ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಪತಂಜಲಿಯ ೫ ಔಷಧಗಳ ಮೇಲೆ ನಿಷೇಧ

ಕೆಲವು ಬದಲಾವಣೆ ಮಾಡಿ ಮತ್ತೊಮ್ಮೆ ಪರವಾನಗಿ ಪಡೆದು ಔಷಧಿಯ ಮಾರಾಟ ಮಾಡಲು ಸರಕಾರದಿಂದ ಸೂಚನೆ

ಡೇಹರಾಡುನ್ (ಉತ್ತರಾಖಂಡ) – ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಮೂಹದ ೫ ಔಷಧಿ ನಿಷೇಧಿಸಿದೆ. ಈ ಔಷಧಿ ಪತಿಂಜಲಿಯ ‘ದಿವ್ಯ ಫಾರ್ಮಾಸಿ’ಯಲ್ಲಿ ತಯಾರಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಮೋತಿ ಬಿಂದು ಮತ್ತು ಉಚ್ಚ ಕೊಲೆಸ್ಟ್ರಾಲ್ ಇದರ ಮೇಲೆ ಬಿಪಿ ಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡೋಮ್ ಮತ್ತು ಐ ಗ್ರಿಟ್ ಗೋಲ್ಡ್ ಈ ಔಷಧಿಯನ್ನು ನಿಷೇಧಿಸಲಾಗಿದೆ.

೧. ನಿಷೇಧ ಹೇರುವಾಗ ಉತ್ತರಾಖಂಡ ಸರಕಾರದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಇಲಾಖೆಯು, ಈ ಔಷಧಿಯ ಜಾಹೀರಾತು ಭ್ರಮೆ ಉಂಟು ಮಾಡುತ್ತದೆ, ಎಂದು ಹೇಳಿದೆ.

೨. ಕೇರಳದಲ್ಲಿನ ಡಾ. ಕೆ.ವಿ. ಬಾಬು ಇವರು ಜುಲೈ ತಿಂಗಳಲ್ಲಿ, ಪತಂಜಲಿ ದಿವ್ಯ ಫಾರ್ಮಾಸಿಯಿಂದ ‘ಡ್ರಗ್ಸ್ ಅಂಡ್ ಮ್ಯಾಜಿಕ್ ರೇಮೀಡೀಸ್ (ಒಬ್ಜೆಕ್ಷನೆಬಲ್ ಅಡ್ವಟೈಸ್ಮೆಂಟ್) ಆಕ್ಟ್ ೧೯೫೪’, ‘ಡ್ರಗ್ಸ್ ಅಂಡ್ ಕಾಸ್ಮೆಟಿಕ್ ಆಕ್ಟ್ ೧೯೪೦’ ಮತ್ತು ‘ಡ್ರಗ್ಸ್ ಅಂಡ್ ಕಾಸ್ಮೆಟಿಕ್ ರೂಲ್ಸ್ ೧೯೪೫’ ಈ ಕಾನೂನಿನ ನಿರಂತರವಾಗಿ ಉಲ್ಲಂಘನೆ ಮಾಡಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

೩. ನಿಷೇಧದ ಆದೇಶದಲ್ಲಿ ಸರಕಾರ, ಪತಂಜಲಿವು ಈ ಔಷಧದ ಲೇಬಲ್‌ನಲ್ಲಿ ಕೆಲವು ಬದಲಾವಣೆ ಮಾಡಿ ಮತ್ತೆ ಪರವಾನಗಿ ಪಡೆಯಬೇಕು. ಅದರ ನಂತರ ಈ ಔಷಧೀಯ ಜಾಹೀರಾತು ನೀಡಬೇಕು.’ ಇದರ ಅರ್ಥ ಕೆಲವು ಬದಲಾವಣೆ ಮಾಡಿ ಪತಂಜಲಿ ಮತ್ತೆ ಈ ಔಷಧೀಯ ನಿರ್ಮಾಣ ಮಾಡಬಹುದು, ಎಂದು ಹೇಳಿದೆ.

ಇದು ಆಯುರ್ವೇದ ವಿರೋಧಿ ಡ್ರಗ್ ಮಾಫಿಯಾದ ಷಡ್ಯಂತ್ರ ! – ಯೋಗಋಷಿ ರಾಮದೇವಬಾಬಾ

ಈ ಕುರಿತು ಪ್ರತಿಕ್ರಿಯೆ ನೀಡುವಾಗ ಯೋಗಋಷಿ ರಾಮದೇವಬಾಬಾ ಇವರು, “ಇಲ್ಲಿಯವರೆಗೆ ನಮಗೆ ಈ ಆದೇಶದ ಪ್ರತಿ ದೊರೆತಿಲ್ಲ. ಈ ಔಷಧಗಳ ಮೇಲೆ ನಿಷೇಧ ಹೇರಿರುವುದರ ಹಿಂದೆ ಆಯುರ್ವೇದ ವಿರೋಧಿ ಡ್ರಗ್ ಮಾಫಿಯಾದ ಷಡ್ಯಂತ್ರ ಇದೆ. ಸರಕಾರಿ ಇಲಾಖೆಯಿಂದ ಸ್ವಂತ ತಪ್ಪು, ಸರಿಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಪತಂಜಲಿಗೆ ಆಗಿರುವ ನಷ್ಟ ಪರಿಹಾರ ನೀಡಬೇಕು. ಪರಿಹಾರ ನೀಡದೇ ಇದ್ದರೆ ಕಾನೂನಿನ ಪ್ರಕಾರ ಕ್ರಮ ಎದುರಿಸಲು ಸಿದ್ಧರಿರಬೇಕು.” ಎಂದು ಹೇಳಿದ್ದಾರೆ.