ಸಿಂಹಭೂಮ (ಜಾರ್ಖಂಡ್) ಇಲ್ಲಿ ದುಷ್ಕರ್ಮಿಗಳಿಂದ ಹಿಂದೂ ಮುಖಂಡನ ಹತ್ಯೆ

ಸಿಂಹಭೂಮ (ಜಾರ್ಖಂಡ್) – ಇಲ್ಲಿಯ ಚಕ್ರಧರಪುರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಮುಖಂಡ ಕಮಲದೇವ ಗಿರಿ ಇವರ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹತ್ಯೆ ಮಾಡಲಾಗಿದೆ. ಆದ್ದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ೩ ಸಾವಿರಗಿಂತಲೂ ಹೆಚ್ಚಿನ ಜನರು ಸೇರಿದ್ದರು. ಈ ಸಮಯದಲ್ಲಿ ಕಲ್ಲು ತೂರಾಟ ಮತ್ತು ವಿದ್ವಾಂಸಕ ಘಟನೆಗಳು ನಡೆದಿರುವುದರಿಂದ ಪೊಲೀಸರು ಲಾಟಿಚಾರ್ಜ್ ಮಾಡಿದ್ದಾರೆ ಹಾಗೂ ಆಶ್ರು ವಾಯು ಉಪಯೋಗಿಸಿದ್ದಾರೆ. ಅದರ ನಂತರ ಅಲ್ಲಿ ಕೃತಿ ಶೀಲ ಪಡೆಯನ್ನು ಕರೆಸಲಾಗಿದೆ. ಪ್ರಸ್ತುತ ಅಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

೧. ಹತ್ಯೆಯ ಘಟನೆ ಇಲ್ಲಿಯ ಭಾರತ ಭವನ ಪರಿಸರದಲ್ಲಿ ನಡೆದಿದೆ. ಅಲ್ಲಿ ಕಮಲದೇವ ಇವರು ಅವರ ಸ್ನೇಹಿತರಾದ ಶಂಕರ ಸಿಂಹ ಇವರ ಜೊತೆ ನಿಂತಿದ್ದರು. ಆ ಸಮಯದಲ್ಲಿ ಮೂರು ಜನರು ಬಂದು ಕಮಲ ದೇವ ಇವರ ಕತ್ತಿನ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಕೆಳಗೆ ಕುಸಿದರು ನಂತರ ದುಷ್ಕರ್ಮಿಗಳು ಕಮಲ ದೇವರ ಮೇಲೆ ಎರಡು ಪೆಟ್ರೋಲ್ ಬಾಂಬ ಎಸೇದು ಅಲ್ಲಿಂದ ಓಡಿ ಹೋಗಿದ್ದಾರೆ.

೨. ಭಾಜಪದ ಮುಖಂಡ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಾಬುಲಾಲ ಮರಾಂಡಿ ಇವರು ರಾಜ್ಯದ ಮುಖ್ಯಮಂತ್ರಿ ಹೇಮಂತ ಸೋರೆನ್ ಇವರನ್ನು ಟೀಕಿಸಿದ್ದಾರೆ. ಅವರು, ಹೇಮಂತ ಸೋರೆನಜಿ, ನಿಮ್ಮ ಓಲೈಕೆಯ ರಾಜಕಾರಣದಿಂದ ಜಾರ್ಖಂಡಿನ ಜನ ಅಸಮಾದಾನಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವ ರಾಜ್ಯದಲ್ಲಿ ಹಿಂದೂಗಳು ಅಸುರಕ್ಷಿತ !