ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಿಸುವ ಆದೇಶ ಕಾಯಂ !

ನವದೆಹಲಿ – ವಾರಣಾಸಿಯಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಸಂರಕ್ಷಣೆ ನೀಡುವ ಹಿಂದೆ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾಯಂ ಇರಿಸಿದೆ. ಮುಂದಿನ ಆದೇಶದವರೆಗೆ ಸಂರಕ್ಷಣೆ ನೀಡಲು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಉತ್ತರ ನೀಡಲು ಹಿಂದೂ ಪಕ್ಷಕ್ಕೆ ೩ ವಾರದ ಕಾಲಾವಕಾಶ ನೀಡಲಾಗಿದೆ. ಮೆ ೧೭ ರಂದು ವಿಚಾರಣೆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂರಕ್ಷಣೆಯ ಆದೇಶ ನೀಡಿತ್ತು. ಈ ಆದೇಶ ಹೆಚ್ಚಿಸಲು ಹಿಂದೂ ಪಕ್ಷವು ಅರ್ಜಿ ದಾಖಲಿಸಿತ್ತು.