ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರವೇಶ ಮಾಡುವ ೩ ಅನುಮಾನಾಸ್ಪದರು ಪೊಲೀಸರ ವಶಕ್ಕೆ !

೩ ಜನರಲ್ಲಿ ೨ ಮುಸಲ್ಮಾನರು ಹಾಗೂ ಒಬ್ಬ ಹಿಂದೂ

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರವೇಶಿಸುವ ೩ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ. ಅದರಲ್ಲಿ ಇಬ್ಬರು ಮುಸಲ್ಮಾನರು ಹಾಗೂ ಒಬ್ಬನು ಹಿಂದೂ ಸ್ನೇಹಿತನಿರುವನು. ಮುಸಲ್ಮಾನರು ಹಸಿರು ಶಾಲು ಕತ್ತಿನಲ್ಲಿ ಹಾಕಿಕೊಂಡಿರುವುದರಿಂದ ಪೊಲೀಸರಿಗೆ ಅನುಮಾನ ಬಂದಿದೆ ಮತ್ತು ಅವರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂವರು ಕೂಡ ಜಾರ್ಖಂಡ್‌ನ ಗಿರಡಿಹ ಇಲ್ಲಿಯ ನಿವಾಸಿಗಳಾಗಿದ್ದಾರೆ.