|

ಉತ್ತರ ೨೪ ಪರಗನಾ (ಬಂಗಾಲ) – ಇಲ್ಲಿಯ ಚಪಾಲಿ ಗ್ರಾಮದಲ್ಲಿ ತೃಣ ಮೂಲ ಕಾಂಗ್ರೆಸ್ಸಿನ ನಾಯಕ ಅಬೂಲ ಹುಸೈನ್ ಗಾಯೆನ ಇವನ ಮನೆಯಲ್ಲಿ ಚೆಂಡು ಎಂದು ತಿಳಿದು ಬಾಂಬ್ ಜೊತೆ ಆಟ ಆಡುತ್ತಿದ್ದ ಒಬ್ಬ ಚಿಕ್ಕ ಬಾಲಕಿ ಈ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ್ದಾಳೆ. ಹಾಗೂ ಈ ಅಪಘಾತದಲ್ಲಿ ಕೆಲವು ಮಕ್ಕಳು ಗಾಯಗೊಂಡಿದ್ದಾರೆ. ಪೊಲೀಸರು ಅಬುಲ್ ಹುಸೈನ್ ನನ್ನು ಬಂಧಿಸಿದ್ದಾರೆ. ಈ ಘಟನೆ ಚಪಾಲಿ ಗ್ರಾಮದಲ್ಲಿ ನಡೆದಿದೆ. ಗಾಯೆನ ಇವನು ಪಂಚಾಯತ ಚುನಾವಣೆಯಲ್ಲಿ ಅವನ ವರ್ಚಸ್ಸು ಹೆಚ್ಚಿಸಲು ಮನೆಯಲ್ಲಿ ಬಾಂಬ್ ಸಂಗ್ರಹಿಸಿದ್ದನು, ಎಂಬ ಮಾಹಿತಿಯನ್ನು ಪೊಲೀಸ ಅಧಿಕಾರಿ ನೀಡಿದರು. ಗ್ರಾಮದಲ್ಲಿನ ಬಿಗುವಿನ ವಾತಾವರಣ ನೋಡುತ್ತ ಹೆಚ್ಚುವರಿ ಪೊಲೀಸ ಬಂದೋಬಸ್ತ್ ಮಾಡಲಾಗಿದೆ.
ಅಬೂಲ್ ಹುಸೈನ್ ಗಾಯೆನ ಇವನ ಮನೆಯಲ್ಲಿ ಕೆಲವು ಸಂಬಂಧಿಕರು ಬಂದಿದ್ದರು. ಇದರಲ್ಲಿ ಅವರ ೮ ವರ್ಷದ ಝುಮ ಖಾತೂನ್ ಈ ಸೋದರಸೊಸೆಯು ಇದ್ದಳು. ಈ ಹುಡುಗಿ ಗಾಯೆನ ಇವನ ಸಾಕು ಕತ್ತೆಯ ತಲೆಯ ಹತ್ತಿರ ಕಟ್ಟಿರುವ ಬಾಂಬ್ ಜೊತೆ ಚಂಡು ಎಂದು ತಿಳಿದು ಆಟವಾಡುತ್ತಿದ್ದಳು. ಅದೇ ಸಮಯದಲ್ಲಿ ಬಾಂಬ್ ಸ್ಪೋಟವಾಗಿದೆ ಮತ್ತು ಝುಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ, ಎಂದು ಪೊಲೀಸರು ಹೇಳಿದರು.
ಈ ಮೊದಲು ಕೂಡ ತೃಣಮೂಲ ಕಾಂಗ್ರೆಸ್ಸಿನ ನಾಯಕರ ಮನೆಯಲ್ಲಿ ಬಾಂಬ್ ಸ್ಪೋಟ ನಡೆದಿತ್ತು !
ನವಂಬರ್ ೬ ರಂದು ಬಂಗಾಲದಲ್ಲಿನ ಡಂಗಂಗಾದಲ್ಲಿ ತೃಣಮೂಲ ಕಾಂಗ್ರೆಸ್ಸಿನ ನಾಯಕನ ಮನೆಯಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಪೊಲೀಸರು ಈ ಘಟನೆಗೆ ಸಂಬಂಧಿತ ಮಾಹಿತಿ ನೀಡುವಾಗ ಕೆಲವು ಕಾರ್ಮಿಕರು ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ನಾಯಕರ ಸ್ವಾಮ್ಯತ್ವದ ಕಾಮಗಾರಿ ನಡೆಯುವ ಕಟ್ಟಡಗಳಲ್ಲಿ ಕೆಲಸ ಮಾಡುವಾಗ ಈ ಸ್ಫೋಟ ನಡೆದಿರುವ ಬಗ್ಗೆ ಹೇಳಿದರು. ಇದರ ನಂತರ ಪೊಲೀಸರು ೩ ಜೀವಂತ ಬಾಂಬ್ ಘಟನಾ ಸ್ಥಳದಿಂದ ವಶಪಡಿಸಿಕೊಂಡಿದ್ದರು.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!