‘ಹಿಂದೂ’ ಶಬ್ದದ ಅಪಮಾನ ಮಾಡಿದ ಸತೀಶ್ ಜಾರಕಿಹೊಳಿ ಇವರು ಹಿಂದೂಗಳ ಕ್ಷಮೆಯಾಚಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ ಆಗ್ರಹ

‘ಹಿಂದೂ ಶಬ್ದ ಅಶ್ಲೀಲ’ ಎಂದು ಹೇಳುವ ಕಾಂಗ್ರೆಸ್ ಹಿಂದೂಗಳ ಮತ ಬೇಡ ಎಂದು ಹೇಳುವುದೇ ?

ಶ್ರೀ. ಮೋಹನ ಗೌಡ

ಕಾಂಗ್ರೆಸ್ ನ ಮಾಜಿ ಸಚಿವ ಸತೀಶ್ ಜಾರಕಿಹೊಳಿಯವರು, ಹಿಂದೂ ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ ಪದವು ಪರ್ಷಿಯನ್ ಪದವಾಗಿದ್ದು ಭಾರತೀಯ ಪದವೇ ಅಲ್ಲ, ಎಲ್ಲಿಂದಲೋ ಬಂದಿರುವ ಹಿಂದೂ ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ’ ಎಂದು ಹಿಂದೂ ಧರ್ಮವನ್ನು ಟೀಕಿಸಿದ್ದಾರೆ. ಸತೀಶ್ ಜಾರಕಿಹೊಳಿ ಇವರ ಈ ದ್ವೇಷಪೂರಿತ ಮಾತುಗಳನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಹಿಂದೂ ಧರ್ಮವು ಲಕ್ಷಾಂತರ ವರ್ಷಗಳ ಇತಿಹಾಸವನ್ನು ಹೊಂದಿದೆ. ಸಿಂಧು ನದಿಯಿಂದ ಹಿಂದೂ ಶಬ್ದ, ಹಿಂದೂ ಸಂಸ್ಕೃತಿಯು ಬಂದಿದೆ. ನಮ್ಮ ಋಗ್ವೇದ, ಅಥರ್ವವೇದ, ಮೇರುತಂತ್ರ ಮುಂತಾದ ಸಾವಿರಾರು ವರ್ಷಗಳ ಹಿಂದೆ ರಚಿತವಾದ ಪ್ರಾಚೀನ ಧರ್ಮ ಗ್ರಂಥಗಳಲ್ಲಿ ಹಿಂದೂ ಶಬ್ದದ ಉಲ್ಲೇಖವಿದೆ. ಮೇರುತಂತ್ರದಲ್ಲಿ ‘ಹಿನಾನಿ ಗುಣಾನಿ ದೂಷಯಿತಿ ಇತಿ ಹಿಂದೂ’ ಅಂದರೆ ‘ಹೀನ ದುರ್ಗುಣಗಳನ್ನು ತ್ಯಜಿಸಿದವನೇ ಹಿಂದೂ’ ಎಂಬ ಉಲ್ಲೇಖ ಮಾಡಲಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯ ಸಹ ‘ಹಿಂದೂ ಎಂದರೆ ಒಂದು ಜೀವನ ಪದ್ಧತಿ’ ಎಂದು ಆದೇಶ ನೀಡಿದೆ. ಇಂತಹ ಮಹಾನ್ ಧರ್ಮವನ್ನು ‘ಅಶ್ಲೀಲವಿದೆ’ ಎಂದು ಹೇಳುವವರು ‘ಮುಸ್ಲಿಂ ಮತ್ತು ಕ್ರೈಸ್ತ ಮತಗಳು ಭಾರತದ ಮೂಲ’ ಎಂದು ಹೇಳುವುದು ಇವರ ಹಿಂದೂ ಧ್ವೇಷವನ್ನು ತೋರಿಸುತ್ತದೆ. ಹಿಂದೂ ಧರ್ಮದ ಮೂಲದ ಬಗ್ಗೆ ಮಾತನಾಡುವ ಮೊದಲು ನಿಮ್ಮ ಅಗ್ರನಾಯಕಿ ಸೋನಿಯಾ ಗಾಂಧಿಯ ಮೂಲದ ಬಗ್ಗೆ ಮಾತನಾಡಿ. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ಮೇಲೆ ರಾಹುಲ್ ಗಾಂಧಿ ಯಾಕೆ ಚುನಾವಣೆ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ ? ಹಿಂದೂ ಶಬ್ದದ ಮೂಲದ ಬಗ್ಗೆ ಆಕ್ಷೇಪ ಇರುವ ನೀವು ಹಿಂದುಗಳ ಮತ ನಮಗೆ ಬೇಡ ಎಂದು ಹೇಳುವ ಧೈರ್ಯವಿದೆಯೇ ?

ಸತೀಶ್ ಜಾರಕೀಹೊಳಿಯವರು ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮಯಾಚಿಸಬೇಕು, ಇಲ್ಲದಿದ್ದರೆ ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ರಾಜ್ಯವ್ಯಾಪಿ ಆಂದೋಲನ ಮಾಡಲಾಗುವುದು’ ಎಂದು ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಸುತ್ತದೆ.