ಭಾಜಪದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣ ಪಿ.ಎಫ್.ಐ. ನ ಮೂವರ ಬಂಧನ

ಮೈಸೂರು – ಭಾರತೀಯ ಜನತಾ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ(ಪಿ.ಎಫ್.ಐ.)ನ ೩ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸುಳ್ಯದ ಶಫೀ ಬೆಳ್ಳಾರೆ, ಇಕಬಾಲ ಬೆಳ್ಳಾರೆ ಮತ್ತು ಇಬ್ರಾಹಿಂ ಶಾಹ ಇವರನ್ನು ಬಂಧಿಸಲಾಗಿದೆ. ಇಕಬಾಲ ಬೆಳ್ಳಾರೆ ಇವನು ಇಲ್ಲಿಯ ಬೆಳ್ಳಾರೆ ಗ್ರಾಮ ಪಂಚಾಯತಿ ಸದಸ್ಯನಾಗಿದ್ದಾನೆ ಹಾಗೂ ಶಫಿ ಬೆಳ್ಳಾರೆ ಪಿ.ಎಫ್.ಐ. ನ ರಾಜಕೀಯ ಶಾಖೆ ‘ಸೊಶಾಲಿಸ್ಟ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ರಾಜ್ಯ ಸಚಿವನಾಗಿದ್ದಾನೆ.

ನೆಟ್ಟಾರು ಇವರ ಹತ್ಯೆಯ ಪ್ರಕರಣದಲ್ಲಿ ಪಿ.ಎಫ್.ಐ. ನ ಮಹಮ್ಮದ್ ಮುಸ್ತಫ, ತುಫೈಲ್, ಉಮರ್ ಫಾರೂಖ ಮತ್ತು ಅಬೂ ಬಕರ್ ಸಿದ್ದಿಕೀ ಇವರನ್ನು ಹುಡುಕಲಾಗಿತ್ತಿದೆ. ಇದರಲ್ಲಿ ಮಹಮ್ಮದ್ ಮುಸ್ತಫ ಮತ್ತು ತುಫೈಲ್ ಇವರ ಮಾಹಿತಿ ನೀಡುವವರಿಗೆ ೫ ಲಕ್ಷ ಹಾಗೂ ಉಮರ್ ಫಾರೂಕ್ ಇವನ ಮಾಹಿತಿ ನೀಡುವವರಿಗೆ ೨ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು, ಎನ್.ಐ.ಎ. ಘೋಷಿಸಿದೆ.

ಜುಲೈ ೨೬, ೨೦೨೨ ರಂದು ಪ್ರವೀಣ ನೆಟ್ಟಾರು ಇವರನ್ನು ಬೆಳ್ಳಾರೆಯಲ್ಲಿನ ಅವರ ಅಂಗಡಿಯ ಹೊರಗೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಝಾಕಿರ್ ಮತ್ತು ಶಫೀಕ್ ಇವರನ್ನು ಈಗಾಗಲೇ ಬಂಧಿಸಲಾಗಿದೆ.