ದೆಹಲಿಯಲ್ಲಿ ‘ಲವ್ ಜಿಹಾದ’ ನ ಅಮಾನವೀಯ ಮುಖವಾಡ ಬಯಲು
|
ನವದೆಹಲಿ – ‘ಲಿವ್ ಇನ್ ರಿಲೇಶನಶಿಪ್’ ನಲ್ಲಿ ವಾಸಿಸುತ್ತಿದ್ದ (ವಿವಾಹವನ್ನು ಮಾಡದೇ ಒಟ್ಟಿಗೆ ವಾಸಿಸುವುದು) ಆಫ್ತಾಬ ಶೇಖನು ಪ್ರಿಯತಮೆ ಶ್ರದ್ಧಾ ಮದಾನ (ವಯಸ್ಸು ೨೬ ವರ್ಷ) ಈಕೆಯ ಹತ್ಯೆ ಮಾಡಿ ಅವಳ ೩೫ ತುಂಡುಗಳನ್ನಾಗಿ ಮಾಡಿದ, ಅವನು ಆ ತುಂಡುಗಳನ್ನು ತಂಪುಪೆಟ್ಟಿಗೆಯಲ್ಲಿ ಇಟ್ಟು ೧೮ ದಿನ ಪ್ರತಿದಿನ ರಾತ್ರಿ ಸ್ವಲ್ಪ ಸ್ವಲ್ಪ ತುಂಡು ಹೊರಗೆ ಎಸೆದಿರುವ ೬ ತಿಂಗಳ ಹಿಂದಿನ ಪ್ರಕರಣ ಈಗ ಬಹಿರಂಗವಾಗಿದೆ. ಪೊಲೀಸರು ಅಫ್ತಾಬನನ್ನು ಬಂಧಿಸಿದ್ದಾರೆ. ಶ್ರದ್ಧಾ ಮುಂಬಯಿಯ ಮಲಾಡನವಳಾಗಿದ್ದು, ಇಬ್ಬರ ಪರಿಚಯ ಒಂದು ‘ಕಾಲ ಸೆಂಟರ’ ನಲ್ಲಿ ಆಗಿತ್ತು ಎಂದು ಹೇಳಲಾಗುತ್ತಿದೆ. ತದನಂತರ ಅವರು ನವದೆಹಲಿಯಲ್ಲಿ ‘ಲಿವ್ ಇನ್ ರಿಲೇಶನಶಿಪ್’ನಲ್ಲಿ ವಾಸಿಸುತ್ತಿದ್ದರು. ಶ್ರದ್ಧಾಳ ತಂದೆ ನವೆಂಬರ ೮ ರಂದು ಪೊಲೀಸರಲ್ಲಿ ಅಪಹರಣದ ದೂರು ದಾಖಲಿಸಿದ್ದರು.
The 28-year-old man allegedly chopped his girlfriend into 35 pieces, stored them in a refrigerator, and then disposed of them across India’s national capital, Delhi, for 18 dayshttps://t.co/zn0T3TH1vZ
— WION (@WIONews) November 14, 2022
೧. ಶ್ರದ್ಧಾ ಮುಂಬಯಿಯ ಮಾಲಾಡನಲ್ಲಿ ಒಂದು ಅಂತರರಾಷ್ಟ್ರೀಯ ಕಂಪನಿಯ ‘ಕಾಲ ಸೆಂಟರ’ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಅಫ್ತಾಬ ಮತ್ತು ಅವಳ ಪರಿಚಯವಾಯಿತು. ಇಬ್ಬರೂ ಒಬ್ಬರಿಗೊಬ್ಬರನ್ನು ಪ್ರೀತಿಸುತ್ತಿದ್ದರು; ಆದರೆ ಅವರ ಕುಟುಂಬದವರು ಅವರ ಮೇಲೆ ಅಸಮಧಾನರಾಗಿದ್ದರು. ಆದ್ದರಿಂದ ಇವರಿಬ್ಬರೂ ಮುಂಬಯಿಯಿಂದ ದೆಹಲಿಯಲ್ಲಿ ವಾಸಿಸಲು ಹೋದರು. ಅವರು ಮಹರೌಲಿಯ ಒಂದು ಫ್ಲಾಟನಲ್ಲಿ ‘ಲಿವ್ ಇನ್’ ರಿಲೇಷನ್ ಶಿಪ್’ ನಲ್ಲಿ ವಾಸಿಸುತ್ತಿದ್ದರು.
೨. ದಕ್ಷಿಣ ದೆಹಲಿಯ ಹೆಚ್ಚುವರಿ ಪೊಲೀಸ ಉಪ ಆಯುಕ್ತರಾಗಿರುವ ಅಂಕಿತ ಚೌಹಾಣ ಇವರು, ಮೇ ೧೮ ರಂದು ಅಫ್ತಾಬನು ಶ್ರದ್ಧಾಳ ಕತ್ತು ಹಿಸುಕಿ ಹತ್ಯೆ ಮಾಡಿದನು. ತದನಂತರ ಅವನು ಅವಳ ಮೃತದೇಹವನ್ನು ೩೫ ತುಂಡುಗಳನ್ನಾಗಿ ಮಾಡಿದನು. ಅಫ್ತಾಬನು ಮೃತದೇಹವನ್ನುತುಂಡು ಮಾಡಲು ಕರಗಸವನ್ನು ಉಪಯೋಗಿಸಿದ್ದನು. ಅವನು ಮೊದಲು ಅವಳ ಕೈಯನ್ನು ಮೂರು ತುಂಡುಗಳನ್ನಾಗಿ ಮಾಡಿದನು. ತದನಂತರ ಕಾಲುಗಳನ್ನು ಮೂರು ತುಂಡುಗಳನ್ನು ಮಾಡಿದನು. ಹತ್ಯೆಯ ಬಳಿಕ ಅವನು ಈ ಎಲ್ಲ ತುಂಡುಗಳನ್ನು ತಂಪುಪೆಟ್ಟಿಗೆಯಲ್ಲಿ ಇಟ್ಟನು. ಈ ತುಂಡುಗಳನ್ನು ತೆಗೆದುಕೊಂಡು ಅವನು ಪ್ರತಿದಿನ ರಾತ್ರಿ ೨ ಗಂಟೆಯ ಹೊತ್ತಿಗೆ ಮನೆಯ ಹೊರಗೆ ಹೋಗುತ್ತಿದ್ದನು. ಈ ತುಂಡುಗಳನ್ನು ಅವನು ಮಹರೌಲಿಯ ಅರಣ್ಯಕ್ಕೆ ಒಯ್ದು ಬೇರೆ ಬೇರೆ ಪ್ರದೇಶಗಳಲ್ಲಿ ಎಸೆಯುತ್ತಿದ್ದನು.
೩. ಶ್ರದ್ಧಾ ಮೇ ೧೮ ರಿಂದ ಕುಟುಂಬದ ದೂರವಾಣಿ ಕರೆಯನ್ನು ಎತ್ತುವುದನ್ನು ನಿಲ್ಲಿಸಿದ್ದಳು. ಇದರಿಂದ ಚಿಂತೆಗೊಳಗಾದ ಅವಳ ತಂದೆ ವಿಕಾಸ ಮದಾನ ಇವರು ಮಗಳ ಬಗ್ಗೆ ವಿಚಾರಣೆ ಮಾಡಲು ನವೆಂಬರ ೮ ರಂದು ದೆಹಲಿಗೆ ಹೋದರು. ಅಲ್ಲಿ ಅವಳ ಫ್ಲಾಟಗೆ ಬೀಗವಿತ್ತು. ಅವರು ಮಹರೌಲಿ ಪೊಲೀಸ ಠಾಣೆಯಲ್ಲಿ ಮಗಳ ಅಪಹರಣವಾಗಿದೆಯೆಂದು ದೂರು ದಾಖಲಿಸಿದರು. ತಂದೆಯವರ ದೂರಿನ ಬಳಿಕ ಪೊಲೀಸರು ಅಫ್ತಾಬನನ್ನು ಬಂಧಿಸಿದರು. ವಿಚಾರಣೆಯಲ್ಲಿ ಅವನು ಶ್ರದ್ಧಾಳ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡನು. ಅವನು, ‘ನಮ್ಮಲ್ಲಿ ಯಾವಾಗಲೂ ಜಗಳವಾಗುತ್ತಿತ್ತು. ಅವಳು ಮದುವೆಯಾಗಬೇಕೆಂದು ಒತ್ತಾಯ ಮಾಡುತ್ತಿದ್ದಳು. ಇದರಿಂದ ಬೇಸತ್ತು ನಾನು ಅವಳ ಹತ್ಯೆ ಮಾಡಿದೆನು’, ಎಂದು ಹೇಳಿದನು. ಈಗ ಪೊಲೀಸರು ಶ್ರದ್ಧಾಳ ಮೃತದೇಹದ ತುಂಡುಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರ ಇದಕ್ಕಿಂತ ಹೆಚ್ಚಿನ ಅಮಾನವೀಯ ವರ್ತನೆಯ ಗುರುತಿಸಲಾಗದು, ಎಂದು ಹಿಂದೂ ಯುವತಿಯರು ಗಮನಿಸಬೇಕು ! ಈ ಪ್ರಕರಣದ ವಿಷಯದಲ್ಲಿ ಜಾತ್ಯತೀತವಾದಿ, ಪ್ರಗತಿ(ಅಧೋ)ಪರರು, ರಾಜಕೀಯ ಪಕ್ಷ, ಮುಸಲ್ಮಾನ ಸಂಘಟನೆಗಳು ಬಾಯಿ ತೆರೆಯುವುದಿಲ್ಲ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ! ರಾಜಧಾನಿ ದೆಹಲಿಯಲ್ಲಿರುವ ಯುವತಿಯರ ಸ್ಥಿತಿ ಹೀಗೆ ಆಗುತ್ತಿದ್ದರೆ, ದೇಶದಲ್ಲಿರುವ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿಯ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ ! ಈ ಸ್ಥಿತಿ ಹಿಂದೂ ರಾಷ್ಟ್ರವನ್ನು ಅನಿವಾರ್ಯತೆಯನ್ನು ಸ್ಪಷ್ಟಗೊಳಿಸುತ್ತದೆ ! ಇನ್ನೂ ಎಷ್ಟು ಹಿಂದೂ ಯುವತಿಯರ ಬಲಿಯಾದ ಬಳಿಕ ಸರಕಾರ ರಾಷ್ಟ್ರ ಮಟ್ಟದಲ್ಲಿ ಲವ್ ಜಿಹಾದ ವಿರೋಧಿ ಕಾನೂನು ರೂಪಿಸಲಿದೆ ? |