ಶಿಮ್ಲಾ – ಪ್ರಸ್ತುತ ಗುಜರಾತ್ನಂತೆ ಹಿಮಾಚಲ ಪ್ರದೇಶದಲ್ಲಿಯೂ ಕೂಡ ವಿಧಾನಸಭೆಯ ಚುನಾವಣೆ ಬರುವುದಿದೆ. ಈ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾಜಪ ಅಧಿಕಾರಕ್ಕೆ ಬಂದರೆ, ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡುವುದೆಂದು ಜನರಿಗೆ ಭರವಸೆ ನೀಡಿದೆ. ಗುಜರಾತ ರಾಜ್ಯದಲ್ಲಿ ಈ ಕಾನೂನು ಜಾರಿ ಮಾಡುವುದಕ್ಕಾಗಿ ಒಂದು ಸಮಿತಿಯ ಸ್ಥಾಪನೆ ಕೂಡ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕೆಲವು ದಿನಗಳ ಹಿಂದೆ ಗುಜರಾತ್ನ ಗೃಹ ಸಚಿವ ಹರ್ಷ ಸಂಘವಿ ಇವರು ನೀಡಿದ್ದರು. ಭಾಜಪದ ಅಧಿಕಾರ ಇರುವ ಹೆಚ್ಚಿನ ರಾಜ್ಯ ಸರಕಾರಗಳು ಈ ಕಾನೂನನ್ನು ಬೆಂಬಲಿಸಿದೆ.
#HimachalPradeshelections2022: Government committed to implement #Uniformcivilcode, says CM #JairamThakur#HimachalElection2022 #HimachalElections https://t.co/QW9tkYGY7Q
— India TV (@indiatvnews) November 6, 2022
ಸಂಪಾದಕೀಯ ನಿಲುವುಒಂದೊಂದು ರಾಜ್ಯದಲ್ಲಿ ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬದಲು ಕೇಂದ್ರದಲ್ಲಿ ಭಾಜಪ ಸರಕಾರದಿಂದ ಸಂಪೂರ್ಣ ದೇಶದಲ್ಲಿ ಜಾರಿ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು, ಹಿಂದೂ ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ ! |