ಉತ್ತರಪ್ರದೇಶದಲ್ಲಿನ ಶಾಹಜಾಪೂರ ಜಿಲ್ಲೆಯಲ್ಲಿ ಹಿಂದೂ ಹುಡುಗಿಯನ್ನು ಮತಾಂತರಿಸಿ ಬಲವಂತವಾಗಿ ವಿವಾಹ ಮಾಡಿಕೊಂಡ ಮತಾಂಧ!

ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ಇನ್ನೊಂದು ಘಟನೆ ಬೆಳಕಿಗೆ!

(ಎಡಬದಿಗೆ) ಆರೋಪಿ ಕಫೀಲ್ ಅಹಮದ್, ಅವನ ತಾಯಿ ಜಾಹಿದಾ ಬೇಗಮ್ ಮತ್ತು ಅಣ್ಣ ಫರೀದ್ ಅಹ್ಮದ್

ಶಾಹಜಹಾಪುರ (ಉತ್ತರಪ್ರದೇಶ): ಇಲ್ಲಿಯ ಕಫೀಲ್ ಅಹಮದ್ ಎಂಬ ಮತಾಂಧ ಮುಸಲ್ಮಾನನು ಒಬ್ಬ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ನಂತರ ಆಕೆಯ ಜೊತೆ ಬಲವಂತವಾಗಿ ವಿವಾಹ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಹುಡುಗಿಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಯ ವಿರುದ್ಧ ಹೊಡೆತ, ಬಲಾತ್ಕಾರ ಮತ್ತು ಹುಡುಗಿಯ ಜೊತೆಗೆ ಅನೈಸರ್ಗಿಕ ಸಂಬಂಧ ಇಟ್ಟುಕೊಂಡಿರುವ ಆರೋಪ ಮಾಡಿದ್ದಾಳೆ. ಆರೋಪಿ ಕಫೀಲ್ ಅಹಮದ ಇವನಿಂದ ನಡೆಯುತ್ತಿರುವ ಲೈಂಗಿಕ ಶೋಷಣೆಗೆ ಬೇಸತ್ತು ತನ್ನ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಹ ಸಂತ್ರಸ್ತ ಹುಡುಗಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ ಕಫಿಲ್ ಅಹಮದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವಿಷಯವಾಗಿ ದೂರಿನಲ್ಲಿ, ಕಫೀಲ್ ಅಹಮದ ಇವನು ಸಂತ್ರಸ್ತ ಹುಡುಗಿಯ ಅಶ್ಲೀಲ ವಿಡಿಯೋ ತಯಾರಿಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದನು. ಒಂದು ದಿನ ಕಫಿಲನು ಸಂತ್ರಸ್ತ ಹುಡುಗಿಯನ್ನು ಲಕ್ಷ್ಮಣಪೂರಿಗೆ (ಲಖಾನೌ) ಕರೆದುಕೊಂಡು ಹೋಗಿದ್ದನು. ಅದರ ನಂತರ ಸಪ್ಟೆಂಬರ. ೫.೨೦೨೨ ರಂದು ಆಕೆಯನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಿದನು . ಅದರ ನಂತರ ಆಕೆಯ ಜೊತೆಗೆ ಬಲವಂತವಾಗಿ ಮದುವೆ ಮಾಡಿಕೊಂಡನು. ನಂತರ ಬಲವಂತವಾಗಿ ಅನೇಕ ಬಾರಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಇದರ ಜೊತೆಗೆ ಸಂತ್ರಸ್ತೆಗೆ ಹಿಗ್ಗಾಮುಗ್ಗ ಥಳಿಸುತ್ತಿದ್ದನು.

ಈ ದೂರಿನಲ್ಲಿ ಸಂತ್ರಸ್ತೆಯ ತಾಯಿ ಇನ್ನೊಂದು ದೊಡ್ಡ ಆರೋಪ ಮಾಡಿದ್ದಾಳೆ, ಕಾಫಿಲ್ ಅಹಮದ್ ಇವನ ಸೊಸೆಯ ಆತ್ಮಹತ್ಯೆಗೂ ಇವನೇ ಜವಾಬ್ದಾರು. ಆರೋಪಿಯಿಂದ ನಡೆಯುವ ಲೈಂಗಿಕ ಶೋಷಣೆಗೆ ಬೇಸತ್ತು ಅವನ ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೂಡ ಆಕೆ ದೂರಿನಲ್ಲಿ ಮಾಡಿದ್ದಾಳೆ. ತನ್ನ ಮಗಳ ಶೋಷಣೆಯಲ್ಲಿ ಕಫೀಲ್ ಅಹಮದನ ತಾಯಿ ಮತ್ತು ಅವನ ಸಹೋದರ ಫರೀದ್ ಅಹ್ಮದ್ ಇವರು ಬೆಂಬಲಿಸಿದ್ದಾರೆ ಎಂದು ಕೂಡ ಈ ದೂರಿನಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿನ ಲವ್ ಜಿಹಾದ ವಿರೋಧಿ ಕಾನೂನು ಇರುವಾಗ ಕೂಡ ಪ್ರತಿ ದಿನ ಲವ್ ಜಿಹಾದಿನ ಘಟನೆಗಳಾಗುತ್ತಿರುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! ಈ ಮತಾಂಧರು ಪೊಲೀಸರಿಗೆ ಮತ್ತು ಸರಕಾರಕ್ಕೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಈಗ ಸರಕಾರವು ಲವ್ ಜಿಹಾದ್ ವಿರುದ್ಧ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ.