ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿತ ಅರ್ಜಿಯ ಕುರಿತು ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ

ನವದೆಹಲಿ – ವಾರಾಣಸಿಯಲ್ಲಿನ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿಸಿದ ಅರ್ಜಿಯ ಕುರಿತು ಇಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ ಪ್ರಕರಣದ ವಿಚಾರಣೆಗಾಗಿ ‘ನ್ಯಾಯಪೀಠ’ದ ಸ್ಥಾಪನೆ ಮಾಡಲಾಗುವುದೆಂದು ನ್ಯಾಯಾಲಯ ಹೇಳಿದೆ.

೧. ಈ ಪ್ರಕರಣದಲ್ಲಿ ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಇದಕ್ಕೆ ಸಂಬಂಧಿಸಿದ ಮನವಿಯ ಬಗ್ಗೆ ಗಮನ ಹರಿಸಿರುವ ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರ ನೇತೃತ್ವದಲ್ಲಿನ ನ್ಯಾಯಪೀಠವು, ಈ ಪ್ರಕರಣದಲ್ಲಿನ ಸಂರಕ್ಷಣೆಯ ಆದೇಶದ ಅವಧಿ ನವಂಬರ್ ೧೨ ಕ್ಕೆ ಮುಗಿಯುತ್ತದೆ. ಆದ್ದರಿಂದ ನವಂಬರ್ ೧೧ ಕ್ಕೆ ನಾವು ಖಂಡಪೀಠದ ಸ್ಥಾಪನೆ ಮಾಡುವೆವು ಎಂದು ಹೇಳಿದೆ.

೨. ಸರ್ವೋಚ್ಛ ನ್ಯಾಯಾಲಯದಿಂದ ಮೇ ೧೭ ರಂದು ಮಧ್ಯಂತರ ಆದೇಶ ನೀಡುತ್ತಾ, ವಾರಣಾಸಿ ಜಿಲ್ಲಾ ದಂಡಾಧಿಕಾರಿಗಳಿಗೆ ಜ್ಞಾನವಾಪಿಯಲ್ಲಿನ ಶಿವಲಿಂಗದ ಸುರಕ್ಷೆ ನಿಶ್ಚಯಗೊಳಿಸುವ ಆದೇಶ ನೀಡಲಾಗಿತ್ತು, ಹಾಗೂ ಮುಸಲ್ಮಾನರಿಗೆ ನಮಾಜ್‌ಗಾಗಿ ಅನುಮತಿ ನೀಡಲಾಗಿತ್ತು. ಅದರ ನಂತರ ಈಗ ಇಂದು ಇದರ ಕುರಿತು ವಿಚಾರಣೆ ನಡೆಯುವುದು.