ಟಿಕೆಟ್ ಪರೀಕ್ಷಕನು ಸೈನಿಕನಿಗೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದರು : ಒಂದು ಕಾಲು ತುಂಡು

ಬರೆಲಿ (ಉತ್ತರಪ್ರದೇಶ) – ರೈಲಿನಲ್ಲಿ ಟಿಕೆಟ್ ಪರೀಕ್ಷಣೆಗಾಗಿ ಬಂದಿರುವ ಪರೀಕ್ಷಕನು ಓರ್ವ ಸೈನಿಕನನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿರುವ ಆಘಾತಕಾರಿ ಘಟನೆ ನಡೆದಿದೆ. ಬರೆಲಿ ರೈಲು ನಿಲ್ದಾಣದಲ್ಲಿ ನಡೆದಿರುವ ಈ ಘಟನೆಯಲ್ಲಿ ಸೈನಿಕನ ಒಂದು ಕಾಲುಗಳು ನಿಷ್ಪಷ್ರಯೋಜನವಾಗಿದೆ.

(ಸೌಜನ್ಯ : Amrit Vichar)

ಸಿಕ್ಕಿರುವ ಮಾಹಿತಿಯ ಪ್ರಕಾರ ಬರೆಲಿ ರೈಲು ನಿಲ್ದಾಣದಲ್ಲಿ ನವಂಬರ್ ೧೭ ರಂದು ಬೆಳಿಗ್ಗೆ ಪ್ಲಾಟ್‌ಫಾರ್ಮ್ ಸಂಖ್ಯೆ ೨ ರಲ್ಲಿ ದಿಬ್ರುಗಡ್-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್‌ನಲ್ಲಿ ಸೂಪಕ ಬುರೆ ಎಂಬ ಟಿಕೆಟ್ ಪರೀಕ್ಷಕನ ಸೈನಿಕನ ಜೊತೆ ಟಿಕೆಟ್ ವಿಷಯವಾಗಿ ವಾದ ನಡೆಯಿತು. ಆ ಸಮಯದಲ್ಲಿ ಕೋಪಗೊಂಡ ಬುರೆ ಇವನು ಸೈನಿಕನನ್ನು ರೈಲಿನಿಂದ ನೇರ ಕೆಳಗೆ ತಳ್ಳಿದನು. ತಳ್ಳಿದ್ದರಿಂದ ಸೈನಿಕ ರೈಲಿನ ಕೆಳಗೆ ಹೋದನು ಮತ್ತು ಅವನ ಒಂದು ಕಾಲುಗಳು ನಿಷ್ಪಷ್ರಯೋಜಕವಾಯಿತು. ಈ ಸೈನಿಕನಿಗೆ ಪ್ರಸ್ತುತ ಸೈನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದ ಬಗ್ಗೆ ರೈಲು ಅಧಿಕಾರಿಗಳು ಹೇಳಿದರು. ಈ ಘಟನೆಯ ನಂತರ ಬುರೆ ಇವನು ಪರಾರಿಯಾಗಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ, ಎಂದು ಉತ್ತರ ರೈಲ್ವೆ ಮುರಾದಾಬಾದ ವಿಭಾಗದ ಹಿರಿಯ ವಿತ್ತ ವ್ಯವಸ್ತಾಪಕ ಸುಧೀರ್ ಸಿಂಹ ಇವರು ಮಾಹಿತಿ ನೀಡಿದರು. ಬುರೆ ಇವರ ವಿರುದ್ಧ ಹತ್ಯೆಯ ಪ್ರಯತ್ನ ಮಾಡಿರುವ ಪ್ರಕರಣದಲ್ಲಿ ಭಾ.ದ.ವಿ.ದ ಕಲಂ ೩೦೭ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ರೈಲು ಪೊಲೀಸ ಠಾಣೆಯ ಪ್ರಮುಖ ಅಜಿತ್ ಪ್ರತಾಪ ಸಿಂಹ ಇವರು ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ಸರಕಾರವು ಇಂತಹ ಮಾನವೀಯತೆ ಇಲ್ಲದಿರುವ ಟಿಕೆಟ್ ಪರೀಕ್ಷಕರನ್ನು ಅಮಾನತುಗೊಳಿಸಿ ಜೀವಾವಧಿ ಶಿಕ್ಷೆ ನೀಡಬೇಕು !