ಹಜಾರಿಬಾಗ(ಝಾರಖಂಡ)ನಲ್ಲಿ ‘ಮತಾಂಧರಿಂದ ಹಿಂದೂ ಬಾಲಕಿಯ ಅಪಹರಣ

ಝಾರಖಂಡನಲ್ಲಿ ‘ಲವ್ ಜಿಹಾದ’ ಹೊಸ ಪ್ರಕರಣ ಬಹಿರಂಗ

ಹಜಾರಿಬಾಗ(ಝಾರಖಂಡ)– ಇಲ್ಲಿಂದ ಮತಾಂಧರು ಒಬ್ಬ ಹದಿಹರೆಯದ ಹಿಂದೂ ಬಾಲಕಿಯನ್ನು ಅಪಹರಿಸಿದ ಪ್ರಕರಣ ಬಹಿರಂಗವಾಗಿದೆ. ಸಂತ್ರಸ್ತ ಬಾಲಕಿ ಬೆಂಗಳೂರಿನಲ್ಲಿ ಕಂಡು ಬಂದಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ‘ಬಲವಂತದಿಂದ ಮತಾಂತರಗೊಳಿಸಿ ವಿವಾಹ ಮಾಡುವ ಉದ್ದೇಶದಿಂದ ನನ್ನ ಮಗಳನ್ನು ಅಪಹರಿಸಿದ್ದಾರೆ’, ಎಂದು ಬಾಲಕಿಯ ತಾಯಿ ಆರೋಪಿಸಿದ್ದಾಳೆ.

ಪೀಡಿತ ಬಾಲಕಿಯ ತಾಯಿಯು, ‘ನವೆಂಬರ ೪ ರಂದು ಶಾಹಿದ ಅನ್ಸಾರಿ ಮತ್ತು ಅರ್ಬಾಜ ಅನ್ಸಾರಿ ನಮ್ಮ ಮನೆಯಲ್ಲಿ ನುಗ್ಗಿ, ನನ್ನ ಮಗಳನ್ನು ದ್ವಿಚಕ್ರ ವಾಹನದ ಮೇಲೆ ಓಡಿಸಿಕೊಂಡು ಹೋಗಿದ್ದಾರೆ. ಆರೋಪಿ ೬ ತಿಂಗಳುಗಳಿಂದ ನನ್ನ ಮಗಳನ್ನು ಓಡಿಸಿಕೊಂಡು ಹೋಗುವ ಬೆದರಿಕೆಯನ್ನು ಹಾಕುತ್ತಿದ್ದನು’, ಎಂದು ದೂರು ನೀಡಿದ್ದಾರೆ. ಪೊಲೀಸರು ಬಾಲಕಿಯನ್ನು ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಹಜಾರಿಬಾಗ ಪೊಲೀಸ ಅಧೀಕ್ಷಕ ಮನೋಜ ರತನ ಚೌಥೆ ನೀಡಿದ್ದಾರೆ. ಮತ್ತು ಈ ಪ್ರಕರಣದಲ್ಲಿ ತನಿಖೆ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ. ಹಜಾರಿಬಾಗ ಭಾಜಪ ಶಾಸಕ ಮನೀಷ ಜೈಸ್ವಾಲ ಇವರು ರಾಜ್ಯ ಸರಕಾರದ ಮೇಲೆ ಒಲೈಕೆಯ ಆರೋಪವನ್ನು ಹೊರಿಸಿದ್ದಾರೆ.