ಶ್ರೀಲಂಕೆಯ ನೌಕಾಪಡೆಯಿಂದ ೧೫ ಮೀನುಗಾರರ ಬಂಧನ

ಕೋಲಂಬೊ (ಶ್ರೀಲಂಕಾ)– ಶ್ರೀಲಂಕಾದ ಸಾಗರದ ಗಡಿಯನ್ನು ಉಲ್ಲಂಘಿಸಿ ಮೀನುಗಾರಿಕೆ ಮಾಡಿರುವ ಪ್ರಕರಣದಲ್ಲಿ ಶ್ರೀಲಂಕಾ ನೌಕಾಪಡೆಯು ೧೫ ಮೀನುಗಾರರನ್ನು ಬಂಧಿಸಿದೆ. ಹಾಗೂ ಅವರ ೨ ಸ್ವಯಂ ಚಾಲಿತ ದೋಣಿಗಳನ್ನು ಕೂಡ ಜಪ್ತಿ ಪಡಿಸಿಕೊಂಡಿದೆ. ಮನ್ನಾರ ದ್ವೀಪದ ವಾಯುವ್ಯ ದಡದಲ್ಲಿರುವ ತಲೈಮನ್ನಾರನಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಸಂಪಾದಕೀಯ ನಿಲುವು

ಭಾರತೀಯ ಮೀನುಗಾರರನ್ನು ಯಾವಾಗಲೂ ಸಾಗರ ಸೀಮೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಇದಕ್ಕಾಗಿ ಭಾರತ ಸರಕಾರವು ಈ ಮೀನುಗಾರರಿಗೆ ಭಾರತದ ಗಡಿ ಭಾಗ ಗಮನಕ್ಕೆ ಬರಲು ಸೂಕ್ತ ಪರ್ಯಾಯಗಳನ್ನು ಮಾಡುವುದು ಅವಶ್ಯಕತೆಯಿದೆ.