ ಕೆಲವು ಸ್ಥಳ ಉಪಲಬ್ಧ ಮಾಡಿಕೊಟ್ಟರು. ೧೯೬೦ ರ ಜನಗಣತಿಯ ಪ್ರಕಾರ ಬೇಟ ದ್ವಾರಕಾದಲ್ಲಿ ೬೦೦ ಮುಸಲ್ಮಾನರು ಮತ್ತು ೨ ಸಾವಿರ ೭೮೬ ಹಿಂದೂ ಮತದಾರರಿದ್ದರು. ಜನಸಂಖ್ಯೆಯ ಶೇಕಡಾವಾರು ಆಧಾರದ ಪ್ರಕಾರ ಮತ್ತು ಕಾಲದ ಪ್ರಕಾರ ಇಲ್ಲಿಯ ಹಿಂದೂಗಳ ಸಂಖ್ಯೆ ೬ ಸಾವಿರ ಹಾಗೂ ಮುಸಲ್ಮಾನರ ಸಂಖ್ಯೆ ೧ ಸಾವಿರ ೨೦೦ ಆಗಬೇಕಿತ್ತು. ಆದರೆ ಪ್ರತ್ಯಕ್ಷದಲ್ಲಿ ಮುಸಲ್ಮಾನರ ಜನಸಂಖ್ಯೆ ೯ ಸಾವಿರ ೫೦೦ ಆಗಿದೆ. ಹಾಗೂ ಹಿಂದೂಗಳ ಸಂಖ್ಯೆ ಅದಕ್ಕಿಂತಲೂ ಕಡಿಮೆ ಇದೆ.