ಕೇರಳದ ಇಸ್ಲಾಮಿ ಸಂಸ್ಥೆಯಲ್ಲಿ ಗೀತೆ ಮತ್ತು ಉಪನಿಷತ್‌ಗಳನ್ನು ಕಲಿಸಲಾಗುತ್ತದೆ !

ತ್ರಿಶೂರು (ಕೇರಳ) – ಇಲ್ಲಿಯ ಒಂದು ಇಸ್ಲಾಮಿ ಸಂಸ್ಥೆಯಲ್ಲಿ ಕಲಿಯುವ ಮುಸಲ್ಮಾನ ವಿದ್ಯಾರ್ಥಿಗಳು ಹಿಂದೂ ಗುರುಗಳ ಮಾರ್ಗದರ್ಶನದಲ್ಲಿ ಸಂಸ್ಕೃತ ಶ್ಲೋಕ ಮತ್ತು ಮಂತ್ರಗಳು ಕಲಿಯುತ್ತಿದ್ದಾರೆ. ಗುರು ಮತ್ತು ಶಿಷ್ಯ ಇವರಲ್ಲಿನ ಸಂಭಾಷಣೆ ಕೂಡ ಸಂಸ್ಕೃತದಲ್ಲಿಯೇ ನಡೆಯುತ್ತದೆ. ‘ಮಲಿಕ ದೀನಾರ್ ಇಸ್ಲಾಮಿಕ ಕಾಂಪ್ಲೆಕ್ಸ್’ (ಎಂ.ಐ.ಸಿ.) ನಿಂದ ನಡೆಸುತ್ತಿರುವ ‘ಅಕಾಡೆಮಿ ಆಫ್ ಷರಿಯಾ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್’ನ ಪ್ರಾಚಾರ್ಯರು ಓನಮಪಿಲ್ಲಿ ಮಹಮ್ಮದ್ ಪೈಜಿ ಇವರು, ಸಂಸ್ಕೃತ, ಉಪನಿಷತ್, ಪುರಾಣ, ಗ್ರಂಥ ಮುಂತಾದವು ಕಲಿಸುವಯುವ ಹಿಂದೆ ವಿದ್ಯಾರ್ಥಿಗಳಲ್ಲಿ ಬೇರೆ ಧರ್ಮದ ಬಗ್ಗೆ ಜ್ಞಾನ ಮತ್ತು ಜಾಗೃತಿ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಕಲಿಸಲಾಗುತ್ತದೆ ಎಂದು ಹೇಳಿದರು.

‘ಎಂ.ಐ.ಸಿ.’ ನಲ್ಲಿ ವಿದ್ಯಾರ್ಥಿಗಳು ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ. ಸಂಸ್ಥೆಯ ಪ್ರಾಚಾರ್ಯರು, ಈ ವಿದ್ಯಾರ್ಥಿಗಳು ೧೦ ನೇ ತರಗತಿ ಉತ್ತೀರ್ಣವಾದ ನಂತರ ೮ ವರ್ಷಗಳವರೆಗೆ ಭಗವದ್ಗೀತೆ, ಉಪನಿಷತ್‌ಗಳು, ರಾಮಾಯಣ, ಮಹಾಭಾರತ ಇದರಲ್ಲಿನ ಮಹತ್ವದ ಭಾಗವು ಕಲಿಸಲಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಈಗ ಈ ಇಸ್ಲಾಮಿ ಸಂಸ್ಥೆಯ ಶ್ಲಾಘನೀಯ ಪಠ್ಯಕ್ರಮದ ಬಗ್ಗೆ ಕಿಡಿಕಾರಿದರೆ ಆಶ್ಚರ್ಯವೇನು ಇಲ್ಲ !