ಮಸೀದಿ ಹಾಗೆ ಕಾಣುವ ಮೈಸೂರಿನಲ್ಲಿನ ಬಸ್ಸು ನಿಲ್ದಾಣದ ಮೇಲೆ ಬುಲ್ಡೋಜರ್ ನಿಂದ ಕಾರ್ಯಚರಣೆ ಮಾಡಲಾಗುವುದು ! – ಕರ್ನಾಟಕದ ಭಾಜಪದ ಸಂಸದ

ಮೈಸೂರು – ಕರ್ನಾಟಕದ ಭಾಜಪದ ಸಂಸದ ಪ್ರತಾಪ ಸಿಂಹ ಇವರು ಮೈಸೂರು-ಊಟಿ ಮಾರ್ಗದಲ್ಲಿರುವ ಮಸೀದಿ ಹಾಗೆ ಕಾಣುವ ಬಸ್ ನಿಲ್ದಾಣದ ಮೇಲೆ ಬುಲ್ಡೋಜರ್ ನಿಂದ ಕಾರ್ಯಾಚರಣೆ ಮಾಡಲಾಗುವುದೆಂದು ಹೇಳಿದ್ದಾರೆ. ‘ನಾನು ಸಾಮಾಜಿಕ ಜಾಲತಾಣದಲ್ಲಿ ಈ ಕಾಮಗಾರಿ ನೋಡಿದ್ದೇನೆ. ಈ ಬಸ್ ನಿಲ್ದಾಣದ ಮೇಲೆ ಎರಡು ಗುಮ್ಮಟಗಳಿವೆ. ಮಧ್ಯಭಾಗದಲ್ಲಿ ಒಂದು ದೊಡ್ಡ ಗುಮ್ಮಟ ಇದ್ದು ಪಕ್ಕದಲ್ಲಿ ಎರಡು ಚಿಕ್ಕ ಗುಮ್ಮಟಗಳಿವೆ. ಅದು ಮಸಿದಿಯೆ ಆಗಿದೆ. ‘ನಾನು ಇಂಜಿನಿಯರ್‌ಗಳಿಗೆ ೩-೪ ದಿನಗಳಲ್ಲಿ ಈ ಕಾಮಗಾರಿ ತೆರವುಗೊಳಿಸಲು ಹೇಳಿದ್ದೇನೆ. ಅವರು ಹಾಗೆ ಮಾಡದಿದ್ದರೆ ನಾನೇ ಅದನ್ನು ಬುಲ್ಡೋಜರ್‌ನಿಂದ ನೆಲೆಸಮ ಮಾಡುವೆ’, ಎಂದು ಸಿಂಹ ಇವತ್ತು ಎಚ್ಚರಿಕೆ ನೀಡಿದರು.

(ಸೌಜನ್ಯ : Tv9 Kannada)

‘ಈಗ ಅವರು ಗುಮ್ಮಟ ಇರುವ ಸರಕಾರಿ ಕಾರ್ಯಾಲಯ ಕೂಡ ನೆಲೆಸಮ ಮಾಡುವರೇ ?’ (ಅಂತೆ) – ಕಾಂಗ್ರೆಸ್‌ನ ಮುಖಂಡ ಸಲೀಂ ಅಹಮದ್

ಕರ್ನಾಟಕ ರಾಜ್ಯದಲ್ಲಿನ ಕಾಂಗ್ರೆಸ್‌ನ ಮುಖಂಡ ಸಲೀಂ ಅಹಮದ್ ಇವರು ಮೈಸೂರಿನ ಸಂಸದರ ಹೇಳಿಕೆಯನ್ನು ಮೂರ್ಖತನ ಎಂದು ಹೇಳಿದರು. ‘ಈಗ ಅವರು ಗುಮ್ಮಟ ಇರುವ ಸರಕಾರಿ ಕಾರ್ಯಾಲಯವು ನೆಲಸಮ ಮಾಡುವರೇ ?’, ಎಂದು ಪ್ರಶ್ನೆ ಕೇಳಿದರು.

ಸಂಪಾದಕೀಯ ನಿಲುವು

ಹೀಗೆ ದೇವಸ್ಥಾನದ ಆಕಾರದಲ್ಲಿನ ಬಸ್ಸು ನಿಲ್ದಾಣಗಳು ನಿರ್ಮಾಣ ಮಾಡಿದ್ದರೆ ಇಷ್ಟೊತ್ತಿಗಾಗಲೇ ಮತಾಂಧರು, ಕಾಂಗ್ರೆಸ್‌ನವರು, ಪ್ರಗತಿಪರರು, ಜಾತ್ಯತೀತರು ತಥಾ ಕಥಿತ ಬುದ್ಧಿವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಮುಂತಾದ ಎಲ್ಲರೂ ‘ನಗರವನ್ನು ಕೇಸರಿ ಕರಣ ಮಾಡಲಾಗುತ್ತಿದೆ’, ಎಂದು ಕೂಗಾಡುತ್ತಿದ್ದರು. ಈಗ ಮಾತ್ರ ಇದರಲ್ಲಿ ಯಾರೂ ಕೂಡ ಒಂದು ಚಕಾರವನ್ನೂ ತೆಗೆಯುವುದಿಲ್ಲ ಇದು ಶತ ಸಿದ್ಧ !