ರಾಜೀವ ಗಾಂಧಿ ಹತ್ಯೆಯ ಪ್ರಕರಣದಲ್ಲಿನ ಎಲ್ಲಾ ೬ ಆರೋಪಿಗಳ ಬಿಡುಗಡೆ !

೩೧ ವರ್ಷಗಳ ಹಿಂದೆ ಹತ್ಯೆ ನಡೆದಿತ್ತು

ನವ ದೆಹಲಿ – ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಇವರ ಹತ್ಯೆಯ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಎಲ್ಲಾ ೬ ಜನ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ. ಈ ಆರೋಪಿಗಳ ಮೇಲೆ ಬೇರೆ ಯಾವದು ಮೊಕದ್ದಮೆ ಇಲ್ಲದೇ ಇದ್ದರೆ, ಅವರನ್ನು ಬಿಡುಗಡೆಗೊಳಿಸಬೇಕೆಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಈ ೬ ಆರೋಪಿಗಳ ಹೆಸರು ನಳಿನಿ, ರವಿಚಂದ್ರನ್, ಮುರುಗನ್, ಸಂಥನ್, ಜೈ ಕುಮಾರ್ ಮತ್ತು ರಾಬರ್ಟ್ ಪಾಯಸ ಎಂದಾಗಿವೆ.

೧. ಮೇ ೨೧, ೧೯೯೧ ರಲ್ಲಿ ತಮಿಳುನಾಡಿನ ಶ್ರೀ ಪೇರಂಬುದುರ್ ಇಲ್ಲಿಯ ಒಂದು ಪ್ರಚಾರ ಸಭೆಯ ಸಮಯದಲ್ಲಿ ಆತ್ಮಾಹುತಿ ದಾಳಿಯಿಂದ ಗಾಂಧಿಯವರ ಹತ್ಯೆ ಮಾಡಲಾಗಿತ್ತು.

೨. ಈ ಪ್ರಕರಣದಲ್ಲಿ ಪೆರಾರಿವಲನ್ ಸಹಿತ ೭ ಜನರನ್ನು ತಪ್ಪಿತಸ್ಥರೆಂದು ನಿಶ್ಚಯಿಸಲಾಗಿತ್ತು. ಟಾಡಾ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ಪೆರಾರಿವಲನ್ ಇವನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

೩. ಕ್ಷಮಾದಾನ ಮನವಿಯ ಮೇಲಿನ ತೀರ್ಪು ಬರಲು ವಿಳಂಬವಾಗಿರುವುದರ ಆಧಾರದಲ್ಲಿ ಫೆರಾರಿವಲ್ಲನ್‌ಗೆ ನೀಡಿರುವ ಗಲ್ಲು ಶಿಕ್ಷೆಯ ರೂಪಾಂತರ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.

೪. ಈಗ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶದಿಂದ ರಾಜೀವ ಗಾಂಧಿ ಅವರ ಹತ್ಯೆಯ ಪ್ರಕರಣದಲ್ಲಿನ ಆರೋಪಿಗಳು ಬಿಡುಗಡೆ ಆಗುವರು. ಫೆರಾರಿವಲನ್ ಮೊದಲೇ ಈ ಪ್ರಕರಣದಿಂದ ಬಿಡುಗಡೆ ಹೊಂದಿದ್ದಾನೆ.