ಭಾರತದಲ್ಲಿನ ಶೇಕಡ ೯೯ ಮುಸಲ್ಮಾನರು ‘ಹಿಂದುಸ್ತಾನಿ !’ – ಇಂದ್ರೇಶ ಕುಮಾರ, ಮುಖಂಡರು ರಾಷ್ಟ್ರೀಯ ಸ್ವಯಂಸೇವಕ ಸಂಘ

ಠಾಣೆ – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ ಇವರು ಪ.ಪೂ. ಸರಸಂಘ ಚಾಲಕ ಡಾ. ಮೋಹನ ಭಾಗವತ ಇವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಎಲ್ಲಾ ಭಾರತೀಯರ ಪೂರ್ವಜರು ಒಂದೇ ಆಗಿದ್ದರು, ಆದ್ದರಿಂದ ಅವರ ಡಿ.ಎನ್.ಎ. ಒಂದೇ ಆಗಿದೆ’, ಎಂದು ಪ.ಪೂ. ಸರಸಂಘಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಯನ್ನು ಬೆಂಬಲಿಸುತ್ತ ಇಂದ್ರೇಶ ಕುಮಾರ ಇವರು, ಭಾರತದಲ್ಲಿನ ಶೇಕಡ ೯೯ ಮುಸಲ್ಮಾನರ ಪೂರ್ವಜರ ಪೂರ್ವಜರು, ಸಂಸ್ಕೃತಿ, ಪರಂಪರೆ ಮತ್ತು ಮಾತೃಭೂಮಿಯ ದೃಷ್ಟಿಯಿಂದ ‘ಹಿಂದುಸ್ತಾನಿ’ ಆಗಿದ್ದಾರೆ. ಠಾಣೆ ಜಿಲ್ಲೆಯಲ್ಲಿನ ಉತ್ತನ ಅಲ್ಲಿಯ ರಾಮಭಾವು ಮ್ಹಾಳಾಗಿ ಪ್ರಬೋಧಿನಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಮ ಶಾಖೆ ಇರುವ ‘ಮುಸ್ಲಿಂ ರಾಷ್ಟ್ರೀಯ ಮಂಚ’ನ ಕಾರ್ಯಕರ್ತರ ಎರಡು ದಿನದ ರಾಜ್ಯ ಮಟ್ಟದ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ನಮಗೆ ಪವಿತ್ರ ಕುರಾನದ ಸೂಚನೆ ಮತ್ತು ತತ್ವಗಳ ಪ್ರಕಾರ ನಮ್ಮ ರಾಷ್ಟ್ರದ ಬಗ್ಗೆ ಇರುವ ನಮ್ಮ ಕರ್ತವ್ಯ ಸರ್ವಶ್ರೇಷ್ಠ ಮತ್ತು ಇತರ ಎಲ್ಲಾ ವಿಷಗಳಿಗಿಂತಲೂ ಮಹತ್ವದ್ದು ಎಂದು ತಿಳಿಯಬೇಕು, ಎಂದು ಇಂದ್ರೇಶ ಕುಮಾರ ಹೇಳಿದರು.

‘ಮುಸ್ಲಿಮ ರಾಷ್ಟ್ರೀಯ ಮಂಚ’ನ ಈ ಕಾರ್ಯಗಾರದಲ್ಲಿ ರಾಜ್ಯಾದ್ಯಂತ ೪೦ ಕ್ಕೂ ಹೆಚ್ಚಿನ ಸ್ಥಳಗಳಿಂದ ಒಟ್ಟು ೨೫೦ ಕಾರ್ಯಕರ್ತರು ಭಾಗವಹಿಸಿದ್ದರು. ಅದರಲ್ಲಿ ಮಹಿಳಾ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು. ಈ ಸಮಯದಲ್ಲಿ ‘ಮುಸ್ಲಿಂ ರಾಷ್ಟ್ರೀಯ ಮಂಚ್’ನ ರಾಷ್ಟ್ರೀಯ ಆಹ್ವಾನಿತರು ಇರ್ಫಾನ್ ಅಲಿ ಪಿರಿಜಾದೆ ಇವರ ಜೊತೆಗೆ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.