ಬಿಹಾರಿನಲ್ಲಿ ಗುಂಡು ಹಾರಿಸಿ ಭಾಜಪದ ನೇತಾರನ ಹತ್ಯೆ

  • ಜನರಿಂದ ರಸ್ತೆ ತಡೆ ಆಂದೋಲನ

  • ಬಿಹಾರದಲ್ಲಿ ಪುನಃ ಅರಾಜಕತೆ !

ಎಡಬದಿಗೆ ಭಾಜಪದ ಸ್ಥಳೀಯ ನೇತಾರರಾದ ಸಂಜೀವ ಮಿಶ್ರಾ

ಕಟಿಹಾರ (ಬಿಹಾರ) – ಇಲ್ಲಿನ ಭಾಜಪದ ಸ್ಥಳೀಯ ನೇತಾರರಾದ ಸಂಜೀವ ಮಿಶ್ರಾರವರನ್ನು ಅಜ್ಞಾತರು ಅವರ ಮನೆಗೆ ನುಗ್ಗಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಆರೋಪಿಯು ದ್ವಿಚಕ್ರವಾಹನದಿಂದ ಬಂದಿದ್ದನು. ಪೊಲೀಸರು ಹಳೆಯ ದ್ವೇಷದಿಂದ ಈ ಹತ್ಯೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಹತ್ಯೆಯ ಘಟನೆಯ ನಂತರ ಸ್ಥಳೀಯರು ರಸ್ತೆತಡೆ ಮಾಡಿ ಆಂದೋಲನ ಮಾಡಿದರು. ಇದರಿಂದ ಇಲ್ಲಿ ಒತ್ತಡ ನಿರ್ಮಾಣವಾಗಿದೆ. ಪೊಲೀಸರು ಇಲ್ಲಿ ಬಂದೋಬಸ್ತು ಇಟ್ಟಿದ್ದಾರೆ.