ಉದಯಪುರದಲ್ಲಿ ರೈಲು ಹಳಿಗಳ ಮೇಲಿನ ಸ್ಪೋಟದ ಹಿಂದೆ ಜಿಹಾದಿ ಉಗ್ರರ ಕೈವಾಡ !

ಜೈಪುರ (ರಾಜಸ್ಥಾನ) – ಇಲ್ಲಿಯ ಓಡ ಸೇತುವೆ ಮೇಲೆ ಉದಯಪೂರ – ಅಹಮದಾಬಾದ ರೈಲು ಮಾರ್ಗದ ಹಳಿಯ ಮೇಲೆ ನವಂಬರ್ ೧೨ ರಂದು ನಡೆದ ಸ್ಪೋಟದ ಹಿಂದೆ ಜಿಹಾದಿ ಉಗ್ರರ ಕೈವಾಡ ಇರುವುದು ಬಹಿರಂಗವಾಗಿದೆ. ಈ ಸ್ಫೋಟದ ಹಿಂದೆ ಉಗ್ರರು ಸ್ಪೋಟಗೊಳಿಸುವ ಹೊಸ ಪದ್ದತಿ ಇರುವ ಸಾಧ್ಯತೆ ಇದೆ. ಇದರಲ್ಲಿ ಈ ಉಗ್ರರು ಭಾರತ ವಿರೋಧಿ ಸಂದೇಶ ಪ್ರಸಾರಿತಗೊಳಿಸುವವರ ಅಥವಾ ಇದರ ಬಗ್ಗೆ ಪ್ರತಿಕ್ರಿಯೆ ನೀಡುವವರ ಮೇಲೆ ನಿಗಾವಹಿಸಿದೆ, ಇಂತಹವರನ್ನು ಸಂಪರ್ಕಿಸುತ್ತರೆ ಮತ್ತು ಅವರ ವಿಶ್ವಾಸಗಳಿಸಿ ಅವರನ್ನು ಭಯೋತ್ಪಾದಕ ಕೃತ್ಯಗಳಿಗಾಗಿ ಸಿದ್ಧಗೊಳಿಸುತ್ತಾರೆ.

ಈ ಸ್ಫೋಟದಲ್ಲಿ ಉಗ್ರರಿಗೆ ಸಹಾಯ ಮಾಡುವ ಇಂತಹ ಸ್ಥಳೀಯರು ಸ್ಪೋಟ ನಡೆಸಿದ್ದಾರೆ. ಘಟನೆಯ ಸ್ಥಳದಲ್ಲಿ ತನಿಖಾದಳ ದಿಂದ ‘ಡಿಟೋನೇಟರ್’ನ ಅವಶೇಷಗಳು ಹಾಗೂ ಕೆಲವು ಸಜೀವ ‘ಡಿಟೋನೇಟರ್’ ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿನ ಹತ್ತಿಯ ಅನೇಕ ಗೋದಾಮುಗಳಲ್ಲಿ ಬೆಂಕಿ ಅನಾಹುತ ನಡೆದಿರುವ ಘಟನೆಯ ಹಿಂದೆಯೂ ಇಂತಹವರ ಕೈವಾಡವಿರುವುದು ಬಹಿರಂಗವಾಗಿತ್ತು.