ಅತ್ಯಾಚಾರವನ್ನು ವಿರೋಧಿಸಿದಕ್ಕಾಗಿ ಮುಸಲ್ಮಾನನಿಂದ ಅಪ್ರಾಪ್ತ ಬಾಲಕಿಯ ಹತ್ಯೆ

ಸೋನಿತಪುರ (ಅಸ್ಸಾಂ) – ಅತ್ಯಾಚಾರವನ್ನು ವಿರೋಧಿಸಿದ ೧೪ ವರ್ಷದ ಅಪ್ರಾಪ್ತ ಬಾಲಕಿಯನ್ನು ೪೨ ವರ್ಷದ ಹಜರತ ಎಂಬ ನರಾಧಮನು ಹತ್ಯೆಗೈದನು. (ಜನಸಂಖ್ಯೆಯಲ್ಲಿ ಅಲ್ಪರಾಗಿರುವ ಮುಸಲ್ಮಾನರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರು ! – ಸಂಪಾದಕರು) ಈ ಘಟನೆ ಸೋನಿತಪುರ ಜಿಲ್ಲೆಯ ಢೇಕಿಯಾಜುಲಿ ಈ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಹಜರತನ ಕುಕೃತ್ಯಕ್ಕೆ ತೆರೆ ಎಳೆದಿದ್ದಾರೆ.

ಹಜರತನು ಸಂತ್ರಸ್ತೆಯ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದನು. ಒಂದು ದಿನ ಸಂತ್ರಸ್ತೆಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಸಂತ್ರಸ್ತೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದನು. ಅವಳು ಅದನ್ನು ವಿರೋಧಿಸಿದಾಗ ಹಜರತನು ಆಕೆಯ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದನು. ನವೆಂಬರ್ ೧೫ ರಂದು ಸಂತ್ರಸ್ತೆಯ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಆರಂಭದಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ ತನಿಖೆಯ ನಂತರ ಮೇಲ್ಕಂಡ ವಿಷಯ ಬೆಳಕಿಗೆ ಬಂದಿತು.

ಸಂಪಾದಕೀಯ ನಿಲುವು

ಇಂತಹ ಕಾಮುಮರನ್ನು ಜೀವಾವಧಿ ಶಿಕ್ಷೆ ನೀಡಿದರೆ ಮುಂದೆ ಯಾರೂ ಇಂತಹ ದುಷ್ಕ್ರುತ್ಯ ಮಾಡಲು ಧೈರ್ಯ ಮಾಡಲಾರರು !