|
ವಾರಾಣಸಿ (ಉತ್ತರಪ್ರದೇಶ): ವಾರಾಣಸಿಯ ತ್ವರಿತ ದಿವಾಣಿ ನ್ಯಾಯಾಲಯವು ಜ್ಞಾನವಾಪಿಯ ಪ್ರಕರಣದಲ್ಲಿ ಹಿಂದೂ ಪಕ್ಷದಿಂದ ದಾಖಲಿಸಲಾಗಿರುವ ಮನವಿಯ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿ ಅದನ್ನು ದಾಖಲಿಸಿಕೊಂಡಿದೆ. ಈ ಮನವಿಗೆ ಮುಸಲ್ಮಾನರಿಂದ ವಿರೋಧ ವ್ಯಕ್ತವಾಗಿತ್ತು. ಈ ಮನವಿಯಲ್ಲಿ ಮನವಿಕರ್ತರಾದ ಕಿರಣ ಸಿಂಹ ಇವರು ಜ್ಞಾನವಾಪಿಯ ಪರಿಸರದಲ್ಲಿ ಮುಸಲ್ಮಾನರ ಪ್ರವೇಶ ನಿಷೇಧಿಸಬೇಕು. ಈ ಸಂಪೂರ್ಣ ಪರಿಸರವನ್ನು ಹಿಂದೂಗಳಿಗೆ ಒಪ್ಪಿಸಿ ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಕ್ಕೆ ಪೂಜೆ ಮಾಡುವ ಅನುಮತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಇದರ ಬಗ್ಗೆ ಈಗ ಡಿಸೆಂಬರ್ ೨ ರಂದು ವಿಚಾರಣೆ ನಡೆಯಲಿದೆ. ಇದು ತ್ವರಿತ ನ್ಯಾಯಾಲಯ ಇರುವುದರಿಂದ ಈ ಪ್ರಕರಣದ ಬಗ್ಗೆ ವಿಚಾರಣೆ ಬೇಗ ನಡೆದು ತೀರ್ಪು ಬೇಗನೆ ಬರುವ ಸಾಧ್ಯತೆ ಇದೆ. ಈ ವಿಷಯದ ಬಗ್ಗೆ ವಿಶ್ವ ವೈದಿಕ ಸನಾತನ ಸಂಘದ ಕಾರ್ಯಕಾರಿ ಅಧ್ಯಕ್ಷ ಸಂತೋಷ ಸಿಂಹ ಇವರು, ಇದು ನಮ್ಮ ದೊಡ್ಡ ಗೆಲುವು ಆಗಿರುವುದು. ಈಗ ವಿಚಾರಣೆಯಲ್ಲಿ ನಮ್ಮ ಬೇಡಿಕೆ ಒಪ್ಪಲಾಗುವುದು ಎಂದು ನಮಗೆ ಅಪೇಕ್ಷೆ ಇದೆ ಎಂದು ಹೇಳಿದರು.
Gyanvapi Case: Varanasi Court To Hear Plea Seeking Worship Of ‘Shivling’ Found In Mosque Complex#GyanvapiCasehttps://t.co/PenMheqyjZ
— ABP LIVE (@abplive) November 17, 2022
ಮುಂದಿನ ವರ್ಷ ಸರ್ವೋಚ್ಚ ನ್ಯಾಯಾಲಯವು ಪೂಜಾಸ್ಥಳ ಕಾನೂನಿನ ಸಂದರ್ಭದಲ್ಲಿ ಕೂಡ ವಿಚಾರಣೆ ನಡೆಸಲಿದೆ ಈ ಮನವಿ ಜ್ಞಾನವಾಪಿಗೆ ಸಂಬಂಧಪಟ್ಟದ್ದಾಗಿದೆ. ಇದರಲ್ಲಿ ಡಿಸೆಂಬರ್ ೧೨ ವರೆಗೆ ಕೇಂದ್ರ ಸರಕಾರಕ್ಕೆ ಈ ವಿಷಯದ ಬಗ್ಗೆ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಬೇಕಿದೆ. ಅದರ ನಂತರ ಜನವರಿಯಲ್ಲಿ ಇದರ ಬಗ್ಗೆ ವಿಚಾರಣೆ ನಡೆಯಲಿದೆ.