ಸತೀಶ ಜಾರಕಿಹೊಳಿ ಇವರ ಹೇಳಿಕೆಯ ಬಗ್ಗೆ ರಾಹುಲ ಗಾಂಧಿ ಏಕೆ ಮೌನ ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರ ಪ್ರಶ್ನೆ

ಉಡುಪಿ – ಕರ್ನಾಟಕದ ಕಾಂಗ್ರೆಸ್ ಪ್ರದೇಶ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸತೀಶ ಜಾರಕಿಹೊಳಿ ಇವರು ‘ಹಿಂದೂ’ ಈ ಪದ ವಿದೇಶಿಯಾಗಿದ್ದು ಅದರ ಅರ್ಥ ಕೊಳಕು ಎಂದಾಗಿದೆ’, ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ಪ್ರತಿಕ್ರಿಸುತ್ತಾ, ಕಾಂಗ್ರೆಸ್ಸಿನ ಜಾರಕಿಹೊಳಿ ಅವರ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕು. ಈ ಹೇಳಿಕೆಯ ಬಗ್ಗೆ ರಾಹುಲ ಗಾಂಧಿ ಮತ್ತು ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ಸಿನ ಇತರ ನಾಯಕರು ಇಲ್ಲಿಯವರೆಗೆ ಏಕೆ ಮೌನವಹಿಸಿದ್ದಾರೆ ? ಈ ಹೇಳಿಕೆ ಅಲ್ಪಸಂಖ್ಯಾತರ ಮತಕ್ಕಾಗಿ ಮಾಡಲಾಗಿದೆ. ಜಾರಕಿಹೊಳಿ ಇವರಲ್ಲಿ ಹಿಂದೂ ಧರ್ಮದ ಬಗ್ಗೆ ಪೂರ್ಣವಾದ ಜ್ಞಾನವಿಲ್ಲ. ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

ಜಾರಕಿಹೊಳಿ ಇವರ ಹೇಳಿಕೆ ವೈಯಕ್ತಿಕ ! – ಕಾಂಗ್ರೆಸ

ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರು, ಜಾರಕಿಹೊಳಿ ಇವರ ಹೇಳಿಕೆ ವೈಯಕ್ತಿಕವಾಗಿದೆ. (ಪ್ರಕರಣ ತಮ್ಮನ್ನು ಸುತ್ತಿಕೊಳ್ಳುತ್ತದೆ ಎಂದಾಗ ಕಾಂಗ್ರೆಸ್ಸಿನವರು ಯಾವಾಗಲೂ ಈ ರೀತಿ ವರ್ತಿಸುತ್ತಾರೆ. ಜನರಿಗೆ ಕಾಂಗ್ರೆಸ್ಸಿನ ಕಪಟತನ ತಿಳಿದಿದೆ ! – ಸಂಪಾದಕರು) ಈ ಹೇಳಿಕೆಯ ಬಗ್ಗೆ ಅವರಲ್ಲಿ ಸ್ಪಷ್ಟೀಕರಣ ಕೇಳಲಾಗಿದೆ ಎಂದು ಹೇಳಿದರು.