ಎಲ್ಲಿಯವರೆಗೆ ಭಯೋತ್ಪಾದನೆ ಸಂಪೂರ್ಣವಾಗಿ ಮುಗಿಸುವುದಿಲ್ಲ, ಅಲ್ಲಿಯವರೆಗೆ ಶಾಂತವಾಗಿ ಕೂರುವುದಿಲ್ಲ !

ಪ್ರಧಾನಿ ನರೇಂದ್ರ ಮೋದಿ ಇವರ ನಿರ್ಧಾರ

ನವ ದೆಹಲಿ – ಒಂದುವೇಳೆ ನಮಗೆ ಏನಾದರೂ ನಾಗರೀಕರನ್ನು ಸುರಕ್ಷಿತವಾಗಿ ಇಡಬೇಕಿದ್ದರೆ, ಭಯೋತ್ಪಾದಕರು ನಮ್ಮ ಮನೆಗೆ ಬರುವವರೆಗೂ ನಾವು ಕಾಯಬಾರದು. ನಾವು ಭಯೋತ್ಪಾದನೆಯ ಮಾಹಿತಿ ಕಲೆ ಹಾಕುತ್ತಾ ಅದನ್ನು ಹುಡುಕಬೇಕು ಮತ್ತು ಅದರ ಬಲೆ ನಾಶ ಮಾಡಬೇಕು ಮತ್ತು ಅದರ ಆರ್ಥಿಕ ಪೂರೈಕೆ ತಡೆಯಬೇಕು. ಪ್ರತಿಯೊಂದು ದಾಳಿಯು ಇದು ಅನೇಕರ ಮೇಲೆ ನಡೆಯುವ ದಾಳಿಯಾಗಿದೆ ಹೀಗೆ ನಾವು ತಿಳಿದಿದ್ದೇವೆ. ಒಬ್ಬ ವ್ಯಕ್ತಿಯ ಜೀವನ ಇದು ನಮಗಾಗಿ ಅನೇಕರಿಗೆ ಸಮಾನವಾಗಿದೆ. ಆದ್ದರಿಂದ ಎಲ್ಲಿಯವರೆಗೆ ಭಯೋತ್ಪಾದನೆ ಸಂಪೂರ್ಣವಾಗಿ ಮುಗಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಶಾಂತವಾಗಿ ಕೂರುವದಿಲ್ಲ, ಎಂದು ಪ್ರಧಾನಿ ಮೋದಿ ಅವರು ನಿರ್ಧಾರ ವ್ಯಕ್ತಪಡಿಸಿದರು. ಇಲ್ಲಿ ‘ನೋ ಮನಿ ಫಾರ್ ಟೆರರ್’ (ಭಯೋತ್ಪಾದನೆಗೆ ಹಣಪೂರೈಕೆ ಇಲ್ಲ) ಈ ವಿಷಯದ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ‘ಭಯೋತ್ಪಾದನೆಗೆ ಪೂರೈಸಲಾಗುವ ಆರ್ಥಿಕ ಸಹಾಯ’, ಇದೇ ಈ ಸಭೆಯ ಮುಖ್ಯ ವಿಷಯವಾಗಿತ್ತು.

ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಯಾವ ಸಂಸ್ಥೆ ಮತ್ತು ವ್ಯಕ್ತಿ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಾರೆ ಅವರನ್ನು ಬೇರ್ಪಡಿಸಬೇಕು.

೨. ಕೆಲವು ದೇಶ ತಮ್ಮ ವಿದೇಶಿ ಧೋರಣೆಯ ಭಾಗವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಾರೆ. ಅದು ರಾಜಕೀಯ ಹಾಗೂ ಆರ್ಥಿಕ ಬೆಂಬಲದ ಆಶ್ವಾಸನೆ ನೀಡುತ್ತಾರೆ. ಇಂತಹ ದೇಶಗಳಿಗೆ ಶಿಕ್ಷಿಸುವ ಅವಶ್ಯಕತೆ ಇದೆ.

೩. ಭಾರತಕ್ಕೆ ಕಳೆದ ಅನೇಕ ದಶಕಗಳಿಂದ ಭಯೋತ್ಪಾದನೆಯಿಂದ ಪೆಟ್ಟು ಬೀಳುತ್ತಿದೆ. ಪ್ರತಿ ಸಾರಿ ನಾವು ಅದನ್ನು ಧೈರ್ಯದಿಂದ ಎದುರಿಸಿದ್ದೇವೆ.