ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವ ಬಗ್ಗೆ ವಿಚಾರ ಮಾಡಲು ಕೇಂದ್ರಸರಕಾರ ಕಾಲಾವಕಾಶವನ್ನು ಕೋರಿದೆ !

ಭಾರತದ ೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪ್ರಕರಣ

ನವ ದೆಹಲಿ – ಭಾರತದಲ್ಲಿರುವ ಇಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೇ, ಅಲ್ಲಿ ಅವರಿಗೆ ಅಲ್ಪಸಂಖ್ಯಾತರ ಸ್ಥಾನಮಾನವನ್ನು ನೀಡುವ ಕುರಿತು ವಿಚಾರ ಮಾಡಲು ಕೇಂದ್ರಸರಕಾರವು ಸರ್ವೋಚ್ಚ ನ್ಯಾಯಾಲಯದ ಬಳಿಕ ಮತ್ತಷ್ಟು ಕಾಲಾವಕಾಶವನ್ನು ಕೋರಿದೆ. ‘ಈ ವಿಷಯ ಸೂಕ್ಷ್ಮವಾಗಿದ್ದು, ಅದು ಸುದೀರ್ಘ ಪರಿಣಾಮ ಬೀರುವುದು’, ಎನ್ನುವುದು ಕೇಂದ್ರ ಸರಕಾರದ ಹೇಳಿಕೆಯಾಗಿದೆ. ನ್ಯಾಯಾವಾದಿ(ಶ್ರೀ) ಅಶ್ವಿನಿ ಉಪಾಧ್ಯಾಯ ಮತ್ತು ಇತರೆ ಅರ್ಜಿದಾರರ ಅರ್ಜಿಯ ಕುರಿತು ಅಕ್ಟೋಬರ ೩೧ ರಂದು ನ್ಯಾಯಾಲಯದಲ್ಲಿ ಸರಕಾರವು ನಾಲ್ಕನೇ ಪ್ರತಿಜ್ಞಾಪತ್ರವನ್ನು ಸಲ್ಲಿಸಿತು. ಇದರಲ್ಲಿ ಸರಕಾರವು, ಇಲ್ಲಿಯವರೆಗೆ ೧೪ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಿಂದ ಈ ಪ್ರಕರಣದ ಸಂಬಂಧಿಸಿದಂತೆ ಟಿಪ್ಪಣಿ ಬಂದಿದ್ದು, ಇತರೆ ರಾಜ್ಯಗಳಿಗೆ ಈ ಸಂದರ್ಭದಲ್ಲಿ ಜ್ಞಾಪಕ ಪತ್ರವನ್ನು ಕಳುಹಿಸಲಾಗಿದೆ. ಆಲಿಕೆಯ ಬಳಿಕ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಈ ಪ್ರಕರಣದಲ್ಲಿ ೬ ತಿಂಗಳುಗಳ ಕಾಲಾವಕಾಶವನ್ನು ನೀಡಿದೆ.

೧. ಇನ್ನೊಂದೆಡೆ ಅರ್ಜಿದಾರರು, ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯಿದೆ ೧೯೯೨’ರ ಅಡಿಯಲ್ಲಿ ಯಾವ ವಿಚಾರಣೆ ನಡೆಯುತ್ತಿದೆಯೋ, ಅದರಡಿಯಲ್ಲಿ ಯಾವುದೇ ರಾಜ್ಯಗಳಲ್ಲಿ ಯಾರಿಗೂ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಸಾಧ್ಯವಿಲ್ಲ.

೨. ಈ ಮೊದಲು ಸರ್ವೋಚ್ಚ ನ್ಯಾಯಾಲಯವು, ಧಾರ್ಮಿಕ ಅಥವಾ ಭಾಷೆಯ ಅಲ್ಪಸಂಖ್ಯಾತರಾಗಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ದೃಢಪಡಿಸದೇ, ರಾಜ್ಯಮಟ್ಟದಲ್ಲಿ ಕೈಕೊಳ್ಳಬೇಕು. ೧೯೯೩ ರ ಅಧಿಸೂಚನೆಯಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಮುಸಲ್ಮಾನ, ಸಿಖ್ಖರು, ಜೈನ, ಬೌದ್ಧ ಮತ್ತು ಪಾರ್ಸಿ ಸಮಾಜದವರನ್ನು ಅಲ್ಪಸಂಖ್ಯಾತರೆಂದು ಘೋಷಿಸಿತ್ತು. ಈ ಅರ್ಜಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಇದನ್ನು ದೃಢಪಡಿಸುವಂತೆ ಮನವಿಯನ್ನು ಮಾಡಿದೆ.

ಈ ಸ್ಥಳದಲ್ಲಿ ಹಿಂದೂ ಅಲ್ಪಸಂಖ್ಯಾತರಿದ್ದಾರೆ !

ಅರ್ಜಿದಾರರು, ಲಡಾಖನಲ್ಲಿ ಶೇ. ೧ರಷ್ಟು ಹಿಂದೂಗಳಿದ್ದಾರೆ. ಮಿಝೋರಾಂನಲ್ಲಿ ಶೇ. ೨.೭೫ ರಷ್ಟು, ಲಕ್ಷ್ಯದ್ವೀಪ ಶೇ.೨.೭೭, ಕಾಶ್ಮೀರ ಶೇ. ೪ ರಷ್ಟು, ನಾಗಾಲ್ಯಾಂಡ ಶೇ. ೮.೭೪, ಮೇಘಾಲಯ ಶೇ. ೧೧.೫೨ ರಷ್ಟು, ಅರುಣಾಚಲ ಪ್ರದೇಶ ಶೇ. ೨೯ ರಷ್ಟು, ಪಂಜಾಬ ಶೇ. ೩೮.೪೯ ರಷ್ಟು ಹಾಗೂ ಮಣಿಪುರದಲ್ಲಿ ಶೇ. ೪೧.೨೯ ರಷ್ಟು ಹಿಂದೂಗಳು ವಾಸಿಸುತ್ತಿದ್ದಾರೆ.