ಕೊರೊನಾದ ಹೊಸ ಅಲೆ ಬರುವ ಸಾಧ್ಯತೆ!

ನವದೆಹಲಿ – ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ಸಾಂಕ್ರಾಮಿಕ ಮತ್ತು ಇದರಿಂದ ಆಗುವ ಸಾವಿನ ದರ ಅತ್ಯಲ್ಪವಾಗಿದ್ದರೂ, ಈಗ ಓಮಿಕ್ರಾನ ರೋಗಾಣುವಿನ ಹೊಸ ಪ್ರಕಾರ ‘ಎಕ್ಸ್.ಬಿ.ಬಿ.’ ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ಕೊರೊನಾ ಸಾಂಕ್ರಾಮಿಕ ಪುನಃ ವೇಗವಾಗಿ ಹೆಚ್ಚುತ್ತಿದ್ದು, ಇದರಿಂದ ಕೊರೊನಾದ ಹೊಸ ಅಲೆ ಬರುವ ಸಾಧ್ಯತೆ ಇದೆ ಎನ್ನುವುದು ತಜ್ಞರ ಹೇಳಿಕೆಯಾಗಿದೆ.

೧. ವಿಶ್ವ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಇವರ ಅಭಿಪ್ರಾಯದಂತೆ, ಕೆಲವು ದೇಶಗಳಲ್ಲಿ ಪುನಃ ಮತ್ತೊಮ್ಮೆ ಕೊರೊನಾ ಅಲೆ ಬರುವ ಸಾಧ್ಯತೆಯಿದೆ. ಇದರ ಹಿಂದೆ ಓಮಿಕ್ರಾನ್ ನ ಹೊಸ ಪ್ರಕಾರ ‘ಎಕ್ಸ್.ಬಿ.ಬಿ.’ ಇರುವ ಸಾಧ್ಯತೆಯಿದೆ; ಆದರೆ ‘ಡೆಲ್ಟಾ’ ರೋಗಾಣುವಿನಂತೆ ಅದು ಜೀವ ತೆಗೆಯುವಂತಹದ್ದಲ್ಲವೆಂದೂ ಅವರು ಹೇಳಿದರು. ಭಾರತೀಯ ತಜ್ಞರು ಅಭಿಪ್ರಾಯವೂ ಇದೇ ಆಗಿದೆ.

೨. ಯುರೋಪ, ಉತ್ತರ ಅಮೇರಿಕಾ ಮತ್ತು ಆಫ್ರಿಕಾ ಈ ಖಂಡಗಳಲ್ಲಿ ಓಮಿಕ್ರಾನ್ ‘ಬೀಕ್ಯೂ. ೧’ ಈ ಪ್ರಕಾರದಿಂದ ಕೊರೊನಾ ಸಾಂಕ್ರಾಮಿಕ ವೇಗವಾಗಿ ಹರಡುತ್ತಿದೆ.

೩. ಚೀನಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾದೇಶಗಳಂತಹ ಏಶಿಯಾ ದೇಶಗಳಲ್ಲಿ ‘ಎಕ್ಸ್.ಬಿ.ಬಿ.’ ಈ ರೋಗಾಣು ಪ್ರಕಾರದಿಂದ ಕೊರೊನಾ ರೋಗಿಗಳು ಹೆಚ್ಚುತ್ತಿದ್ದು, ಚೀನಾದ ಕೆಲವು ಪ್ರದೇಶಗಳಲ್ಲಿ ಪುನಃ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ.