ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸತೀಶ ಜಾರಕೀಹೋಳಿಯವರು ಹಿಂದೂ ಇದು ವಿದೇಶಿ ಶಬ್ಧವಾಗಿದ್ದು ಅದರ ಅರ್ಥವು ಬಹಳ ಅಸಹ್ಯಕರವಾಗಿದೆ, ಎಂದು ಹೇಳಿದ್ದರು. ಈ ಬಗ್ಗೆ ಎಲ್ಲ ಮಟ್ಟದಿಂದ ಟೀಕೆಯಾಗುತ್ತಿರುವಾಗಲೂ ಜಾರಕೀಹೋಳಿಯವರು ತಮ್ಮ ಹೇಳಿಕೆಯ ಮೇಲೆ ದೃಢವಾಗಿದ್ದಾರೆ. ಅವರು ಬೇರೆ ಬೇರೆ ಸಂದರ್ಭ ನೀಡಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ಮಾತ್ರ ‘ಇದು ಜಾರಕೀಹೋಳಿಯವರ ವೈಯಕ್ತಿಕ ಹೇಳಿಕೆಯಾಗಿದ್ದು ಪಕ್ಷಕ್ಕೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿ ಕೈ ಜಾಡಿಸಿಕೊಂಡಿದೆ. (ಇದು ಜಾರಕೀಹೋಳಿಯವರ ವೈಯಕ್ತಿಕ ಅಭಿಪ್ರಾಯವಾಗಿದ್ದರೂ, ಇದು ಅಯೋಗ್ಯವಾಗಿದೆ ಎಂಬುದನ್ನು ಕಾಂಗ್ರೆಸ್ ದೃಢವಾಗಿ ಏಕೆ ಹೇಳುತ್ತಿಲ್ಲ ? ಅವರು ಅಥವಾ ಇತರ ಯಾವುದೇ ಕಾಂಗ್ರೆಸ್ ನೇತಾರರು ಇತರ ಧರ್ಮೀಯರ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ನೀಡಿದ್ದರೆ ಕಾಂಗ್ರೆಸ್ ಹಾಗೆಯೇ ಉತ್ತರಿಸುತ್ತಿತ್ತೇ ? ಎಂಬುದನ್ನು ಕಾಂಗ್ರೆಸ್ ಹೇಳಬೇಕು ! – ಸಂಪಾದಕರು) ಈ ಹಿನ್ನೆಲೆಯಲ್ಲಿ ೨೦೧೭ರಲ್ಲಿ ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮೀ ನಿಶ್ಚಲಾನಂದ ಸರಸ್ವತಿಯವರು ‘ಹಿಂದೂ ಶಬ್ದವು ವೈದಿಕ ಹಾಗೂ ಪೌರಾಣಿಕವಾಗಿದೆ’ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಕ್ರೈಸ್ತ ಹಾಗೂ ಪೈಗಂಬರರಿಗಿಂತಲೂ ಮೊದಲೇ ಹಿಂದೂ ಶಬ್ದದ ಉಲ್ಲೇಖವಿದೆ !
ಶಂಕರಾಚಾರ್ಯರು ಮಾತನಾಡುತ್ತ, ಹಿಂದೂ ಶಬ್ದದ ವಿಚಾರ ಮಾಡಿದರೆ ಅದು ಏಸುಕ್ರಿಸ್ತ ಹಾಗೂ ಮಹಂಮದ ಪೈಗಂಬರರಿಗಿಂತಲೂ ಮೊದಲೇ ಇದೆ. ಅಲೆಕ್ಝೆಂಡರ್‌ನು ಭಾರತಕ್ಕೆ ಬಂದಾಗ ಅವನು ಭಾರತವನ್ನು ‘ಸಿಂಧುಸ್ತಾನ’ ಎಂದು ಕರೆದಿದ್ದನು. ಇಷ್ಟೇ ಅಲ್ಲ, ‘ಹಿಂದೂ’ ಶಬ್ದದ ಉಲ್ಲೇಖವು ಪುರಾಣಗಳಲ್ಲಿಯೂ ಇದೆ. ಅನೇಕ ಪ್ರಾಚೀನ ಗ್ರಂಥಗಳು ಈ ಶಬ್ದದ ಪುಷ್ಟೀಕರಣ ಮಾಡುತ್ತವೆ, ಎಂದು ಹೇಳಿದ್ದರು.
ಅಂತೂ ಕೊನೆಯಲ್ಲಿ ಸತೀಶ ಜಾರಕೀಹೋಳಿ ತಮ್ಮ ಹಿಂದೂ ವಿರೋಧಿ ಹೇಳಿಕೆಯನ್ನು ಹಿಂಪಡೆದರು