ಭ್ರಷ್ಟಾಚಾರ ಇದು ಒಂದು ಕೆಟ್ಟ ವರ್ತನೆಯಾಗಿದ್ದು ಅದರಿಂದ ದೂರ ಉಳಿಯಬೇಕು ! – ಪ್ರಧಾನಿ ಮೋದಿ

ನವದೆಹಲಿ – ಭ್ರಷ್ಟಾಚಾರ ಇದು ಒಂದು ಕೆಟ್ಟ ವರ್ತನೆಯಾಗಿದ್ದು ಅದರಿಂದ ಎಲ್ಲರೂ ದೂರ ಉಳಿಯಬೇಕು. ಕಳೆದ ೮ ವರ್ಷದಲ್ಲಿ ನಾವು ಈ ಸಂಪೂರ್ಣ ವ್ಯವಸ್ಥೆ ‘ಅಭಾವ’ ಮತ್ತು ‘ಒತ್ತಡ’ ಇದರಿಂದ ಸ್ವತಂತ್ರಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ, ಎಂದು ಪ್ರಧಾನಿ ಮೋದಿ ಅವರು ಇಲ್ಲಿಯ ವಿಜ್ಞಾನ ಭವನದಲ್ಲಿ ಭ್ರಷ್ಟಾಚಾರ ವಿರೋಧಿ ದೂರು ನೀಡುವವರಿಗಾಗಿ ಕೇಂದ್ರ ಜಾಗೃತ ಆಯೋಗದ ಹೊಸ ಜಾಲತಾಣದ ಉದ್ಘಾಟನೆ ಮಾಡುವಾಗ ಪ್ರತಿಪಾದಿಸಿದರು. ‘ಅಭಿವೃದ್ಧಿಶೀಲ ಭಾರತದಲ್ಲಿ ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸ್ವಲ್ಪವೂ ನಡೆಯಬಾರದು’ ಎಂದೂ ಸಹ ಮೋದಿಯವರು ಈ ಸಮಯದಲ್ಲಿ ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಮಾತು ಮುಂದುವರಿಸಿ, ಭ್ರಷ್ಟ ಜನರಿಗೆ ಯಾವುದೇ ರೀತಿಯ ಸವಲತ್ತು ನೀಡಬಾರದು. ಅವರಿಗೆ ಯಾವುದೇ ರಾಜಕೀಯ ಅಥವಾ ಸಾಮಾಜಿಕ ರಕ್ಷಣೆ ಸಿಗಬಾರದು. ಭ್ರಷ್ಟಾಚಾರಕ್ಕೆ ಸೊಪ್ಪು ಹಾಕುವ ಸರಕಾರಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ನಾವು ಈಗ ಪ್ರಕ್ರಿಯೆ ನಿಶ್ಚಿತಗೊಳಿಸಬೇಕು ಎಂದು ಹೇಳಿದರು.