ತಿರುಪತಿ ದೇವಸ್ಥಾನ ಘೋಷಿಸಿರುವ ಒಟ್ಟು ಸಂಪತ್ತು ೨ ಲಕ್ಷ ೨೬ ಸಾವಿರ ಕೋಟಿ ರೂಪಾಯಿ !

೧೦.೩ ಟನ್ ಚಿನ್ನ ಮತ್ತು ೧೬ ಸಾವಿರ ಕೋಟಿ ಬ್ಯಾಂಕಿನಲ್ಲಿ ಜಮೆ !

ತಿರುಪತಿ (ಆಂಧ್ರಪ್ರದೇಶ) – ತಿರುಮಲ ತಿರುಪತಿ ದೇವಸ್ಥಾನಂ ನಿಂದ ಮೊಟ್ಟಮೊದಲು ಬಾರಿ ದೇವಸ್ಥಾನದ ಒಟ್ಟು ಆಸ್ತಿಯನ್ನು ಘೋಷಿಸಿದೆ. ಇದರಲ್ಲಿ ದೇವಸ್ಥಾನದ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ೫ ಸಾವಿರ ೩೦೦ ಕೋಟಿ ರೂಪಾಯಿ ಮೌಲ್ಯದ ೧೦.೩ ಟನ್ ಚಿನ್ನ ಮತ್ತು ೧೫ ಸಾವಿರ ೯೩೮ ಕೋಟಿ ನಗದು ಜಮ ಇರುವುದಾಗಿ ಹೇಳಲಾಗಿದೆ. ದೇವಸ್ಥಾನದ ಒಟ್ಟು ಆಸ್ತಿ ೨ ಲಕ್ಷ ೨೬ ಸಾವಿರ ಕೋಟಿಯಷ್ಟು ಇದೆ.

೧. ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಎ.ವಿ. ಧರ್ಮ ರೆಡ್ಡಿಯವರು, ೨೦೧೯ ರಲ್ಲಿ ಅನೇಕ ಬ್ಯಾಂಕ್‌ಗಳಲ್ಲಿ ೧೩ ಸಾವಿರ ೨೫ ಕೋಟಿ ನಗದು ಇತ್ತು, ಅದು ಹೆಚ್ಚಾಗಿ ೧೫ ಸಾವಿರ ೯೩೮ ಕೋಟಿ ಆಗಿದೆ. ಕಳೆದ ೩ ವರ್ಷದಲ್ಲಿ ಹೂಡಿಕೆ ಮಾಡಿರುವ ಹಣ ೨ ಸಾವಿರ ೯೦೦ ಕೋಟಿ ರೂಪಾಯಿ ಏರಿಕೆಯಾಗಿದೆ ಎಂದು ಹೇಳಿದರು.

೨. ದೇವಸ್ಥಾನದ ಪರಿಸರದಲ್ಲಿ ಮತ್ತು ಸುತ್ತ ಮುತ್ತಲಿನ ಪರಿಸರನಲ್ಲಿ ೭ ಸಾವಿರ ೧೨೩ ಎಕರೆಯಲ್ಲಿ ಹರಡಿರುವ ಒಟ್ಟು ೯೬೦ ಜಮೀನು ಇದೆ.

೩. ದೇವಸ್ಥಾನದ ಅಧ್ಯಕ್ಷ ಮತ್ತು ಮಂಡಳಿಯವರು ಆಂಧ್ರಪ್ರದೇಶ ಸರಕಾರಿ ‘ಶೇರ್ಸ್’ನಲ್ಲಿ ನಿಧಿ ಹೂಡಿಕೆ ಮಾಡಿದೆ, ಎಂಬ ಆರೋಪ ತಳ್ಳಿ ಹಾಕಿತು. ದೇವಸ್ಥಾನಂ, ಈ ರೀತಿಯಲ್ಲಿ ನಾವು ಏನನ್ನು ಮಾಡಿಲ್ಲ. ಉಳಿದಿರುವ ಆಸ್ತಿ ‘ಶೆಡ್ಯೂಲ್ಡ್ ಬ್ಯಾಂಕ್’ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದೆ.

೪. ದೇವಸ್ಥಾನಂದಿಂದ ಪ್ರಸಿದ್ಧಗೊಳಿಸಲಾಗಿರುವ ಕರಪತ್ರದಲ್ಲಿ, ಭಕ್ತರನ್ನು ವಿನಂತಿಸುತ್ತಾ, ಅವರು ಈ ರೀತಿಯ ಸುಳ್ಳು ಪ್ರಚಾರ ನಂಬಬಾರದು. ಬ್ಯಾಂಕ್‌ನಲ್ಲಿ ಜಮಾ ಇರುವ ನಗದು ಮತ್ತು ಚಿನ್ನದ ಹೂಡಿಕೆ ಅತ್ಯಂತ ಪಾರದರ್ಶಕ ಮತ್ತು ಯೋಗ್ಯ ಪದ್ಧತಿಯಿಂದ ಮಾಡಲಾಗಿದೆ ಎಂದು ಹೇಳಿದರು.