ಆಶ್ವಾಸನೆಯನ್ನು ನೀಡಿದ್ದರೂ ಸರಕಾರ ಗಣಿಗಾರಿಕೆಯನ್ನು ಸ್ಥಗಿತಗೊಳಿಸದೇ ಇದ್ದರಿಂದ ಭರತಪುರ (ರಾಜಸ್ಥಾನ)ದಲ್ಲಿ ಸಾಧೂ-ಸಂತರಿಂದ ಪುನಃ ಆಂದೋಲನ !

  • ಹಿಂಗೂಗಳಿಗೆ ಪವಿತ್ರವಾಗಿರುವ ಪರ್ವತದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ಉತ್ಖನನ ಮಾಡುತ್ತಿದೆ !

  • ಜುಲೈ ತಿಂಗಳಿನಲ್ಲಿ ಓರ್ವ ಸಾಧು ಆತ್ಮಹತ್ಯೆ ಮಾಡಿಕೊಂಡಿದ್ದರು !

  • ಕಾಂಗ್ರೆಸ್‌ನ ಓರ್ವ ಸಚಿವರಿಂದ ಸಾಧುಗಳಿಗೆ ಪಾಠ ಕಲಿಸುವ ಬೆದರಿಕೆ !

ಎಡಬದಿಗೆ ಪ್ರವಾಸೋದ್ಯಮ ಮಂತ್ರಿ ವಿಶ್ವೇಂದ್ರ ಸಿಂಹ

ಭರತಪುರ (ರಾಜಸ್ಥಾನ) – ಇಲ್ಲಿಯ ಪಸೋಪಾ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಉತ್ಖನನದ ವಿರುದ್ಧ ನೂರಾರು ಸಾಧುಗಳು ಆಂದೋಲನ ಮಾಡುತ್ತಿದ್ದರು. ಈ ವಿರೋಧದಲ್ಲಿ ಸಾಧು ಬಾಬಾ ವಿಜಯದಾಸರು ಜುಲೈನಲ್ಲಿ ಆತ್ಮದಹನ ಮಾಡಿಕೊಂಡು ದೇಹತ್ಯಾಗ ಮಾಡಿದ್ದರು. ತದನಂತರ ರಾಜಸ್ಥಾನದಲ್ಲಿರುವ ಕಾಂಗ್ರೆಸ ಸರಕಾರವು ಈ ಪ್ರದೇಶದಲ್ಲಿ ಅನಧಿಕೃತವಾಗಿ ಗಣಿಗಾರಿಕೆಯನ್ನುಸ್ಥಗಿತಗೊಳಿಸುವುದಾಗಿ ಆಶ್ವಾಸನೆ ನೀಡಿತ್ತು; ಆದರೆ ಇಲ್ಲಿಯವರೆಗೂ ಅದನ್ನು ಪಾಲಿಸದೇ ಇಲ್ಲಿ ಮೊದಲಿನಂತೆಯೇ ಅನಧಿಕೃತವಾಗಿ ಗಣಿಗಾರಿಕೆಯನ್ನುಮುಂದುವರಿಸಿದೆ. ಇದರಿಂದ ಪುನಃ ಒಮ್ಮೆ ೩ ಸಾವಿರ ಸಾಧು ಮತ್ತು ಸಂತರು ಆಂದೋಲವನ್ನು ಆರಂಭಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಹ ಇವರು ಸಾಧುಗಳಿಗೆ ಬೆದರಿಕೆ ಹಾಕುತ್ತಾ ‘ಸರಕಾರ ಸಾಧುಗಳಿಗೆ ಪಾಠ ಕಲಿಸುವುದು’, ಎಂದು ಹೇಳಿದ್ದಾರೆ.

೧. ಭದ್ರತಾ ಸಮಿತಿಯ ಅಧ್ಯಕ್ಷ ಬ್ರಿಜ ದಾಸ ಇವರು, ಎಲ್ಲರ ಭಾವನೆಯನ್ನು ಗಮನಕ್ಕೆ ತೆಗೆದುಕೊಂಡು ಡಿಸೆಂಬರ ೧ ರಿಂದ ಸಾಧು ಸಂತರು, ಗ್ರಾಮಸ್ಥರು ಮತ್ತು ಕೃಷ್ಣ ಭಕ್ತರ ಪರವಾಗಿ ಆಂದೋಲನವನ್ನು ಪುನಃ ಪ್ರಾರಂಭಿಸುತ್ತಿದ್ದೇವೆ. ಅದಕ್ಕಿಂತ ಮೊದಲು ಇಲ್ಲಿ ಅವರು ಒಂದೂವರೆ ಗಂಟೆ ಪ್ರತಿಭಟನೆ ನಡೆಸಿದರು. ತದನಂತರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅವರು ಸಂಪೂರ್ಣ ಬ್ರಿಜ ಭೂಮಿಯಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿದರು, ಅಲ್ಲದೇ ‘ಇಲ್ಲಿ ನಡೆಯುತ್ತಿರುವ ಅನಧಿಕೃತ ಗಣಿಗಾರಿಕೆಯನ್ನು ಸ್ಥಗಿತಗೊಳಿಸದಿದ್ದರೆ, ಆಂದೋಲನವನ್ನು ನಡೆಸಲಾಗುವುದು’, ಎಂದು ಎಚ್ಚರಿಕೆ ನೀಡಿದರು.

೨. ಪ್ರವಾಸೋದ್ಯಮ ಮಂತ್ರಿ ವಿಶ್ವೇಂದ್ರ ಸಿಂಹ ಇವರು ‘ನಾವು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ; ಆದರೆ ಇಲ್ಲಿಯ ಕ್ರಶರ (ಕಲ್ಲು ಒಡೆಯುವ ಯಂತ್ರ) ಮುಂದುವರಿಯಲಿದೆ. ಅದಕ್ಕೆ ಸರಕಾರವು ಅನುಮತಿಯನ್ನು ನೀಡಿದೆ. ಎಂದು ಹೇಳಿದರು.

ಸಾಧು-ಸಂತರ ಆಂದೋಲನದ ಹಿಂದಿರುವ ಕಾರಣ !

ಬ್ರಜ್ ಗುಡ್ಡವನ್ನು ಪೂಜಿಸಲಾಗುತ್ತದೆ ಹಾಗೂ ಅದಕ್ಕೆ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಇದರಿಂದ ಈ ಪರ್ವತವನ್ನು ಗಣಿಗಾರಿಕೆಯಿಂದ ರಕ್ಷಿಸಲು ಅನೇಕ ವರ್ಷಗಳಿಂದ ಆಂದೋಲನ ನಡೆದಿದೆ. ಜನರು ಇಲ್ಲಿಯ ಪರ್ವತ ಮೇಲೆಯೇ ಭಗವಾನ ಶ್ರೀಕೃಷ್ಣನು ಅವತಾರವನ್ನು ಧರಿಸಿದ್ದನು ಎಂದು ಶ್ರದ್ಧೆಯಿದೆ. ಬದ್ರಿನಾಥ ಮತ್ತು ಕೇದಾರನಾಥ ಎಷ್ಟು ಮಹತ್ವದ್ದಾಗಿದೆಯೋ ಅಷ್ಟೇ ಈ ಪರ್ವತಕ್ಕೆ ಮಹತ್ವವಿದೆ ಎಂದು ಹೇಳಿದ್ದಾರೆ.

 

ಸಂಪಾದಕೀಯ ನಿಲುವು

  • ಹಿಂದೂಗಳ ಶ್ರದ್ಧೆಯಿರುವ ಪರ್ವತದ ಮೇಲೆ ನಡೆಸಿರುವ ಗಣಿಗಾರಿಕೆಯನ್ನುಸ್ಥಗಿತಗೊಳಿಸುವಂತೆ ನೂರಾರು ಸಾಧು-ಸಂತರು ಆಂದೋಲನವನ್ನು ನಡೆಸಿದ್ದರೂ ಕಾಂಗ್ರೆಸ್ ಸರಕಾರ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದಿದ್ದರೆ, ಹಿಂದೂಗಳು ಇದರಿಂದ ಪಾಠ ಕಲಿತು ಇಂತಹ ಸರಕಾರಕ್ಕೆ ನ್ಯಾಯೋಚಿತ ಮಾರ್ಗದಿಂದ ಪಾಠ ಕಲಿಸಬೇಕು !
  • ‘ಕಾಂಗ್ರೆಸ್‌ನ ಆಡಳಿತವೆಂದರೆ ಇಸ್ಲಾಂ ಆಡಳಿತವಾಗಿದೆ’, ಎನ್ನುವುದು ಹೆಜ್ಜೆ ಹೆಜ್ಜೆಗೂ ಗಮನಕ್ಕೆ ಬಂದರೂ ಹಿಂದೂಗಳು ನಿಷ್ಕ್ರಿಯರಾಗಿದ್ದರೆ, ಅದು ಆತ್ಮಹತ್ಯೆಯೇ ಆಗಿದೆ !
  • ಸಾಧುಗಳಿಗೆ ಪಾಠ ಕಲಿಸುವ ಬೆದರಿಕೆ ಮತಾಂಧರು ಹಾಕುವುದಿಲ್ಲ, ಹಿಂದೂ ಸಚಿವರೇ ಹಾಕುತ್ತಾನೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ವಿಷಯವಾಗಿದೆ !